ವಾಯುಪಡೆ, ಸೇನೆಯ ಹೊಸ ಮುಖ್ಯಸ್ಥರ ಅಧಿಕಾರ ಸ್ವೀಕಾರ

7

ವಾಯುಪಡೆ, ಸೇನೆಯ ಹೊಸ ಮುಖ್ಯಸ್ಥರ ಅಧಿಕಾರ ಸ್ವೀಕಾರ

Published:
Updated:
ವಾಯುಪಡೆ, ಸೇನೆಯ ಹೊಸ ಮುಖ್ಯಸ್ಥರ ಅಧಿಕಾರ ಸ್ವೀಕಾರ

ನವದೆಹಲಿ: ಭಾರತೀಯ ಸೇನೆಯ ನೂತನ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಬಿಪಿನ್ ರಾವತ್ ಶನಿವಾರ ಅಧಿಕಾರ ಸ್ವೀಕರಿಸಿದರು. ವಾಯುಪಡೆಯ ಮುಖ್ಯಸ್ಥರಾಗಿ ಬೀರೇಂದರ್ ಸಿಂಗ್ ಧನೋವಾ ಸಹ ಅಧಿಕಾರ ಸ್ವೀಕರಿಸಿದರು. ಬಿಪಿನ್ ಅವರು ಸೇನೆಯ 27ನೇ ಮುಖ್ಯಸ್ಥರಾಗಿದ್ದರೆ, ಧನೋವಾ ಅವರು ವಾಯುಪಡೆಯ 25ನೇ ಮುಖ್ಯಸ್ಥರಾಗಿದ್ದಾರೆ.ಈ ಮಧ್ಯೆ, ನೂತನ ಸೇನಾ ಮುಖ್ಯಸ್ಥರ ನೇಮಕಕ್ಕೆ ವಿರೋಧ ವ್ಯಕ್ತವಾಗಿದ್ದ ವಿಷಯಕ್ಕೆ ಸಂಬಂಧಿಸಿ ಹಬ್ಬಿದ್ದ ವದಂತಿಗಳಿಗೆ ಸೇನೆಯ ಪೂರ್ವ ವಲಯದ ಕಮಾಂಡರ್ ಲೆ. ಜನರಲ್ ಪ್ರವೀಣ್ ಬಕ್ಷಿ ತೆರೆ ಎಳೆದಿದ್ದಾರೆ.ಹೊಸ ವರ್ಷಾಚರಣೆ ಪ್ರಯುಕ್ತ ಕೋಲ್ಕತ್ತದಲ್ಲಿ ನಡೆದ ಕಾರ್ಯಕ್ರಮ ವೊಂದರಲ್ಲಿ ಮಾತನಾಡಿದ ಅವರು, ‘ಸೇನಾ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿರುವ ಜನರಲ್ ಬಿಪಿನ್ ರಾವತ್ ಅವರಿಗೆ ಸಂಪೂರ್ಣ ಸಹಕಾರ ನೀಡುತ್ತೇನೆ. ರಾಜೀನಾಮೆ ನೀಡುವುದಿಲ್ಲ’ ಎಂದು ತಿಳಿಸಿದ್ದಾರೆ. ದೂರವಾಣಿ ಕರೆ ಮಾಡಿ ಬಿಪಿನ್ ಅವರಿಗೆ ಅಭಿನಂದನೆ ತಿಳಿಸಿರುವುದಾಗಿಯೂ ಹೇಳಿದ್ದಾರೆ.ವದಂತಿಗಳನ್ನು ಹರಡಬಾರದು ಎಂದು ಮಾಧ್ಯಮಗಳಲ್ಲಿ ಮತ್ತು ಜನರಲ್ಲಿ ಮನವಿ ಮಾಡಿದ ಅವರು, ಸೇನೆ ಮತ್ತು ದೇಶದ ಒಳಿತಿಗೆ ಕೊಡುಗೆ ನೀಡುವ ಬಗ್ಗೆ ಎಲ್ಲರೂ ಗಮನಹರಿಸೋಣ ಎಂದಿದ್ದಾರೆ.ಸೇನಾ ಮುಖ್ಯಸ್ಥ ಹುದ್ದೆಗೆ ಆಯ್ಕೆಯಾಗುವ ಸಂಭಾವ್ಯರಲ್ಲಿ ಬಕ್ಷಿ ಅವರ ಹೆಸರು ಮುಂಚೂಣಿಯಲ್ಲಿತ್ತು. ಆದರೆ, ಸೇವಾ ಹಿರಿತನ ಕಡೆಗಣಿಸಿ ಬಿಪಿನ್ ಅವರನ್ನು ಆಯ್ಕೆ ಮಾಡಲಾಗಿತ್ತು. ಡಿ. 21ರಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರನ್ನು ಬಕ್ಷಿ ಭೇಟಿಯಾಗಿ ಮಾತುಕತೆ ನಡೆಸಿದ್ದರು. ನಂತರ, ಅವಧಿಗೂ ಮುನ್ನ ಭಕ್ಷಿ ನಿವೃತ್ತಿಯಾಗಲಿದ್ದಾರೆ ಎಂಬ ವದಂತಿ ಹಬ್ಬಿತ್ತು. ಕ್ರಿಸ್‌ಮಸ್ ಬಳಿಕ ಬಕ್ಷಿ ಅವರು ರಜೆ ಮೇಲೆ ತೆರಳಿದ್ದರು. ಇದು ವದಂತಿಗಳಿಗೆ ಪುಷ್ಟಿ ನೀಡಿತ್ತು.141 ಉಗ್ರರ ಹತ್ಯೆ

2016ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ 141 ಉಗ್ರರನ್ನು ಹತ್ಯೆ ಮಾಡಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಗಳಲ್ಲಿ 60 ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ನಿರ್ಗಮಿತ ಸೇನಾ ಮುಖ್ಯಸ್ಥ ದಲ್ಬೀರ್ ಸಿಂಗ್ ಸುಹಾಗ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry