ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

16ರ ಘಟ್ಟಕ್ಕೆ ಸೈನಾ ನೆಹ್ವಾಲ್,ಕಶ್ಯಪ್

ಮಕಾವ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಮನು–ಸುಮಿತ್ ಮುನ್ನುಡಿ: ವರ್ಮಾಗೆ ಆಘಾತ
Last Updated 30 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಮಕಾವ್: ಒಲಿಂಪಿಯನ್ ಸೈನಾ ನೆಹ್ವಾಲ್ ಮತ್ತು  ಪರುಪಳ್ಳಿ ಕಶ್ಯಪ್ ಅವರು ಇಲ್ಲಿ ನಡೆಯತ್ತಿರುವ ಮಕಾವ್ ಓಪನ್ ಗ್ರ್ಯಾನ್‌ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್‌ನ ಪ್ರೀಕ್ವಾರ್ಟರ್‌ಫೈನಲ್ ತಲುಪಿದರು. ಆದರೆ, ಹಾಂಗ್‌ಕಾಂಗ್ ಓಪನ್ ಟೂರ್ನಿಯಲ್ಲಿ ರನ್ನರ್ಸ್ ಅಪ್ ಆಗಿದ್ದ ಸಮೀರ್ ವರ್ಮಾ ಸೋತಿದ್ದಾರೆ. 

ಲಂಡನ್ ಒಲಿಂಪಿಕ್ಸ್‌ ಪದಕ ವಿಜೇತ ಆಟಗಾರ್ತಿ ಸೈನಾ ನೆಹ್ವಾಲ್ ಅವರು ಮಹಿಳೆಯರ ಸಿಂಗಲ್ಸ್‌ನಲ್ಲಿ 16ರ ಘಟ್ಟಕ್ಕೆ ಪ್ರವೇಶಿಸಿದ್ದಾರೆ.
ಅರ್ಹತಾ ಸುತ್ತಿನ ಪಂದ್ಯದಲ್ಲಿ ಸೈನಾ  21–23, 21–14, 21–18 ರಿಂದ ರಾಮದಿನಿ ಅವರನ್ನು ಸೋಲಿಸಿದರು. ಒಂದು ಗಂಟೆ ನಡೆದ ಪಂದ್ಯದಲ್ಲಿ ಸೈನಾ ಅವರಿಗೆ ರಾಮದಿನಿ  ಮೊದಲ ಗೇಮ್‌ ನಲ್ಲಿ ಕಠಿಣ ಪೈಪೋಟಿ ಒಡ್ಡಿದರು. ಇದರಿಂದಾಗಿ ಈ ಗೇಮ್ ಟೈಬ್ರೇಕರ್‌ ನವರೆಗೂ ಲಂಬಿಸಿತು. ಅದರಲ್ಲಿ ಸೈನಾ ಸೋತರು. ಆದರೆ, ಇದರಿಂದ ಅವರು ಘಾಸಿಗೊಳ್ಳಲಿಲ್ಲ. ಎರಡನೇ ಗೇಮ್‌ನಲ್ಲಿ ಪುಟಿದೆದ್ದರು.

ಆಕರ್ಷಕ ಡ್ರಾಪ್‌ಗಳು ಮತ್ತು ಬಲಶಾಲಿ ಸ್ಮ್ಯಾಷ್‌ಗಳ ಮೂಲಕ 21–18 ರಿಂದ ಗೇಮ್ ಗೆದ್ದರು. ನಿರ್ಣಾಯಕ ಗೇಮ್‌ನಲ್ಲಿ ಎದುರಾಳಿಯಿಂದ ಕಠಿಣ ಪೈಪೋಟಿಯನ್ನು ಸೈನಾ ಎದುರಿಸಬೇಕಾ ಯಿತು. ಅದರೆ ಆತ್ಮವಿಶ್ವಾಸದಿಂದ ಹೋರಾಡಿದ ಅವರು ಗೆದ್ದು ಬೀಗಿದರು. ಮುಂದಿನ ಪಂದ್ಯದಲ್ಲಿ ಅವರು ಇಂಡೋನೆಷ್ಯಾದ ದಿನಾರ್ ದಿಯಾ ಆಯುಸ್ಟಿನ್ ಅವರನ್ನು ಎದುರಿಸಲಿದ್ದಾರೆ. ಹಾಂಗ್‌ಕಾಂಗ್ ಓಪನ್ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ಸೈನಾ ಸೋತಿ ದ್ದರು. ಅದಕ್ಕೂ ಮುನ್ನ ಚೀನಾ ಓಪನ್ ಟೂರ್ನಿಯಲ್ಲಿಯೂ ಸೋತಿದ್ದರು.

ಕಶ್ಯಪ್ ಮುನ್ನಡೆ: ಅರ್ಹತಾ ಸುತ್ತಿನ ಪಂದ್ಯದಲ್ಲಿ ಪಿ. ಕಶ್ಯಪ್ ಅವರು 21–19, 21–8ರಿಂದ ಚೈನಿಸ್ ತೈಪೆಯ ಚುನ್ ವೀ ಚೆನ್ ವಿರುದ್ಧ ಗೆದ್ದರು.
ಕಶ್ಯಪ್ ಅವರು ಆರು ತಿಂಗಳ ಹಿಂದೆ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.  ನಂತರ ದೀರ್ಘ ವಿಶ್ರಾಂತಿ ಪಡೆದಿ ದ್ದರು.  ಆದರೆ ಈ ಪಂದ್ದದಲ್ಲಿ ಅವರು ಚುರುಕಾದ ಆಟವಾಡಿದರು. ಎದುರಾಳಿ ಆಟಗಾರ ಹಾಕುತ್ತಿದ್ದ ಡ್ರಾಪ್‌ಗಳಿಗೆ ತಕ್ಕ ಉತ್ತರ ನೀಡಿದರು. ತೀವ್ರ ಪೈಪೋಟಿ ಯಿಂದ ಕೂಡಿದ್ದ ಮೊದಲ ಗೇಮ್‌ನಲ್ಲಿ ಕಶ್ಯಪ್ ಕೇವಲ ಎರಡು ಅಂಕಗಳ ಅಂತರದಿಂದ ಮೇಲುಗೈ ಸಾಧಿಸಿದರು.

ಶರವೇಗದ ಸ್ಮ್ಯಾಷ್‌ಗಳು, ಚುರು ಕಾದ ರಿಟರ್ನ್‌ಗಳ ಮೂಲಕ ತೈಪೆ ಆಟ ಗಾರನ ತಂತ್ರಗಳನ್ನು ವಿಫಲಗೊಳಿಸಿ ದರು. ಒಂದು ಹಂತದಲ್ಲಿ ಇಬ್ಬರೂ ಆಟ ಗಾರರು ಸಮಬಲ (5–5) ಗಳಿಸಿದ್ದರೂ ಕೊನೆಯ ಹಂತದಲ್ಲಿ ಕಶ್ಯಪ್ ಮುನ್ನಡೆ ಸಾಧಿಸಿದರು.

ಎರಡನೇ ಗೇಮ್‌ನಲ್ಲಿ ತೈಪೆ ಆಟಗಾರ ಹೆಚ್ಚು ಪ್ರತಿರೋಧ ಒಡ್ಡಲು ಕಶ್ಯಪ್ ಅವಕಾಶವನ್ನೇ ನೀಡಲಿಲ್ಲ.  ಚುರುಕಾದ ಪಾದಚಲನೆ ಮತ್ತು ನಿಖರ ವಾದ ಮುಂಗೈ ಹೊಡೆತಗಳ ಮೂಲಕ ಮಿಂಚಿದರು. ಇದರಿಂದಾಗಿ ಚುನ್ ವೀ ಚೆನ್ ಅವರು ಕೇವಲ ಎಂಟು ಅಂಕ ಗಳಿಸಲು ಮಾತ್ರ ಸಾಧ್ಯವಾಯಿತು.

ಸಾಯಿಪ್ರಣಿತ್ ಮಿಂಚು: ಭಾರತದ ಇನ್ನೊಬ್ಬ ಆಟಗಾರ ಬಿ. ಸಾಯಿಪ್ರಣಿತ್ ಅವರು 21–12, 21–15ರಿಂದ ಚೀನಾದ ಸುನ್ ಫಿಯಾಕ್ಸಿಂಗ್ ವಿರುದ್ಧ ಜಯಗಳಿಸಿದರು. ಅವರು 16ರ ಘಟ್ಟದ ಪಂದ್ಯದಲ್ಲಿ ಐದನೇ ಶ್ರೇಯಾಂಕದ ಆಟಗಾರ ವಾಂಗ್ ವಿಂಗ್ ಕಿ ವಿನ್ಸೆಂಟ್ ಅವರ ವಿರುದ್ಧ ಸೆಣಸಲಿದ್ದಾರೆ.

ಸಮೀರ್‌ಗೆ ನಿರಾಸೆ: ಹಾಂಗ್ ಕಾಂಗ್ ಓಪನ್ ಟೂರ್ನಿಯಲ್ಲಿ ಫೈನಲ್ ತಲುಪಿ ಇತಿಹಾಸ ಬರೆದಿದ್ದ ಸಮೀರ್ ವರ್ಮಾ ಅವರು ಇಲ್ಲಿ ಬೇಗನೆ ನಿರ್ಗಮಿಸಿದರು. ಅವರು 18–21, 13–21ರಿಂದ ಇಂಡೋನೆಷ್ಯಾದ ಮಹಮ್ಮದ್ ಬಾಯು ಪಂಗಿಸ್ತು ವಿರುದ್ಧ ಸೋಲನುಭವಿಸಿದರು.

ಮನು–ಸುಮಿತ್ ಮುನ್ನಡೆ: ಡಬಲ್ಸ್‌ನಲ್ಲಿ ಭಾರತದ ಮನು ಅತ್ರಿ ಮತ್ತು ಬಿ. ಸುಮಿತ್ ರೆಡ್ಡಿ ಅವರು ಮುನ್ನಡೆ ಸಾಧಿಸಿದರು.  ಅತ್ರಿ ಜೋಡಿಯು 21–11, 17–21, 21–9ರಿಂದ  ಹಾಂಗ್‌ಕಾಂಗ್‌ನ ಚಾನ್ ಅಲನ್ ಯುನ್ ಲುಂಗ್ ಮತ್ತು ಲಿ ಕ್ವಿನ್ ಹಾನ್ ಜೋಡಿಯನ್ನು ಮಣಿಸಿದರು.
ಭಾರತದ ಜೋಡಿಯು ಮುಂದಿನ ಸುತ್ತಿನಲ್ಲಿ  ಸಿಂಗಪುರದ ಡ್ಯಾನಿ ಬಾವಾ ಕ್ರೀಸ್ನಂತ್ ಮತ್ತು ಹೆಂದ್ರಾ ವೀಜಯಾ ಅವರನ್ನು ಎದುರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT