ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವದ ಅತಿ ಎತ್ತರದ ಟೆಲಿಸ್ಕೋಪ್

ಗುರುತ್ವದ ಅಲೆ ಪತ್ತೆಗೆ ಚೀನಾದಿಂದ ಮತ್ತೊಂದು ಯೋಜನೆ
Last Updated 12 ಜನವರಿ 2017, 19:30 IST
ಅಕ್ಷರ ಗಾತ್ರ

ಚೀನಾ ದೇಶವು ವಿಶ್ವ ಸೃಷ್ಟಿಯ ರಹಸ್ಯ ತಿಳಿಸುವ ಬಿಗ್ ಬ್ಯಾಂಗ್ ಸಿದ್ಧಾಂತದ ಬೆನ್ನುಹತ್ತಿದೆ.  ಸೃಷ್ಟಿ ಕಾಲದಲ್ಲಿ ಹೊರಹೊಮ್ಮಿದ ಗುರುತ್ವ ಅಲೆಗಳನ್ನು ಪತ್ತೆ ಹಚ್ಚಲು ಟಿಬೆಟ್‌ನ ಅತಿಎತ್ತರದ ಪ್ರದೇಶದಲ್ಲಿ ದೂರದರ್ಶಕ (ಟೆಲಿಸ್ಕೋಪ್) ನಿರ್ಮಾಣ ಕಾರ್ಯ ಆರಂಭಿಸಿದೆ.

ಯೋಜನೆ ಹೆಸರು: ‘ಎನ್ಗರಿ ನಂ.1’
ಉದ್ದೇಶ: ಬ್ರಹ್ಮಾಂಡದ ಕ್ಷೀಣ ತರಂಗಾಂತರಗಳನ್ನು (ಅಲೆಗಳನ್ನು) ಪತ್ತೆ ಹಚ್ಚುವುದು. ಈ ಮೂಲಕ ಸೃಷ್ಟಿ ಉಗಮದ ರಹಸ್ಯ ತಿಳಿಯುವುದು.
ಸ್ಥಳ: ಭಾರತ–ಚೀನಾ–ಟಿಬೆಟ್ ಗಡಿಯ ‘ಎನ್ಗರಿ’ ಪ್ರದೇಶದಲ್ಲಿ ನಿರ್ಮಾಣ
ಸ್ಥಳ ಮಹತ್ವ: ಗುರುತ್ವದ ಅಲೆ ಪತ್ತೆಹಚ್ಚಲು ಉತ್ತರ ಗೋಳಾರ್ಧದಲ್ಲಿರುವ ಅತ್ಯುತ್ತಮ ಸ್ಥಳ ‘ಎನ್ಗರಿ’. ಇಲ್ಲಿ ಗಾಳಿ ವಿರಳವಾಗಿದ್ದು, ವಾತಾವರಣದ ತೇವಾಂಶ ಕೂಡಾ ಕಡಿಮೆಯಿರುವುದರಿಂದ ಅಲೆಗಳನ್ನು ಪತ್ತೆ ಹಚ್ಚಲು ಹೆಚ್ಚು ಅವಕಾಶವಿದೆ.
ನಿರ್ಮಾಣ ವೆಚ್ಚ:  ₹127 ಕೋಟಿ (ಮೊದಲ ಟೆಲಿಸ್ಕೋಪ್)
ನಿರ್ಮಾಣ ಅವಧಿ: 5 ವರ್ಷ
ಎತ್ತರ: ಸಮುದ್ರಮಟ್ಟದಿಂದ 5000 ಅಡಿ ಎತ್ತರದಲ್ಲಿ ನಿರ್ಮಾಣ

