ಕೊರಲೆ ಬೆಳೆಯುವುದು ಕಲಿಯಿರಿ...

7
ಎಣಿಕೆ ಗಳಿಕೆ

ಕೊರಲೆ ಬೆಳೆಯುವುದು ಕಲಿಯಿರಿ...

Published:
Updated:
ಕೊರಲೆ ಬೆಳೆಯುವುದು ಕಲಿಯಿರಿ...

1. ಬಿತ್ತಿದ 3-4 ದಿವಸಗಳಿಗೆ ಮೊಳಕೆ ಬರುತ್ತದೆ. ಒಮ್ಮೆ ಬಿತ್ತಿದರೆ ಮತ್ತೆ ಯಾವುದೇ ಅಂತರ ಬೇಸಾಯವಾಗಲೀ, ಮೇಲುಗೊಬ್ಬರ ಕೊಡುವುದಾಗಲೀ ಅವಶ್ಯಕತೆ ಇಲ್ಲ. 

2. 2 ರಿಂದ 3 ಅಡಿವರೆಗೆ ಬೆಳೆಯುತ್ತದೆ. ಮಣ್ಣು ಫಲವತ್ತಾಗಿದ್ದರೆ ಅಥವಾ ಗೊಬ್ಬರ ಬಳಸಿದರೆ 4 ಅಡಿವರೆಗೂ ಬೆಳೆಯಬಲ್ಲದು.
 
3. ಕೇವಲ 90 ರಿಂದ 105 ದಿನಗಳಿಗೆ ಕೊರಲೆ ಕಟಾವಿಗೆ ಬರುತ್ತದೆ. ಬಿತ್ತುವಾಗ ಸ್ವಲ್ಪ ತೇವವಿದ್ದರೆ ಸಾಕು. ಮುಂದೆ ಒಂದೆರಡು ಸುಮಾರಾದ ಮಳೆ ಬಿದ್ದರೆ ಉತ್ತಮ ಬೆಳೆ ಕೈಗೆ ಸಿಗುತ್ತದೆ.
 
4. ಕೊರಲೆಯ ಗರಿಗಳು ಮತ್ತು ತೆನೆ ಹಳದಿ ಬಣ್ಣಕ್ಕೆ ತಿರುಗಿದಾಗ ಕಟಾವಿಗೆ ಸಿದ್ಧಗೊಂಡಿದೆ ಎಂದರ್ಥ. ಕೊರಲೆ ಬೇರು ಆಳಕ್ಕೆ ಹೋಗುವುದಿಲ್ಲ
 
5. ಎಕರೆಗೆ ಅಂದಾಜು 3-4 ಕ್ವಿಂಟಲ್ ಇಳುವರಿ ಬರುತ್ತದೆ. ಒಂದು ಗಾಡಿಯಷ್ಟು ಹುಲ್ಲು ಸಿಗುತ್ತದೆ. ಫಲವತ್ತಾದ ಮಣ್ಣಿನಲ್ಲಿ 8 ಕ್ವಿಂಟಲ್‌ವರೆಗೂ ಇಳುವರಿ ಬರುವುದುಂಟು
 
6. ಕಾಳಿಗೆ ಗಟ್ಟಿ ಕವಚ ಇರುವುದರಿಂದ ಯಾವುದೇ ಹುಳುವಿನ ಬಾಧೆ ಇಲ್ಲ. 4-5 ವರ್ಷದವರೆಗೂ ಹಾಳಾಗುವುದಿಲ್ಲ . ಆದರೆ ಬಿತ್ತನೆ ಬೀಜಕ್ಕೆ ತುಂಬಾ ಹಳತಾಗಬಾರದು. ಸರಿಯಾಗಿ ಮೊಳಕೆಯಾಗುವುದಿಲ್ಲ. ಹೆಚ್ಚೆಂದರೆ ಎರಡು ವರ್ಷದ ಬೀಜ ಉತ್ತಮ.
 
7. ಮೊದಲು ಕೊರಲೆಗೆ ಕೆಮ್ಮಣ್ಣು ಕಟ್ಟಬೇಕು. (ಕೆಮ್ಮಣ್ಣಿಗೆ ನೀರು ಹಾಕಿ ಸ್ವಲ್ಪ ಮಂದಗೆ ತಿಳಿ ಮಾಡಿಕೊಂಡು, ನೆಲದ ಮೇಲೆ ಹರಡಿದ ಕೊರಲೆ ಮೇಲೆ ಚಿಮುಕಿಸಿ ಕೈಯಾಡಿಸಿ ಎಲ್ಲಾ ಕಾಳುಗಳಿಗೂ ಕೆಮ್ಮಣ್ಣು ಮೆತ್ತಿಕೊಳ್ಳುವಂತೆ ಮಾಡುವುದು) ನಂತರ ಬಿಸಿಲಲ್ಲಿ ಚೆನ್ನಾಗಿ ಒಣಗಿಸಬೇಕು. ಒಣಗಿದ ಕೊರಲೆ ಬೀಸುವ ಕಲ್ಲಿನಲ್ಲಿ ಹಾಕಿ ಅಕ್ಕಿ ಮಾಡಿಕೊಳ್ಳಬೇಕು. ತುಂಬಾ ಮೃದುವಾಗಿ ಬೀಸಬೇಕು. 
 
8. ಬೇಸಿಗೆಯಲ್ಲಿ ತೋಟದ ತೇವಾಂಶ ಕಾಪಾಡುವಲ್ಲಿ ಕೊರಲೆ ಸಹಕಾರಿ.  ಕೊರಲೆ ಇತರೆ ಹಾನಿಕಾರಕ ಕಳೆ ನಿಯಂತ್ರಿಸುತ್ತದೆ. ತೋಟ ಹಸನು ಮಾಡುವಾಗ ಉಳುಮೆ ಮಾಡಿ ಕೊರಲೆ ಹುಲ್ಲನ್ನು ಅಲ್ಲೇ ಬಿಟ್ಟರೆ ಅಥವಾ ಬುಡ ಮಟ್ಟಕ್ಕೆ ಕತ್ತರಿಸಿ ಹರಡಿದರೆ ಮುಚ್ಚಿಗೆಯಾಗುತ್ತದೆ ಹಾಗೂ ಬೇಗನೆ ಕೊಳೆತು ಉತ್ಕೃಷ್ಟ ಗೊಬ್ಬರವಾ ಗುತ್ತದೆ. ಉಳುಮೆ ಮಾಡದಿದ್ದರೆ ತೆನೆ ಬಲಿತು ಅಲ್ಲೇ ಉದುರಿ ಮತ್ತೆ ಮೊಳಕೆಯಾಗುತ್ತದೆ.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry