ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಶೇಷ ನಾಯಕ’ರ ಕಥನಗಳು

Last Updated 31 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ
ಅಂಗವಿಕಲ ಸಾಧಕರ ಕತೆಗಳನ್ನು ಹೇಳುವ ಈ ಪುಸ್ತಕವನ್ನು ಸುಧಾ ಮೆನನ್‌, ವಿ.ಆರ್. ಫಿರೋಸ್‌ ಬರೆದಿದ್ದಾರೆ. ಇಂಗ್ಲಿಷ್‌ ಭಾಷೆಯಲ್ಲಿ ಬರೆಯಲಾಗಿರುವ ಈ ಕಥನಗಳನ್ನು ಪತ್ರಕರ್ತರಾದ ಎ.ಆರ್‌. ಮಣಿಕಾಂತ್‌, ಹ.ಚ. ನಟೇಶ ಬಾಬು ಕನ್ನಡಕ್ಕೆ ಅನುವಾದಿಸಿದ್ದಾರೆ. 
 
ಅಂಗವಿಕಲರನ್ನು ಸಮಾಜದಲ್ಲಿ ಸಹಾನುಭೂತಿಯಿಂದ ನೋಡುವವರೇ ಹೆಚ್ಚು. ತಮ್ಮ ಅಂಗವಿಕಲತೆಯನ್ನು ನೆಪವಾಗಿಸಿಕೊಳ್ಳದೇ ಸಾಧನೆ ಮಾಡಿದವರು ಅನೇಕರಿದ್ದಾರೆ. ಅವರಲ್ಲಿ 15 ಜನರ ಬದುಕಿನ ಕಥೆ ಇಲ್ಲಿದೆ. ಅವರ ಸಾಧನೆಯ ದಾರಿ ಸುಲಭದ್ದಲ್ಲ. ಆ ದಾರಿಯ ಸಾಗಿ ಬದುಕನ್ನು ತಮ್ಮದೇ ರೀತಿಯಲ್ಲಿ ಎದುರಿಸಿದವರ ಮನಕಲಕುವ ಕಥೆಗಳು ಇವು.
 
ಕನ್ನಡಿಗರಾದ ಮಾಲತಿ ಹೊಳ್ಳ, ಪ್ಯಾರಾಒಲಿಂಪಿಕ್ಸ್‌ನಲ್ಲಿ ಪದಕ ಗಳಿಸಿದ ಗಿರೀಶ್‌ ಎಚ್‌.ಎನ್‌. ಈ ಪುಸ್ತಕದಲ್ಲಿದ್ದಾರೆ. ಇಲ್ಲಿನ ಎಲ್ಲರ ಸಾಧನೆಯ ನಿರೂಪಣೆಗಳು ಓದುಗರ ಮನದಲ್ಲಿ ಸ್ಫೂರ್ತಿ, ಪ್ರೇರಣೆ ಹಾಗೂ ಸಕಾರಾತ್ಮಕ ಯೋಚನೆಗಳನ್ನು ಹುಟ್ಟಿಸಬಲ್ಲವು. ಇವರು ದೈಹಿಕವಾಗಿ ಉಳಿದವರಿಗಿಂತ ಕೊಂಚ ಕಡಿಮೆ ಎನ್ನಿಸಿದರೂ ಮಾನಸಿಕವಾಗಿ ಬಲಿಷ್ಠರು. ಅವರೆಲ್ಲರ ಸಾಧನೆಯ ಹಿಂದಿರುವುದು ದೃಢನಿರ್ಧಾರ, ಸತತಪರಿಶ್ರಮ ಹಾಗೂ ಪ್ರತಿಭೆ. 
 
ಬದುಕು ಇರುವುದು ಸಾಧಿಸುವುದಕ್ಕಾಗಿ ಎಂಬುದನ್ನು ಇಲ್ಲಿನ ಎಲ್ಲ ಕಥೆಗಳು ಧ್ವನಿಸುತ್ತವೆ. ಇವರೆಲ್ಲರೂ ನಮ್ಮ ನಡುವಿನ ‘ವಿಶೇಷ ನಾಯಕ’ರೇ ಆಗಿದ್ದಾರೆ. ಬದುಕನ್ನು ಸಕಾರಾತ್ಮಕವಾಗಿ ನೋಡುವಂತೆ ಇಲ್ಲಿನ ಬರವಣಿಗೆ ಇದೆ. ಇದರ ಇಬ್ಬರು ಲೇಖಕರು ಸಾಧಕರ ಯಶೋಗಾಥೆಯನ್ನು ಹೇಳುತ್ತಲೇ ಅವರ ವ್ಯಕ್ತಿತ್ವವನ್ನೂ ಲೇಖಕರು ಪರಿಚಯ ಮಾಡಿಕೊಡುತ್ತಾರೆ. ಲೇಖನಗಳ ಆರಂಭದಲ್ಲಿ ಪ್ರಕಟವಾದ ರೇಖಾಚಿತ್ರಗಳು ಸಾಧಕರ ಸಾಧನೆಯನ್ನು ಅರ್ಥಪೂರ್ಣವಾಗಿ ಅಭಿವ್ಯಕ್ತಿಸುತ್ತವೆ.
 
ಇವು ಕನ್ನಡದ ಕಥನಗಳೇ ಹೌದೆನ್ನುವಷ್ಟು ಅನುವಾದ ಚೆನ್ನಾಗಿದೆ.
 
**
ಗಿಫ್ಟೆಡ್‌ (ವಿಶೇಷಚೇತನರ ಸ್ಫೂರ್ತಿದಾಯಕ ಕಥೆಗಳು)
ಮೂಲ: ಸುಧಾ ಮೆನನ್‌, ವಿ.ಆರ್. ಫಿರೋಸ್‌
ಕನ್ನಡಕ್ಕೆ: ಎ.ಆರ್‌. ಮಣಿಕಾಂತ್‌, ಹ.ಚ. ನಟೇಶ ಬಾಬು
ಪು: 216, ಬೆ: ₹ 180
ಪ್ರ: ವಸಂತ ಪ್ರಕಾಶನ ನಂ. 360, 10ನೇ ‘ಬಿ’ ಮುಖ್ಯರಸ್ತೆ, 3ನೇ ಬ್ಲಾಕ್‌, ಜಯನಗರ, ಬೆಂಗಳೂರು– 560011

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT