ತಮಿಳು ನೆಲದವಳಾದ ಕನ್ನಡದ ‘ಕೋಮಲವಲ್ಲಿ’

7

ತಮಿಳು ನೆಲದವಳಾದ ಕನ್ನಡದ ‘ಕೋಮಲವಲ್ಲಿ’

Published:
Updated:
ತಮಿಳು ನೆಲದವಳಾದ ಕನ್ನಡದ ‘ಕೋಮಲವಲ್ಲಿ’

* 1948, ಫೆಬ್ರುವರಿ 24: ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಮೇಲುಕೋಟೆಯ ಅಯ್ಯಂಗಾರಿ ಬ್ರಾಹ್ಮಣ ಕುಟುಂಬದಲ್ಲಿ ಜನನ.* ತಂದೆ ಹೆಸರು ಜಯರಾಮ್, ತಾಯಿ ಹೆಸರು ವೇದವಲ್ಲಿ (ನಟಿ ಸಂಧ್ಯಾ). ಜನಿಸಿದಾಗ ಜಯಾ ಅವರಿಗೆ ಇಟ್ಟ ಹೆಸರು ‘ಕೋಮಲವಲ್ಲಿ’.* ಕೋಮಲವಲ್ಲಿಗೆ ಒಂದು ವರ್ಷ ವಯಸ್ಸಾಗಿದ್ದಾಗ, ಜಯಲಲಿತಾ ಎಂದು ನಾಮಕರಣ ಮಾಡಲಾಯಿತು.* ಜಯಾ ಅವರ ತಂದೆಯ ತಂದೆ ನರಸಿಂಹನ್ ರಂಗಾಚಾರಿ ಅವರು ಮೈಸೂರಿನ ಜಯಚಾಮರಾಜೇಂದ್ರ ಒಡೆಯರ್ ಆಸ್ಥಾನದಲ್ಲಿ ವೈದ್ಯರಾಗಿದ್ದರು.* ಜಯಾ ಅವರ ತಾಯಿಯ ತಂದೆ ರಂಗಸ್ವಾಮಿ ಅಯ್ಯಂಗಾರ್ ಅವರು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನಲ್ಲಿ ಉದ್ಯೋಗದಲ್ಲಿದ್ದರು.* ಜಯಾ ಎರಡು ವರ್ಷದವರಾಗಿದ್ದಾಗ ತಂದೆ ಜಯರಾಮ್ ತೀರಿಕೊಂಡರು. ನಂತರ ತಾಯಿ ವೇದವಲ್ಲಿ, ಬೆಂಗಳೂರಿನ ತಂದೆಯ ಮನೆಗೆ ಮರಳಿದರು.* 1952ರಲ್ಲಿ ಮದ್ರಾಸಿಗೆ ತೆರಳಿದ ವೇದವಲ್ಲಿ, ಅಲ್ಲಿ ‘ಸಂಧ್ಯಾ’ ಎಂಬ ಹೆಸರಿನಲ್ಲಿ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದರು.* 1950ರಿಂದ 1958ರವೆಗೆ ಜಯಲಲಿತಾ ಅವರು ಮೈಸೂರಿನಲ್ಲಿ ತಮ್ಮ ಅಜ್ಜ–ಅಜ್ಜಿ ಜತೆ ಇದ್ದರು.* ಜಯಾ ಅವರು ಬೆಂಗಳೂರಿನ ಬಿಷಪ್ ಕಾಟನ್ ಬಾಲಕಿಯರ ಶಾಲೆಯ ವಿದ್ಯಾರ್ಥಿನಿಯೂ ಹೌದು.* ಮದ್ರಾಸಿಗೆ ವಾಸ್ತವ್ಯ ಬದಲಾಯಿಸಿದ ನಂತರ ಜಯಾ ಅವರು, ಅಲ್ಲಿ ಬಾಲ್ಯದ ಶಿಕ್ಷಣ ಪೂರೈಸಿದರು.* 1960 ಮೇ ತಿಂಗಳಲ್ಲಿ ಮೈಲಾಪುರದಲ್ಲಿ ಭರತನಾಟ್ಯ ಕಲಾವಿದೆಯಾಗಿ ರಂಗ ಪ್ರವೇಶ.* 1961ರಲ್ಲಿ ಕನ್ನಡದ ’ಶ್ರೀಶೈಲ ಮಹಾತ್ಮೆ’ ಸಿನಿಮಾದಲ್ಲಿ ಬಾಲನಟಿಯಾಗಿ ಅಭಿನಯ.* 1964ರಲ್ಲಿ ಬಿ.ಆರ್. ಪಂತುಲು ಅವರ ‘ಚಿನ್ನದ ಗೊಂಬೆ’ ಚಿತ್ರದಲ್ಲಿ ಕಲ್ಯಾಣ್ ಕುಮಾರ್ ಜೊತೆ ಅಭಿನಯ.* 1964ರಲ್ಲಿ ವೈ.ಜಿ. ಪಾರ್ಥಸಾರಥಿ ನಾಟಕ ತಂಡದ ಮೂಲಕ, ರಂಗಭೂಮಿಗೆ ಪ್ರವೇಶ.* 1965ರಲ್ಲಿ ವೆನ್ನಿರ ಅಡೈ ಚಿತ್ರದ ಮೂಲಕ ತಮಿಳು ಸಿನಿಮಾ ರಂಗ ಪ್ರವೇಶ. ತಮಿಳು ಸಿನಿಮಾದಲ್ಲಿ ಸ್ಕರ್ಟ್ ಧರಿಸಿ ಅಭಿನಯಿಸಿದ ಮೊದಲ ನಟಿ ಜಯಾ!* ಜಯಾ ಅವರು ತೆಲುಗು, ಹಿಂದಿ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ.* 1982ರಲ್ಲಿ ಎಐಎಡಿಎಂಕೆ ಪಕ್ಷ ಸೇರ್ಪಡೆ.* 1983ರಲ್ಲಿ ಪಕ್ಷದ ಪ್ರಚಾರ ವಿಭಾಗದ ಕಾರ್ಯದರ್ಶಿಯಾಗಿ ನೇಮಕ.* 1984ರಲ್ಲಿ ರಾಜ್ಯಸಭೆ ಪ್ರವೇಶ.* 1989ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಗೆಲುವು, ತಮಿಳುನಾಡು ವಿಧಾನಸಭೆ ಪ್ರವೇಶ. ವಿರೋಧ ಪಕ್ಷದ ನಾಯಕಿಯಾಗಿ ಕರ್ತವ್ಯ ನಿರ್ವಹಣೆ.* 1989ರ ಮಾರ್ಚ್‌ 25ರಂದು ವಿಧಾನಸಭೆಯಲ್ಲಿ ನಡೆದ ಗಲಾಟೆಯಲ್ಲಿ, ಜಯಾ ಮೇಲೆ ಹಲ್ಲೆ.* 1991ರಲ್ಲಿ ತಮಿಳುನಾಡಿನ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ.* 1996ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜಯಾ ನೇತೃತ್ವದ ಎಐಎಡಿಎಂಕೆ ಪಕ್ಷಕ್ಕೆ ಭಾರಿ ಸೋಲು.* ಕಲರ್ ಟಿ.ವಿ. ಹಗರಣದಲ್ಲಿ ಲಂಚ ಪಡೆದ ಆರೋಪದ ಅಡಿ 1996ರ ಡಿಸೆಂಬರ್‌ನಲ್ಲಿ ಜಯಲಲಿತಾ ಬಂಧನ.* 2000ನೇ ಇಸವಿಯಲ್ಲಿ ಈ ಆರೋಪದಿಂದ ಮುಕ್ತರಾದ ಜಯಾ.* ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಜಯಾ ತಪ್ಪಿತಸ್ಥೆ ಎಂದು ನ್ಯಾಯಾಲಯ ಘೋಷಿಸಿದ್ದ ಕಾರಣ, 2001ರ ಚುನಾವಣೆ ಸ್ಪರ್ಧಿಸದಂತೆ ನಿರ್ಬಂಧ. ಆದರೂ ಚುನಾವಣೆ ನಂತರ, ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ.* ಆದರೆ, ಕ್ರಿಮಿನಲ್ ಪ್ರಕರಣದಲ್ಲಿ ತಪ್ಪಿತಸ್ಥೆ ಎಂದು ಘೋಷಣೆ ಆಗಿರುವಾಗ ಮುಖ್ಯಮಂತ್ರಿ ಆಗುವಂತಿಲ್ಲ ಎಂದು ನ್ಯಾಯಾಲಯ ಹೇಳಿದ ಕಾರಣ, ಅಧಿಕಾರದಿಂದ ಕೆಳಗಿಳಿದ ಜಯಾ.* ಕೆಲವು ಆರೋಪಗಳಿಂದ ಜಯಾ ಅವರನ್ನು ಮದ್ರಾಸ್ ಹೈಕೋರ್ಟ್ ದೋಷಮುಕ್ತಗಿಳಿಸಿದ ಕಾರಣ, 2003ರಲ್ಲಿ ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ.

* 2011ರಲ್ಲಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಜಯಾ ಅವರಿಂದ ಮೂರನೆಯ ಬಾರಿ ಅಧಿಕಾರ ಸ್ವೀಕಾರ.* 2014, ಸೆಪ್ಟೆಂಬರ್ 27: ಅಕ್ರಮ ಆಸ್ತಿ ಸಂಪಾದಿಸಿದ ಪ್ರಕರಣದಲ್ಲಿ ಜಯಾ ಅವರಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಬೆಂಗಳೂರಿನ ವಿಶೇಷ ನ್ಯಾಯಾಲಯ. ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ಜಯಾ.* 2015 ಮೇ 11: ಈ ಪ್ರಕರಣದಲ್ಲಿ ಜಯಾ ತಪ್ಪು ಮಾಡಿಲ್ಲ ಎಂದು ಆದೇಶಿಸಿದ ಕರ್ನಾಟಕ ಹೈಕೋರ್ಟ್‌. ಮತ್ತೆ ಮುಖ್ಯಮಂತ್ರಿಯಾದ ಜಯಾ.* 2016ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಜಯ ಸಾಧಿಸಿದ ಜಯಾ ಪಕ್ಷ. ಮುಖ್ಯಮಂತ್ರಿಯಾಗಿ ಮತ್ತೆ ಅಧಿಕಾರ ಸ್ವೀಕಾರ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry