ಶಿಕಾಗೋ: ತಮ್ಮ ವಿದಾಯ ಭಾಷಣದ ವೇಳೆ ಭಾವುಕರಾದ ಅಮೆರಿಕದ ನಿರ್ಗಮಿತ ಅಧ್ಯಕ್ಷ ಬರಾಕ್ ಒಬಾಮ ತನ್ನ ಅಧಿಕಾರದ ಅವಧಿಯಲ್ಲಿ ಪ್ರತಿದಿನ ನಾನು ನಿಮ್ಮಿಂದ ಕಲಿಯುತ್ತಾ ಇದ್ದೆ, ನೀವು ನನ್ನನ್ನು ಉತ್ತಮ ಅಧ್ಯಕ್ಷ ಮತ್ತು ಉತ್ತಮ ಮನುಷ್ಯನನ್ನಾಗಿಸಿದಿರಿ ಎಂದಿದ್ದಾರೆ.
ಅಮೆರಿಕ ಈಗ ಉತ್ತಮ ಮತ್ತು ಸುದೃಢ ದೇಶವಾಗಿ ಮಾರ್ಪಟ್ಟಿದೆ. ದೇಶದಲ್ಲಿರುವ ತಾರತಮ್ಯವನ್ನು ಹೋಗಲಾಡಿಸಲು ಸಶಕ್ತ ಕಾನೂನುಗಳನ್ನು ಜಾರಿಗೆ ತರಬೇಕಾಗಿದೆ. ಆದರೆ ಕೇವಲ ಕಾನೂನುಗಳಿಂದ ಮಾತ್ರ ಈ ತಾರತಮ್ಯವನ್ನು ಹೋಗಲಾಡಿಸಲು ಸಾಧ್ಯವಿಲ್ಲ. ನಮ್ಮ ಮನಸ್ಸು ಕೂಡಾ ಬದಲಾಗಬೇಕು. ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬರ ಸಹಭಾಗಿತ್ವ ಮುಖ್ಯ ಎಂದು ಒಬಾಮ ಹೇಳಿದ್ದಾರೆ.
ಜನವರಿ 10 ಸೋಮವಾರ ರಾತ್ರಿ ಒಬಾಮ ವಿದಾಯ ಭಾಷಣ ಮಾಡಿದ್ದಾರೆ.

ಒಬಾಮ ವಿದಾಯ ಭಾಷಣದ ಮುಖ್ಯಾಂಶಗಳು

* ಕಳೆದ ಕೆಲವು ವಾರಗಳಿಂದ ನನಗೆ ಮತ್ತು ಮಿಶೆಲ್‍ಗೆ ನಿಮ್ಮ ಕಡೆಯಿಂದ ಶುಭ ಹಾರೈಕೆಗಳು ಸಿಕ್ಕಿವೆ, ಅದಕ್ಕೆಲ್ಲ ನಾನು ಈ ವೇಳೆ ಧನ್ಯವಾದ ಹೇಳುತ್ತೇನೆ.

* ನಾವು ಮುಂದೆ ಸಾಗಬೇಕಾದರೆ ಸಂಬಳದಲ್ಲಿ, ವಾಸಿಸುವ ಜಾಗದಲ್ಲಿ, ಶಿಕ್ಷಣ ವ್ಯವಸ್ಥೆಯಲ್ಲಿ ಯಾವುದೇ ರೀತಿಯ ತಾರತಮ್ಯ ಇರಬಾರದು.

* ನಮ್ಮ ದೇಶ ಸುದೃಢ ರಾಷ್ಟ್ರವಾಗಿದ್ದರೂ ಇಲ್ಲಿ ವರ್ಣ ಭೇದ ನೀತಿ ಇನ್ನೂ ಸವಾಲಾಗಿಯೇ ಉಳಿದುಕೊಂಡಿದೆ.

* ಕಳೆದ ಎಂಟು ವರ್ಷಗಳಲ್ಲಿ ಯಾವುದೇ ಉಗ್ರ ಸಂಘಟನೆಗೆ ಅಮೆರಿಕದ ನೆಲದ ಮೇಲೆ ದಾಳಿ ನಡೆಸಲು ಸಾಧ್ಯವಾಗಿಲ್ಲ.

* ಪ್ರತಿದಿನ ನಾನು ನಿಮ್ಮಿಂದ ಕಲಿಯುತ್ತಾ ಇದ್ದೆ, ನೀವು ನನ್ನನ್ನು ಉತ್ತಮ ಅಧ್ಯಕ್ಷ ಮತ್ತು ಉತ್ತಮ ಮನುಷ್ಯನನ್ನಾಗಿಸಿದಿರಿ.

* ಯಾವುದೇ ಕಾರ್ಯದಲ್ಲಿ ಸಾಮಾನ್ಯ ವ್ಯಕ್ತಿಗಳು ಭಾಗವಹಿಸಿದರೆ ಅಲ್ಲಿ ಬದಲಾವಣೆಯುಂಟಾಗುತ್ತದೆ ಎಂದು ನಾನು ಕಲಿತೆ. ಹಾಗಾಗಿ ಸದಾ ಭಾಗಿಯಾಗಿ, ಬದಲಾವಣೆಗೆ ಸಾಥ್ ನೀಡುತ್ತಿರಿ.

* ಪ್ರಜಾಪ್ರಭುತ್ವದಲ್ಲಿ ಸದಾ ಒಗ್ಗಟ್ಟು ಇರಲೇ ಬೇಕು. ನಾವು ಕೆಲವೊಮ್ಮೆ ಮುಗ್ಗರಿಸಬಹುದು ಹಾಗೆಯೇ ಎದ್ದು ನಿಲ್ಲಬಹುದು.

* ನಮ್ಮ ಮೌಲ್ಯಗಳಿಗೆ ಚ್ಯುತಿ ಬರದಂತೆ ನಾವು ಎಚ್ಚರ ವಹಿಸಬೇಕಾಗಿದೆ.

* ಪತ್ನಿ ಮಿಶೆಲ್ ಮತ್ತು ಉಪಾಧ್ಯಕ್ಷ ಜೋ ಬಿಡೆನ್‌ಗೆ ಧನ್ಯವಾದಗಳು

* ಟ್ರಂಪ್ ಅಮೆರಿಕದ ಉತ್ತಮ ಉತ್ತರಾಧಿಕಾರಿಯಾಗಲಿ ಎಂದು ನಾನು ಆಶಿಸುತ್ತೇನೆ

* ಇದೀಗ ಎಲ್ಲರಿಗೂ ಧನ್ಯವಾದ ಹೇಳುವ ಸರದಿ ನನ್ನದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.