ಗುರುತ್ವದ ಅಲೆ: ಗುರುತ್ವದ ಅಲೆಗಳ ಬಗ್ಗೆ 1915ರಲ್ಲಿ ಮೊಟ್ಟಮೊದಲು ಬೆಳಕು ಚೆಲ್ಲಿದವರು ಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೀನ್‌.  ಸಾಮಾನ್ಯ ಸಾಪೇಕ್ಷ ಸಿದ್ಧಾಂತದಲ್ಲಿ ಗುರುತ್ವದ ಅಲೆಗಳ ಬಗ್ಗೆ ಅವರು ವಿಶ್ಲೇಷಿಸಿದ್ದರು. ಎರಡು ಆಕಾಶಕಾಯಗಳ ಘರ್ಷಣೆಯಿಂದ ಗುರುತ್ವದ ಅಲೆಗಳು ಹೊರಹೊಮ್ಮುತ್ತವೆ ಎಂದು ಸಿದ್ಧಾಂತ ತಿಳಿಸುತ್ತದೆ.

ಮೊದಲು ಪತ್ತೆ: 2015ರಲ್ಲಿ ಅಮೆರಿಕದ ಲೈಗೊ (ಲೇಸರ್ ಇಂಟರ್‌ಫೆರೋಮೀಟರ್ ವೇವ್ ಅಬ್ಸರ್ವೇಟರಿ) ಮೊಟ್ಟ ಮೊದಲ ಬಾರಿಗೆ ಗುರುತ್ವದ ಅಲೆಗಳನ್ನು ಪತ್ತೆಹಚ್ಚಿತ್ತು. 130 ಕೋಟಿ ವರ್ಷಗಳ ಹಿಂದೆ ಎರಡು ಕಪ್ಪುರಂಧ್ರಗಳು ಸಮ್ಮಿಲನ ಹೊಂದಿದಾಗ ಉಂಟಾದ ಅಲೆಗಳು ಇವು.  ಐನ್‌ಸ್ಟೀನ್‌ ತನ್ನ ಸಿದ್ಧಾಂತ ಮಂಡಿಸಿದ 100 ವರ್ಷಗಳ ಬಳಿಕ ಗುರುತ್ವದ ಅಲೆಗಳನ್ನು ಪತ್ತೆಹಚ್ಚಲಾಗಿತ್ತು.

ಸೃಷ್ಟಿ ರಹಸ್ಯ ಅರಿಯುವ ಯತ್ನ: ಬಿಗ್‌ ಬ್ಯಾಂಗ್ ಸಿದ್ಧಾಂತದ ಪ್ರಕಾರ, 1380 ಕೋಟಿ ವರ್ಷಗಳ ಹಿಂದೆ ಜಗತ್ತಿನ ಸೃಷ್ಟಿ ವೇಳೆ ಬಿಡುಗಡೆಯಾದ ಅಲೆಗಳನ್ನು  (ಈಗ ಕ್ಷೀಣ ಸ್ವರೂಪದ ಅಲೆಗಳು) ಪತ್ತೆಹಚ್ಚುವುದು ಟಿಬೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಟೆಲಿಸ್ಕೋಪ್ ಉದ್ದೇಶ ಎಂದು ಚೀನಾ ವಿಜ್ಞಾನ ಅಕಾಡೆಮಿ (ಸಿಎಎಸ್‌) ತಿಳಿಸಿದೆ.

2015ರಲ್ಲಿ ಮೊದಲ ಯೋಜನೆ: ಗುರುತ್ವದ ಅಲೆ ಪತ್ತೆ ಹಚ್ಚಲು ಚೀನಾ 2015ರಲ್ಲಿ ಟಿಯಾಂಕ್ವಿನ್‌ನಲ್ಲಿ ಮೊದಲ ಯೋಜನೆ ಆರಂಭಿಸಿತ್ತು. ನಾಲ್ಕು ಹಂತಗಳ ಈ ಯೋಜನೆಯಲ್ಲಿ ಉನ್ನತ ಭೂಕಕ್ಷೆಗೆ ಮೂರು ಉಪಗ್ರಹಗಳನ್ನು ಕಳುಹಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT