ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ಓದಿ ಮಾಡಿದ ಮೆಕ್ಸಿಕನ್‌ ಅಡುಗೆ

ರಸಾಸ್ವಾದ
Last Updated 2 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಮಳೆ ಬಂದು ನಿಂತಿದ್ದರಿಂದ ಹೋಟೆಲ್‌ನ ಹೊರಗೆ ತಣ್ಣನೆ ಗಾಳಿ ಬೀಸುತ್ತಿತ್ತು. ಹೋಟೆಲ್‌ ಒಳಗೂ ಎ.ಸಿಯಿಂದಾಗಿ ಅದೇ ವಾತಾವರಣವಿತ್ತು. ಊಟಕ್ಕೆಂದು ಬಂದ ಬಹಳಷ್ಟು ಮಂದಿ  ಕಾಯ್ದಿರಿಸಿದ್ದ ಟೇಬಲ್‌ನಲ್ಲಿ ಕುಳಿತರು. ವೇಟರ್‌ಗಳು ಬಂದು ಆರಂಭಿಕ ತಿನಿಸು– ಸ್ಟಾರ್ಟರ್‌– ತಂದಿಟ್ಟರು. ಅದು ಭಾರತೀಯ ಆಹಾರವಾಗಿತ್ತು. ಮತ್ತೊಂದು ಟೇಬಲ್‌ನಲ್ಲಿ ಕುಳಿತಿದ್ದ ಇಬ್ಬರು ವಿದೇಶಿಯರು ಮಾತ್ರ ಕಾಂಟಿನೆಂಟಲ್‌ ಊಟ ಮಾಡುತ್ತಿದ್ದರು.

ಗ್ರಾಹಕರ ಆಯ್ಕೆಗೆ ಭಾರತೀಯ ಆಹಾರ ತಿನಿಸು ಇದ್ದರೂ ಹೋಟೆಲ್‌ನ ‘ಮೈ ಕೆಫೆ’ಯಲ್ಲಿ ಭಾನುವಾರದವರೆಗೂ (ಡಿ.4) ಟೆಕ್ಸಾಸ್‌ ಮತ್ತು ಮೆಕ್ಸಿಕೊ ಪ್ರದೇಶಗಳ ‘ಟೆಕ್ಸ್‌ಮೆಕ್ಸ್‌’ ಆಹಾರೋತ್ಸವ ಆಯೋಜಿಸಲಾಗಿದೆ. ವಿದೇಶಿಯರೂ ಸೇರಿದಂತೆ ಭಾರತೀಯರಿಗೂ ಇಷ್ಟವಾಗುವ ರುಚಿ ಮೆಕ್ಸಿಕನ್‌ ಆಹಾರದಲ್ಲಿದೆ.

ಮೆಕ್ಸಿಕನ್ನರು ಅಡುಗೆಗೆ ಬಳಸುವ ಸಾಮಗ್ರಿ ಬಹುತೇಕ ಭಾರತೀಯರು ಬಳಸುವ ಆಹಾರ ಸಾಮಗ್ರಿಗಳಂತೇ ಇವೆ. ಜೀರಿಗೆ, ಟೊಮೆಟೊ, ಬೀನ್ಸ್‌, ಕೊತ್ತಂಬರಿ, ಕ್ಯಾಪ್ಸಿಕಂ, ಅಕ್ಕಿ ಸಹ ಅವರೂ ನಮ್ಮಂತೆಯೇ ಬಳಸುತ್ತಾರೆ.

ಬಾಸಾ ಮೀನನ್ನು ಫ್ರೈ ಮಾಡಿ ನಂತರ  ಬೇಯಿಸಿಕೊಡುವ ಮೆಕ್ಸಿಕನ್‌ ಶೈಲಿಯ ಫಿಶ್‌ ಕೇಕ್‌ ವಿಭಿನ್ನ ರುಚಿ ನೀಡುತ್ತದೆ.  ಜೊತೆಗೆ ಟೊಮೆಟೊ, ಈರುಳ್ಳಿ, ಹಸಿರು ಮೆಣಸಿನಕಾಯಿ ಕ್ರೀಂ ಹಾಕಿ ಮಾಡಿದ ಸಾಲ್ಸ ಒಳ್ಳೆ ಕಾಂಬಿನೇಷನ್‌ ಕೊಟ್ಟಿತು.

ಮೇಕೆ ಹಾಲಿನ ಚೀಸ್‌ನಿಂದ ಮಾಡಿದ ಪೆಪ್ಪರ್ಸ್‌ ಆಂಡ್ ಗೋಟ್‌ ಚೀಸ್‌ ಕ್ವೆಸಡೆಲ್ಲಾಸ್‌ ಸಸ್ಯಾಹಾರಿಗಳಿಗೆ ಇಷ್ಟವಾಗುತ್ತದೆ. ಗ್ರೀಕರು ಹಾಗೂ ಮೆಕ್ಸಿಕನ್ನರು ಮೇಕೆ ಹಾಲಿನ ಚೀಸ್‌ನ್ನು ಅಡುಗೆಗೆ ಹೆಚ್ಚಾಗಿ ಬಳಸುತ್ತಾರಂತೆ. ಈ ತಿನಿಸು ಸ್ವಲ್ಪ ಖಾರ ಹಾಗೂ ಹುಳಿಯ ರುಚಿ ನೀಡುತ್ತದೆ.

‘ನಾವು ಅಡುಗೆಗೆ ಬಳಸುವ ಸಾಮಗ್ರಿಗಳನ್ನೇ ಮೆಕ್ಸಿಕನ್ನರು  ಬಳಸುತ್ತಾರೆ. ಆದರೆ ರುಚಿ ಬೇರೆ. ಆಹಾರೋತ್ಸವಕ್ಕಾಗಿ ನಾನು ನಗರದ ಅನೇಕ ಮೆಕ್ಸಿಕನ್‌ ರೆಸ್ಟೊರೆಂಟ್‌ಗಳಿಗೆ ಹೋಗಿ ಅಡುಗೆ ರುಚಿ ನೋಡಿದ್ದೇನೆ. ರೆಸಿಪಿಗಳನ್ನು ಪುಸ್ತಕದಲ್ಲಿ ಓದಿದ್ದೇನೆ. ಗ್ರಾಹಕರ ಅಭಿಪ್ರಾಯಗಳನ್ನು ಸಂಗ್ರಹಿಸಿ ರುಚಿಯಲ್ಲಿ ಹೆಚ್ಚುಕಡಿಮೆ ಆಗಿದ್ದರೆ ಸರಿಪಡಿಸಿಕೊಳ್ಳುತ್ತೇನೆ’ ಎನ್ನುತ್ತಾರೆ ಬಾಣಸಿಗ ಮನೋಜ್‌ ಸಿಂಗ್‌.

ವಿಭಿನ್ನ ರುಚಿಯ ತಿನಿಸುಗಳು
ಶ್ರಿಮ್ಸ್‌ ಅಲ್ಲ ಡೈಬ್ಲಾ (ಸಿಗಡಿ), ಹವಾಯನ್‌ ಚಿಕನ್‌ ಟೊಕೊಸ್‌, ಚಿಕನ್‌ ಎಂಚಿಲಾಡ್‌, ಸಸ್ಯಾಹಾರದಲ್ಲಿ ಪೊಟ್ಯಾಟೊ ಆಂಡ್‌ ಬೀನ್‌ ವ್ರ್ಯಾಪ್‌, ಪೆಪ್ಪರ್‌ ಎಂಚಿಲಾಡ್ಸ್‌, ಬೇಕಡ್‌ ವೆಜ್ಜಿ ಚಿಮಿಚಾಂಗ್ಸ್‌, ಸಿಹಿ ತಿನಿಸಿನಲ್ಲಿ ಫ್ಲಾನ್ ಮೆಕ್ಸಿಕಾನೊ, ಕ್ಯಾಪಿಡೊಟಡ ಆಯ್ಕೆಗಿವೆ. ಇಲ್ಲಿ ಸ್ಟಾರ್ಟರ್‌, ಮೇನ್‌ಕೋರ್ಸ್‌ ಎಂಬ ವಿಧಗಳನ್ನು ಮಾಡಿಲ್ಲ. ಬದಲಾಗಿ ಕಂಫರ್ಟ್‌ ಫುಡ್‌ ಕಲ್ಪನೆಯಲ್ಲಿ ಮೆನು ಸಿದ್ಧಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT