ಜಗತ್ತಿನ 'ಅತೀ ತೂಕದ ಮಹಿಳೆ'ಗೆ ಸಹಾಯ ಹಸ್ತ ಚಾಚಿದ ಭಾರತ

7

ಜಗತ್ತಿನ 'ಅತೀ ತೂಕದ ಮಹಿಳೆ'ಗೆ ಸಹಾಯ ಹಸ್ತ ಚಾಚಿದ ಭಾರತ

Published:
Updated:
ಜಗತ್ತಿನ 'ಅತೀ ತೂಕದ ಮಹಿಳೆ'ಗೆ ಸಹಾಯ ಹಸ್ತ ಚಾಚಿದ ಭಾರತ

ನವದೆಹಲಿ: ಭಾರತದಲ್ಲಿ ಚಿಕಿತ್ಸೆ ಪಡೆಯಲು ಜಗತ್ತಿನ 'ಅತೀ ತೂಕದ ಮಹಿಳೆ'ಗೆ ವೀಸಾ ನಿರಾಕರಿಸಿದ ಪ್ರಕರಣವನ್ನು ಮುಂಬೈನ ವೈದ್ಯರೊಬ್ಬರು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಗಮನಕ್ಕೆ ತಂದಿದ್ದಾರೆ.

ಜಗತ್ತಿನ 'ಅತೀ ತೂಕದ ಮಹಿಳೆ ಎಂದೇ ಹೇಳಲ್ಪಡುವ ಈಜಿಪ್ಟ್ ಮೂಲದ 36 ಹರೆಯದ ಮಹಿಳೆಯ ದೇಹ ಭಾರ 500 ಕೆ.ಜಿ ಇದೆ. ಈಕೆ ಭಾರತದಲ್ಲಿ ಚಿಕಿತ್ಸೆ ಪಡೆಯಲಿಚ್ಛಿಸಿದ್ದು ಆಕೆಗೆ ಮೆಡಿಕಲ್ ವೀಸಾ ನಿರಾಕರಿಸಿರುವ ವಿಷಯವನ್ನು ಮುಂಬೈನ ಡಾ. ಮುಫಿ ಲಕ್ಡಾವಾಲಾ ಸುಷ್ಮಾ ಗಮನಕ್ಕೆ ತಂದಿದ್ದರು.

ಈಜಿಪ್ಟ್ ನ 500 ಕೆಜೆ ತೂಕದ ಮಹಿಳೆ ಇಮಾನ್ ಅಹ್ಮದ್ ನನ್ನಲ್ಲಿ ಸಹಾಯಕೋರಿದ್ದು, ಆಕೆ ಭಾರತಕ್ಕೆ ಬರುವುದಕ್ಕಾಗಿ ಮೆಡಿಕಲ್ ವೀಸಾ ನಿರಾಕರಿಸಲಾಗಿದೆ ಎಂದು ಮುಂಬೈನ ಬ್ಯಾರಿಯಾಟ್ರಿಕ್ ಸರ್ಜನ್ ಡಾ. ಮುಫಿ  ಲಕ್ಡಾವಾಲಾ ಸುಷ್ಮಾ  ಸ್ವರಾಜ್  ಅವರಿಗೆ ಟ್ವೀಟ್ ಮಾಡಿದ್ದರು.

ಕಿಡ್ನಿ ವೈಫಲ್ಯದಿಂದಿ ದೆಹಲಿಯ ಎಐಐಎಂಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುಷ್ಮಾ ಸ್ವರಾಜ್, ಡಾ.ಮುಫಿ ಅವರ ಟ್ವೀಟ್‍ಗೆ ಉತ್ತರಿಸಿದ್ದು ಇಮಾನ್‍ಗೆ ಸಹಾಯ ಮಾಡುವ ಭರವಸೆ ನೀಡಿದ್ದಾರೆ.

ಈಜಿಪ್ಟ್ ದೇಶದ ಅಲೆಕ್ಸಾಂಡ್ರಿಯಾದಲ್ಲಿ ವಾಸವಾಗಿರುವ ಇಮಾನ್ ಅಹ್ಮದ್ ಅಬ್ದುಲತಿ ಎಂಬಾಕೆಯ ತೂಕ 500 ಕೆ.ಜಿ. 11 ವರ್ಷದವಳಿದ್ದಾಗ ಆಕೆಯ ದೇಹದ ತೂಕ ಹೆಚ್ಚಾಗುತ್ತಾ ಹೋಯಿತು. 25 ವರ್ಷಗಳಲ್ಲಿ ಆಕೆಯ ತೂಕ 500 ಕೆ.ಜಿ ಆಗಿದ್ದು, ಈಕೆಗೆ ಹಾಸಿಗೆ ಬಿಟ್ಟು ಕದಲುವುದಕ್ಕೆ ಸಾಧ್ಯವಾಗಿಲ್ಲ.

ದೇಹದಲ್ಲಿ ನೀರಿನ ಪ್ರಮಾಣ ಜಾಸ್ತಿಯಾಗಿದ್ದು, ಆಕೆಯ ದೇಹ ಊದಿಕೊಂಡಿದೆ. ದೇಹದ ಗ್ರಂಥಿಗಳಲ್ಲಿನ ತೊಂದರೆಯಿಂದಾಗಿ ಆಕೆಯ ದೇಹದ ತೂಕ ವಿಪರೀತವಾಗಿ ಏರಿಕೆಯಾಗಿದೆ.

ಇಮಾನ್ ಜನಿಸಿದಾಗ ಆಕೆಯ ದೇಹದ ತೂಕ 5 ಕೆಜಿ ಆಗಿತ್ತು. ಆ ಹೊತ್ತಲ್ಲಿ ದೇಹದ ತೂಕ ಸಂಭಾಳಿಸಲಾಗದೆ ಮಗು ನಡೆಯುವ ಬದಲು ತೆವಳುತ್ತಿತ್ತು, ಈಗಲೂ ದೇಹದ ಭಾರವನ್ನು ಹೊರಲಾರದೆ ಇಮಾನ್ ತೆವಳುತ್ತಾಳೆ.

ಅರ್ಧಕ್ಕೇ ಓದು ನಿಲ್ಲಿಸಿದಾಗ ಆಕೆಗೆ ಮೆದುಳಿನ ಸ್ಟ್ರೋಕ್  ಸಂಭವಿಸಿತು. ಆನಂತರ ಆಕೆಗೆ ಹಾಸಿಗೆ ಬಿಟ್ಟು ಮೇಲೆ ಏಳಲು ಸಾಧ್ಯವಾಗಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry