ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊರವಪ್ಪನ ಪವಾಡ; ಬೆರಗಾದ ಜನ

ಬನದ ಹುಣ್ಣಿಮೆ: ಕಬ್ಬಿಣದ ಸರಪಳಿ ತುಂಡು, ದೇಹ ಹೊಕ್ಕ ಸರಳುಗಳು, ಉಘೇ ಉದ್ಘೋಷ
Last Updated 13 ಜನವರಿ 2017, 6:08 IST
ಅಕ್ಷರ ಗಾತ್ರ
ಮುಂಡರಗಿ: ಬನದ ಹುಣ್ಣಿಮೆಯ ಅಂಗ ವಾಗಿ ತಾಲ್ಲೂಕಿನ ಕೊರ್ಲಹಳ್ಳಿ ಗ್ರಾಮದ ಹೊರವಲಯದಲ್ಲಿ ಇರುವ ಮೈಲಾರ ಲಿಂಗನ ಸಿಬಾರಗಟ್ಟೆಯಲ್ಲಿ ಗುರುವಾರ ಹಲವಾರು ವೈವಿಧ್ಯಮಯ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾ ಗಿತ್ತು. ಮುಂಜಾನೆ ಮೈಲಾರಲಿಂಗಪ್ಪನಿಗೆ ಅಭಿಷೇಕ ಸಲ್ಲಿಸಿ ಹಲವು ಬಗೆಯ ಹೂವುಗಳಿಂದ ಸಿಬಾರಗಟ್ಟೆಯನ್ನು ಅಲಂಕರಿಸಿದ್ದು ವಿಶೇಷವಾಗಿತ್ತು. 
 
ಪೂಜೆಯ ನಂತರ ಗ್ರಾಮದ ಮುಖ್ಯ ಬೀದಿಗಳಲ್ಲಿ ಬೆಲ್ಲದ ಬಂಡಿಯ ಮೆರವ ಣಿಗೆಯನ್ನು ಕೈಗೊಳ್ಳಲಾಯಿತು. ಪೂರ್ಣ ಕುಂಭ ಹೊತ್ತ ಮಹಿಳೆಯರು ಮೆರವ ಣಿಗೆಯ ಮುಂಚೂಣಿಯಲ್ಲಿದ್ದರು. ಡೊಳ್ಳು ಹೊಡೆತದ ಲಯಕ್ಕೆ ತಕ್ಕಂತೆ ಗೊರವಪ್ಪನವರು ಮೆರವಣಿಗೆ ಉದ್ದಕ್ಕೂ ಹೆಜ್ಜೆ ಹಾಕುತ್ತಾ ಸಿಬಾರಗಟ್ಟೆ ತಲುಪಿ ದರು.
ಸಿಬಾರಗಟ್ಟೆಯಲ್ಲಿ ಗೊರವಪ್ಪನ ವರು ಹಲವಾರು ಪವಾಡ ತೋರಿಸಿ ಭಕ್ತರನ್ನು ಮಂತ್ರಮುಗ್ಧಗೊಳಿಸಿದರು. 
 
ನವಲಗುಂದ ತಾಲ್ಲೂಕಿನ ಶಿರಕೋಳ ಗ್ರಾಮದ ಮಲ್ಲಪ್ಪ ಗೊರವರ ಎಂಬ ಗೊರವಪ್ಪ ಸುಮಾರು 25 ಸುಲಿದ ತೆಂಗಿನ ಕಾಯಿಗಳನ್ನು ತನ್ನ ತಲೆಗೆ ಅಪ್ಪಳಿಸಿಕೊಂಡು ಒಡೆದು ಹಾಕಿದನು. ಒಂದೊಂದು ಕಾಯಿಯನ್ನು ಒಡೆಯು ವಾಗಲೂ ನೆರೆದಿದ್ದ ಜನರು ‘ಏಳು ಕೋಟಿ, ಏಳುಕೋಟಿ, ಏಳುಕೋಟಿ... ಚಾಂಗುಭಲಾ, ಚಾಂಗುಭಲಾ...’ ಎಂದು ಹರ್ಷೋದ್ಘಾರ ಮಾಡುತ್ತಿದ್ದರು.
 
