₹ 500 ನೋಟು ಪಡೆಯಲು ನಕಾರ: ಮಹಿಳೆ ಆತ್ಮಹತ್ಯೆ

7

₹ 500 ನೋಟು ಪಡೆಯಲು ನಕಾರ: ಮಹಿಳೆ ಆತ್ಮಹತ್ಯೆ

Published:
Updated:

ತಿಪಟೂರು: ₹ 500 ನೋಟು ಪಡೆಯಲು ನಿರಾಕರಿಸಿದ ಕಾರಣ ಇಲ್ಲಿನ ಗಾಂಧಿನಗರ ಬಡಾವಣೆ ನಿವಾಸಿ ಶಾಹಿನಾ (32) ಎಂಬುವವರು ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಘಟನೆ ವಿವರ: ಖಾಸಗಿ ಮಹಿಳಾ ಕೂಟವೊಂದರಿಂದ ಶಾಹಿನಾ ಸಾಲ ಪಡೆದಿದ್ದು ಸಾಲದ ಕಂತನ್ನು ₹ 500 ಮುಖಬೆಲೆಯ ನೋಟಿನ ಮೂಲಕ ಪಾವತಿಸಲು ಮುಂದಾಗಿದ್ದಾರೆ. ಆದರೆ ಅವರಿಂದ ನೋಟು ಪಡೆಯದೆ ಕೂಟದ ಸದಸ್ಯರು ಮನೆ ಬಳಿ ಬಂದು ಅವಮಾನಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ಮನನೊಂದ ಶಾಹಿನಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

‘ಮಹಿಳಾ ಕೂಟದವರು ₹ 500 ನೋಟನ್ನು ತಿರಸ್ಕರಿಸಿದ್ದರು. ಹೊಸ ನೋಟು ಅಥವಾ ಚಾಲ್ತಿ ನೋಟುಗಳನ್ನು ನೀಡುವಂತೆ ಒತ್ತಾಯಿಸಿದರು. ಇಲ್ಲವಾದರೆ  ಸದಸ್ಯರ ಮನೆ ಬಳಿಗೆ ಬಂದು ಅವಮಾನ ಮಾಡುವುದಾಗಿ ಬೆದರಿಕೆ ಹಾಕಿದ್ದರು.

ಇದರಿಂದ ಆಕೆ ಮನನೊಂದಿದ್ದಳು. ಮನೆಗೆ ಬಂದು ನೇಣು ಹಾಕಿಕೊಂಡಿದ್ದಾಳೆ’ ಎಂದು ಶಾಹಿನಾ ಪತಿ ಅನೀಫ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ. ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry