ಜಯಾ ವಿಧಿವಶ: ಮೂವರು ಅಭಿಮಾನಿಗಳು ಸಾವು; ಇಬ್ಬರು ಆತ್ಮಹತ್ಯೆಗೆ ಯತ್ನ

7

ಜಯಾ ವಿಧಿವಶ: ಮೂವರು ಅಭಿಮಾನಿಗಳು ಸಾವು; ಇಬ್ಬರು ಆತ್ಮಹತ್ಯೆಗೆ ಯತ್ನ

Published:
Updated:
ಜಯಾ ವಿಧಿವಶ: ಮೂವರು ಅಭಿಮಾನಿಗಳು ಸಾವು; ಇಬ್ಬರು ಆತ್ಮಹತ್ಯೆಗೆ ಯತ್ನ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಸಾವಿನ ಸುದ್ದಿ ಕೇಳಿ ದಿಗ್ಭಾಂತರಾಗಿ ಮೂರು ಮಂದಿ ಸಾವಿಗೀಡಾಗಿದ್ದಾರೆ .

ಸಿಂಗನಲ್ಲೂರ್ ಎಂಬಲ್ಲಿ 65ರ ಹರೆಯದ ವ್ಯಕ್ತಿಯೊಬ್ಬರು ಜಯಾ ಅವರ ಮರಣ ವಾರ್ತೆಯನ್ನು ಟೀವಿಯಲ್ಲಿ ವೀಕ್ಷಿಸುತ್ತಿದ್ದಾಗ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ನಿನ್ನೆ ಮಧ್ಯಾಹ್ನ ತುಡಿಯಾಲೂರ್ ಎಂಬಲ್ಲಿ ಪಳನಿಯಮ್ಮಾಳ್ ಎಂಬವರು ಹೃದಯಾಘಾತದಿಂದ ಸಾವಿಗೀಡಾಗಿದ್ದು, ಈರೋಡ್‍ನಲ್ಲಿ  38ರ ಹರೆಯದ ಎಐಎಡಿಎಂಕೆ ಕಾರ್ಯಕರ್ತರೊಬ್ಬರು ನಿನ್ನೆ ಹೃದಯಸ್ತಂಭನದಿಂದ ಸಾವನ್ನಪ್ಪಿದ್ದರು.

ಜಯಲಲಿತಾ ನಿಧನರಾದರೆಂದು ದುಃಖಿತರಾದ ಲೋಗನಾಥನ್ ಎಂಬ ವ್ಯಕ್ತಿಯೊಬ್ಬರು ಇಂದು  ಬೆಳಗ್ಗೆ 50 ಅಡಿ ಎತ್ತರದ ಮೊಬೈಲ್ ಟವರ್‍ ನಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಏತನ್ಮಧ್ಯೆ, ಅನ್ನೂರ್ ಎಂಬಲ್ಲಿ ರಾಮಚಂದ್ರನ್ ಎಂಬ ಎಐಎಡಿಎಂಕೆ ಕಾರ್ಯಕರ್ತರೊಬ್ಬರು ನಿನ್ನೆ ರಾತ್ರಿ ದೇಹಕ್ಕೆ ಬೆಂಕಿ ಹಚ್ಚಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ರಾಮಚಂದ್ರನ್ ಅವರಿಗೆ ಶೇ.60ರಷ್ಟು ಸುಟ್ಟಗಾಯಗಳಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ .

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry