ಮಂಗಳವಾರ, ಸೆಪ್ಟೆಂಬರ್ 21, 2021
21 °C

ಅಮರಾವತಿಗೆ ಆಡಳಿತ ಸ್ಥಳಾಂತರ

ಪಿಟಿಐ Updated:

ಅಕ್ಷರ ಗಾತ್ರ : | |

ಅಮರಾವತಿಗೆ ಆಡಳಿತ ಸ್ಥಳಾಂತರ

ಅಮರಾವತಿ : ಆಂಧ್ರಪ್ರದೇಶದ ಸಂಪೂರ್ಣ ಆಡಳಿತ ನೂತನ ರಾಜಧಾನಿ ಅಮರಾವತಿಗೆ ಗುರುವಾರ ಸ್ಥಳಾಂತರವಾಗುವ ಮೂಲಕ ಹೊಸ ಅಧ್ಯಾಯ ಆರಂಭಿಸಿತು.

ಇಲ್ಲಿಗೆ ಸಮೀಪದ ವೆಲಗಪುಡಿಯಲ್ಲಿನ ತಾತ್ಕಾಲಿಕ ಸಚಿವಾಲಯದಲ್ಲಿನ ಕಚೇರಿಯಿಂದಲೇ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಕಾರ್ಯನಿರ್ವಹಿಸಲು ಆರಂಭಿಸಿದರು. ಸಚಿವ ಸಂಪುಟದ ಸಭೆಯೂ ಸಹ ಪ್ರಥಮಬಾರಿ ಇಲ್ಲಿ ನಡೆಯಿತು.

ಜೂನ್‌ 29ರಿಂದ ಸಚಿವಾಲಯದಲ್ಲಿನ ಇಲಾಖೆಗಳನ್ನು ಹೈದರಾಬಾದ್‌ನಿಂದ ವೆಲಗಪುಡಿಗೆ ಸ್ಥಳಾಂತರಿಸುವ ಪ್ರಕ್ರಿಯೆಗಳು ಆರಂಭವಾಗಿದ್ದವು. ಆದರೆ, ಕಟ್ಟಡಗಳ ನಿರ್ಮಾಣ ವಿಳಂಬವಾಗಿದ್ದರಿಂದ ಸ್ಥಳಾಂತರಕ್ಕೆ ಅಡ್ಡಿಯಾಗಿತ್ತು.

ಮುಖ್ಯಮಂತ್ರಿ ಅವರ ಕಚೇರಿ ಇರುವ ‘ಬ್ಲಾಕ್‌–1’ ಕಟ್ಟಡವನ್ನು ವಾಸ್ತು ಕಾರಣಕ್ಕಾಗಿಯೇ ಕೆಡವಿ ಮತ್ತೆ ಕಟ್ಟಲಾಯಿತು.

ಹೀಗಾಗಿ, ವಿವಿಧ ಕಾರಣಗಳಿಂದಾಗಿ ಅಕ್ಟೋಬರ್‌ 3ರಿಂದ ಸಚಿವಾಲಯದಲ್ಲಿನ ಇಲಾಖೆಗಳನ್ನು ಒಂದೊಂದಾಗಿ ವೆಲಗಪುಡಿಗೆ ಸ್ಥಳಾಂತರಗೊಳಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.