ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2022ರಲ್ಲಿ ಆಗಸವನ್ನು ಬೆಳಗಲಿದೆ ಹೊಸ ನಕ್ಷತ್ರ!

Last Updated 10 ಜನವರಿ 2017, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್: 2022ರ ವೇಳೆಗೆ ಅವಳಿ ನಕ್ಷತ್ರಗಳು ಸಮ್ಮಿಲನಗೊಳ್ಳುವ ಹಾಗೂ ಸ್ಫೋಟಗೊಳ್ಳುವ ಪ್ರಕ್ರಿಯೆ ನಡೆಯಲಿದ್ದು, ಇದರಿಂದ ರಾತ್ರಿ ಆಗಸದಲ್ಲಿ 10 ಸಾವಿರ ಪಟ್ಟು ಹೆಚ್ಚು ಬೆಳಕು ಸೂಸುವ ಹೊಸ ನಕ್ಷತ್ರ ಗೋಚರವಾಗಲಿದೆ ಎಂದು ವಿಜ್ಞಾನಿಗಳು ಭವಿಷ್ಯ ನುಡಿದಿದ್ದಾರೆ.

ಅಪಾಚೆ ಪಾಯಿಂಟ್ ವೀಕ್ಷಣಾಲಯ ಮತ್ತು ಅಮೆರಿಕದ ವ್ಯೋಮಿಂಗ್ ವಿಶ್ವವಿದ್ಯಾಲಯದ ಸಂಶೋಧಕರ ಪ್ರಕಾರ ಬರಿಗಣ್ಣಿಗೆ ಈ ನಕ್ಷತ್ರ ಗೋಚರಿಸಲಿದೆ.
ಹಿಂದೆಂದೂ  ಇಂತಹದ್ದು ನಡೆದಿರಲಿಲ್ಲ. ಈ ಪ್ರಕ್ರಿಯೆಗೆ ವರ್ಷ ತೆಗೆದುಕೊಳ್ಳಲಿದೆ  ಎಂದು ಅಮೆರಿಕದ ಕಾಲ್ವಿನ್ ಕಾಲೇಜಿನ ಪ್ರಾಧ್ಯಾಪಕ ಲ್ಯಾರಿ ಮೂಲ್ನರ್ ಅಭಿಪ್ರಾಯಪಟ್ಟಿದ್ದಾರೆ.

ಈ ಹೊಸ ನಕ್ಷತ್ರವು ಸಿಗ್ನಸ್ (ರಾಜಹಂಸ) ನಕ್ಷತ್ರಪುಂಜದ ಹಾಗೂ ಪ್ರಸಿದ್ಧ ‘ಶಿಲುಬೆ ವಿನ್ಯಾಸ’ದಲ್ಲಿ (ನಾರ್ತರ್ನ್ ಕ್ರಾಸ್ ಸ್ಟಾರ್ ಪ್ಯಾಟರ್ನ್)  ಸೇರಿಹೋಗಲಿದೆ.

ಈ ನಕ್ಷತ್ರವನ್ನು ಕೆಐಸಿ 9832227 ಎಂದು ಗುರುತಿಸಲಾಗಿದೆ. ಕಡಲೆಕಾಯಿಯ ಎರಡು ಬೀಜಗಳಿಗೆ ಒಂದೇ ಕೋಶವಿರುವಂತೆ ಎರಡೂ ನಕ್ಷತ್ರಗಳಿಗೆ ಒಂದೇ ವಾತಾವರಣ ಇರಲಿದೆ.

ಈ ಮೊದಲಿನ ಅಂಕಿಅಂಶಗಳನ್ನು ತುಲನೆ ಮಾಡಿದಾಗ ಕೆಪ್ಲರ್ ಉಪಗ್ರಹ ನೀಡಿದ ಅಂಕಿಅಂಶಗಳ ಪ್ರಕಾರ ಕಕ್ಷೀಯ ಅವಧಿಯಲ್ಲಿ ಇಳಿಕೆ (ಸುಮಾರು 11 ಗಂಟೆ) ಕಂಡುಬಂದಿದೆ. 2013 ಮತ್ತು 2014ರಲ್ಲಿ ಈ ಅವಧಿಯಲ್ಲಿ ಸಾಕಷ್ಟು ವ್ಯತ್ಯಾಸ ದಾಖಲಾಗಿತ್ತು. ಮುಂದಿನ ವರ್ಷ ಈ ನಕ್ಷತ್ರದ ತರಂಗಾಂತರ, ರೇಡಿಯೊ, ಅತಿಗೆಂಪು ಮತ್ತು ಎಕ್ಸ್‌ರೇ ಕಿರಣಗಳ ಹೊರಸೂಸುವಿಕೆಯ ಅಧ್ಯಯನ ನಡೆಯಲಿವೆ. ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT