ಶನಿವಾರ, ಡಿಸೆಂಬರ್ 7, 2019
25 °C

ಡೊನಾಲ್ಡ್ ಟ್ರಂಪ್‌ ಆಯ್ಕೆ ಅಧಿಕೃತ

ಪಿಟಿಐ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್: ಗೆಲುವಿಗೆ ಅಗತ್ಯವಿದ್ದ ಎಲೆಕ್ಟೋರಲ್ ಕಾಲೇಜ್ ಮತಗಳನ್ನು ಪಡೆಯುವ ಮೂಲಕ ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ 45ನೇ ಅಧ್ಯಕ್ಷರಾಗಿ ಅಧಿಕೃತವಾಗಿ ಆಯ್ಕೆಯಾಗಿದ್ದಾರೆ.

ಹಿಲರಿ ಕ್ಲಿಂಟನ್ ವಿರುದ್ಧ ಟ್ರಂಪ್ ಅವರು ಭರ್ಜರಿ ಗೆಲುವು ದಾಖಲಿಸಿದ ಆರು ವಾರಗಳ ಬಳಿಕ ಎಲೆಕ್ಟೋರಲ್ ಕಾಲೇಜ್ ಇದಕ್ಕೆ ಅಧಿಕೃತ ಮುದ್ರೆ ಒತ್ತಿದೆ.

ಎಲೆಕ್ಟೋರಲ್ ಕಾಲೇಜ್‌ನ ಸದಸ್ಯರು ಅಧ್ಯಕ್ಷರನ್ನು ಅಧಿಕೃತವಾಗಿ ಆಯ್ಕೆ ಮಾಡಲು ತಮ್ಮ ತಮ್ಮ ರಾಜ್ಯಗಳ ರಾಜಧಾನಿಗಳಲ್ಲಿ ಸಭೆ ಸೇರಿದ್ದರು.

ಹಿಲರಿ 227 ಹಾಗೂ ಟ್ರಂಪ್ 304 ಎಲೆಕ್ಟೋರಲ್ ಮತ ಪಡೆದಿದ್ದಾರೆ.

ಪ್ರತಿಕ್ರಿಯಿಸಿ (+)