ಸಿಬಾರಗಟ್ಟೆಯ ಮುಂದೆ ನಿಲ್ಲಿಸಿದ್ದ ಬೃಹತ್ ಕಲ್ಲಿಗೆ ಕಟ್ಟಿದ್ದ ಕಬ್ಬಿಣದ ಸರಪಳಿ ಯನ್ನು ಕೊರ್ಲಹಳ್ಳಿ ಗ್ರಾಮದ ಜುಂಜಪ್ಪ ಕೆಲೂರ ಎಂಬ ಗೊರವಪ್ಪ ಕೈಯಿಂದ ಎಳೆದು ತುಂಡು ಮಾಡುತ್ತಿದ್ದಂತೆ ನೆರೆ ದಿದ್ದ ಭಕ್ತರು ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತ ಪಡಿಸಿದರು. ಕಬ್ಬಿಣದ ಸರಪಳಿ ಹರಿದ ಗೊರವಪ್ಪನಿಗೆ ನೆರೆದಿದ್ದ ಜನ ಬಂಢಾ ರದ ಮಳೆಗರೆದರು.
 
ಸುಮಾರು 25 ಅಡಿ ಉದ್ದದ ತಂತಿ ಯನ್ನು ಏಕಕಾಲದಲ್ಲಿ ಸುಮಾರು 25 ಜನ ಗೊರವಪ್ಪನವರು ತಮ್ಮ ಕಾಲು ಗಳಿಗೆ ಚುಚ್ಚಿಕೊಂಡು ತಂತಿ ಪವಾಡ ಮಾಡಿದರು. ಕೆಲವು ಗೊರವಪ್ಪಗಳು ತಮ್ಮ ಕಾಲಿನ ಹಿಂಬದಿಗೆ (ಮೀನ ಖಂಡಕ್ಕೆ) ದಪ್ಪನೆಯ ಕಬ್ಬಿಣದ ಸರಳನ್ನು ಚುಚ್ಚಿಕೊಂಡು ನೋಡುಗರ ಮೈನೆವಿರೇ ಳುವಂತೆ ಮಾಡಿದರು. ಕೆಲವರು ತಮ್ಮ ಪಾದದ ಹಿಮ್ಮಡಿಗೆ ಕಬ್ಬಿಣದ ಸಲಾಕೆ ಚುಚ್ಚಿಕೊಂಡು ಹರಕೆ ತೀರಿಸಿದರು.
 
ಗೊರವಪ್ಪನವರು ವಿವಿಧ ರೀತಿಯ ಪವಾಡ ಮಾಡುತ್ತಿದ್ದಂತೆ ನೆರೆದಿದ್ದ ಭಕ್ತ ರೆಲ್ಲ ‘ಉಘೇ....ಉಘೇ.....’ ಎಂದು ಅವ ರನ್ನು ಹುರಿದುಂಬಿಸುತ್ತಿದ್ದರು. ಕೆಲವು ಜನರು ಗೊರವಪ್ಪನವರಿಗೆ ದೃಷ್ಟಿ ತಾಗ ದಿರಲಿ ಎಂದು ಲಿಂಬೆಹಣ್ಣುಗಳನ್ನು ಕತ್ತರಿಸಿ ಒಗೆಯುತ್ತಿದ್ದರು. ಎಲ್ಲ ಧಾರ್ಮಿಕ ವಿಧಿ ವಿಧಾನಗಳು ಪೂರ್ಣಗೊಂಡ ನಂತರ ಗೊರವಪ್ಪನವರ ಡೋಣಿಯನ್ನು ತುಂಬಿಸಿದರು. ನಂತರ ಮಧ್ಯಾಹ್ನ ಸಾಮೂಹಿಕವಾಗಿ ಪ್ರಸಾದ ಸೇವಿಸಿದರು.
 
ಮಾಜಿ ಶಾಸಕ ರಾಮಣ್ಣ ಲಮಾಣಿ, ಎಪಿಎಂಸಿ ನೂತನ ಸದಸ್ಯ ರವೀಂದ್ರ ಉಪ್ಪಿನಬೆಟಗೇರಿ, ಮುಂಖಡದಾರ ಕೆ.ವಿ. ಹಂಚಿನಾಳ, ಹೇಮಗಿರೀಶ ಹಾವಿನಾಳ, ಮದರಸಾಬ್ ಸಿಂಗನಮಲ್ಲಿ, ಕೊಪ್ಪಣ್ಣ ಕೊಪ್ಪಣ್ಣವರ, ಹನುಮಪ್ಪ ಶೀರನಹಳ್ಳಿ, ಕೋಟೆಶಪ್ಪ ಮೇಟಿ, ನಿಂಗಪ್ಪ ಕೊಳಲ, ಜಗದೀಶ ರಾಜೂರ, ಗ್ರಾಮ ಪಂಚಾಯ್ತಿ ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.
 
*
-ಕಾಶಿನಾಥ ಬಿಳಿಮಗ್ಗದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT