ಅಮೃತಜಲವೆಂಬ ಗೊಬ್ಬರ

7
ಕೃಷಿ ಟಿಪ್ಸ್

ಅಮೃತಜಲವೆಂಬ ಗೊಬ್ಬರ

Published:
Updated:

10 ಕೆ.ಜಿ. ಗೋಮೂತ್ರ ಮತ್ತು 10 ಕೆ.ಜಿ. ಗೋಮಯವನ್ನು ಒಟ್ಟು ಸೇರಿಸಬೇಕು. ಇದಕ್ಕೆ ಅರ್ಧ ಕೆ.ಜಿ ಬೆಲ್ಲ ಸೇರಿಸಿ ಕಲಿಸಿ ಮಡಕೆಯೊಂದರಲ್ಲಿ ಹಾಕಿ ಹತ್ತು ದಿನ ಮುಚ್ಚಿಡಬೇಕು. ಬಳಿಕ ತೆಗೆದಾಗ ಇದು ಅಮೃತಜಲವಾಗುತ್ತದೆ. ಇದು ಉತ್ತಮ ಗೊಬ್ಬರ.

ಸಸ್ಯಗಳಿಗೆ ಬೇಕಾದ ಸೂಕ್ಷ್ಮಾಣು ಜೀವಿಗಳನ್ನು ಬೆಳೆಸುವಲ್ಲಿ ನೆರವಾಗುತ್ತದೆ. ಅದಕ್ಕೆ ನೂರು ಲೀಟರ್ ನೀರು ಸೇರಿಸಿ ಒಂದು ಎಕರೆ ಭೂಮಿಗೆ ಸಿಂಪಡಿಸಿದರೆ ಎರಡು ಪಟ್ಟು ಫಸಲು ಬರುತ್ತದೆ. ಇದಕ್ಕೆ 200 ಗ್ರಾಂ. ಜೇನು ತುಪ್ಪ, 200 ಗ್ರಾಂ ಶುದ್ಧ ತುಪ್ಪ ಹಾಗೂ 200 ಗ್ರಾಂ ಮೊಸರು ಸೇರಿಸಿದರೆ ಅಮೃತಜಲ ಸಾಂದ್ರತೆ ಹೆಚ್ಚಿ, ಗುಣ ಇನ್ನಷ್ಟು ಹೆಚ್ಚುತ್ತದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry