ಬ್ರೆಜಿಲ್ ಫುಟ್ಬಾಲ್ ತಂಡದ ಆಟಗಾರರು ಪ್ರಯಾಣಿಸುತ್ತಿದ್ದ ವಿಮಾನ ಪತನ

7

ಬ್ರೆಜಿಲ್ ಫುಟ್ಬಾಲ್ ತಂಡದ ಆಟಗಾರರು ಪ್ರಯಾಣಿಸುತ್ತಿದ್ದ ವಿಮಾನ ಪತನ

Published:
Updated:
ಬ್ರೆಜಿಲ್ ಫುಟ್ಬಾಲ್ ತಂಡದ ಆಟಗಾರರು ಪ್ರಯಾಣಿಸುತ್ತಿದ್ದ ವಿಮಾನ ಪತನ

ಕೊಲಂಬಿಯಾ: ಬ್ರೆಜಿಲ್ ಫುಟ್ಬಾಲ್ ತಂಡ ಚಾಪಿಕೊಯೆನ್ಸ್ ಆಟಗಾರರು ಪ್ರಯಾಣಿಸುತ್ತಿದ್ದ ವಿಮಾನ ಕೊಲಂಬಿಯಾದ ಲಾ ಯೂನಿಯನ್ ಎಂಬಲ್ಲಿ ಪತನವಾಗಿದೆ.

81 ಮಂದಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ವಿಮಾನ ಮಂಗಳವಾರ ಕೊಲಂಬಿಯಾದಲ್ಲಿ ಪತನವಾಗಿರುವ ಬಗ್ಗೆ ಕೊಲಂಬಿಯಾದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಮಾನದಲ್ಲಿ 9 ಸಿಬ್ಬಂದಿಗಳು ಇದ್ದರು ಎಂದು ಕೊಲಂಬಿಯಾದ ವಿಮಾನ ಸಂಸ್ಥೆಯ ಅಧಿಕಾರಿಗಳು ಹೇಳಿದ್ದಾರೆ.

ಈ ಅವಘಡದಲ್ಲಿ ಕನಿಷ್ಠ 25 ಮಂದಿ ಸಾವಿಗೀಡಾಗಿದ್ದು, 6 ಮಂದಿ ಬದುಕುಳಿದಿರುವ ಸಾಧ್ಯತೆ ಇದೆ ಎಂದು ಮೇಯರ್ ಫೆಡರಿಕೋ ಗುಟೆರೇಜ್ ಹೇಳಿದ್ದಾರೆ.

ಘಟನಾ ಸ್ಥಳದಲ್ಲಿ ಹೆಲಿಕಾಪ್ಟರ್, ರೆಡ್ ಕ್ರಾಸ್, ಅಗ್ನಿ ಶಾಮಕ ದಳ, ಸ್ಥಳೀಯ ಪೊಲೀಸರು ಮತ್ತು ರಕ್ಷಣಾ ದಳದ ಕಾರ್ಯಕರ್ತರು ಶೋಧ ಕಾರ್ಯ ಮುಂದುವರಿಸಿದ್ದಾರೆ.

ವಿಮಾನ ಸಂಪೂರ್ಣವಾಗಿ ಹಾನಿಯಾಗಿದ್ದು, ಮಂದ ಬೆಳಕಿನಿಂದಾಗಿ ರಕ್ಷಣಾ ಕಾರ್ಯಗಳಿಗೆ ಅಡಚಣೆಯುಂಟಾಗಿದೆ.

ಬ್ರೆಜಿಲ್ ದೇಶದ ಫಸ್ಟ್ ಡಿವಿಷನ್‍ನ  ಭಾಗವಾಗಿರುವ ಚಾಪಿಕೊಯೆನ್ಸ್ ತಂಡ ಕೊಪ ಸುಡಾಮೆರಿಕಾ  ಫೈನಲ್ ಪಂದ್ಯದಲ್ಲಿ ಅಟ್ಲಾಂಟಿಕೊ ನಾಸಿಯೋನಲ್ ವಿರುದ್ಧ ಆಡುವುದಕ್ಕಾಗಿ ಮೆಡೆಲಿನ್‍ಗೆ ಪ್ರಯಾಣ ಬೆಳೆಸಿತ್ತು. ವಿಮಾನ ಪತನ ಸುದ್ದಿ ಕೇಳುತ್ತಿದ್ದಂತೆಯೇ ಪಂದ್ಯವನ್ನು ರದ್ದು ಪಡಿಸಲಾಗಿದೆ.

ವಾಯವ್ಯ ಕೊಲಂಬಿಯಾಕ್ಕೆ ತಲುಪಿದಾಗ ವಿಮಾನದ ಸಿಗ್ನಲ್ ಕಳೆದುಕೊಂಡಿತ್ತು ಎಂದು ಗ್ರೌಂಡ್ ಸ್ಟಾಫ್ ಹೇಳಿದ್ದಾರೆ,  ಲಾಮಿಯಾ ವಿಮಾನ ಸಂಸ್ಥೆಯ ಅಂಗವಾಗಿರುವ ಆರ್ ಜೆ 85, ಸಿಪಿ-2933 ವಿಮಾನ ಇದಾಗಿದೆ. ಸ್ಥಳೀಯ ಕಾಲಾಮಾನ 10.15ಕ್ಕೆ ವಿಮಾನದ ಇಂಧನ ಮುಗಿದುಹೋದ ಕಾರಣ ಬೊಲಿವಿಯಾದ ಸಾಂತಾ ಕ್ರೂಸ್ ಡೇ ಲಾ ಸಿರ್ರಾದಲ್ಲಿರುವ ವಿರು ವಿರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಳಿದು, ಇಂಧನ ತುಂಬಿಸಿ ಮೆಡೆಲಿನ್ ವಿಮಾನ ನಿಲ್ದಾಣಕ್ಕೆ ಪ್ರಯಾಣ ಬೆಳಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry