ಭೈರಪ್ಪನವರ ಹೊಸ ಕಾದಂಬರಿ ‘ಉತ್ತರಕಾಂಡ’ 16ರಿಂದ ಲಭ್ಯ

7

ಭೈರಪ್ಪನವರ ಹೊಸ ಕಾದಂಬರಿ ‘ಉತ್ತರಕಾಂಡ’ 16ರಿಂದ ಲಭ್ಯ

Published:
Updated:
ಭೈರಪ್ಪನವರ ಹೊಸ ಕಾದಂಬರಿ ‘ಉತ್ತರಕಾಂಡ’ 16ರಿಂದ ಲಭ್ಯ

ಬೆಂಗಳೂರು: ಖ್ಯಾತ ಕಾದಂಬರಿಕಾರ ಡಾ.ಎಸ್‌.ಎಲ್‌. ಭೈರಪ್ಪನವರ ಹೊಸ ಕಾದಂಬರಿ ಬಿಡುಗಡೆಗೆ ಸಿದ್ಧವಾಗಿದೆ. ವಾಲ್ಮೀಕಿ ರಾಮಾಯಣದ ಕಥೆಯನ್ನು ಆಧರಿಸಿ ರಚಿತವಾಗಿರುವ ಈ ಕಾದಂಬರಿಗೆ ‘ಉತ್ತರಕಾಂಡ’ ಎಂದು ಹೆಸರಿಡಲಾಗಿದ್ದು, ಇದೇ 16ರಿಂದ ಪುಸ್ತಕದಂಗಡಿಗಳಲ್ಲಿ ದೊರೆಯಲಿದೆ.  

ಸುಮಾರು ಎರಡು ವರ್ಷಗಳ ಹಿಂದೆ ಅವರ ‘ಯಾನ’ ಕಾದಂಬರಿ ಪ್ರಕಟವಾಗಿ ದಾಖಲೆ ಪ್ರಮಾಣದಲ್ಲಿ ಮಾರಾಟವಾಗಿತ್ತು. ನಲವತ್ತು ವರ್ಷಗಳ ಹಿಂದೆ ‘ಪರ್ವ’ ಕಾದಂಬರಿಯಲ್ಲಿ ದ್ರೌಪದಿ, ಕುಂತಿ, ಗಾಂಧಾರಿಯ ಪಾತ್ರದ ಮೂಲಕ ಮಹಾಭಾರತವನ್ನು ಪುನರ್‌ ವ್ಯಾಖ್ಯಾನಿಸಿದ್ದರು. ಇದೀಗ ‘ಉತ್ತರಕಾಂಡ’ದಲ್ಲಿ ಸೀತೆಯ ಪಾತ್ರದ ಮೂಲಕ ರಾಮಾಯಣದ ಅರ್ಥಕ್ಕೆ ಹೊಸದಾದ ಆಯಾಮ ನೀಡಿದ್ದಾರೆ ಎನ್ನಲಾಗಿದೆ. 

ಬೆಂಗಳೂರಿನ ಸಾಹಿತ್ಯ ಭಂಡಾರ ಪ್ರಕಟಿಸಿರುವ ಈ ಹೊಸ ಕಾದಂಬರಿ 336 ಪುಟಗಳಿದ್ದು, ಕ್ಯಾಲಿಕೋ ಪ್ರತಿಯ ಬೆಲೆ ರೂ. 375. ಹೆಚ್ಚಿನ ವಿವರಗಳನ್ನು ಭೈರಪ್ಪ ಮಾಹಿತಿಯ ಹೊಸ ಜಾಲತಾಣ slbhyrappa.inನಲ್ಲಿ ಲಭ್ಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry