ಭಾನುವಾರ, ಡಿಸೆಂಬರ್ 8, 2019
20 °C

ಇಂದು ಟ್ರಂಪ್‌ ಪ್ರಮಾಣ ವಚನ

ಪಿಟಿಐ Updated:

ಅಕ್ಷರ ಗಾತ್ರ : | |

ಇಂದು ಟ್ರಂಪ್‌  ಪ್ರಮಾಣ ವಚನ

ವಾಷಿಂಗ್ಟನ್‌ : ಡೊನಾಲ್ಡ್‌ ಟ್ರಂಪ್‌ ಅವರು ಶುಕ್ರವಾರ ಮಧ್ಯಾಹ್ನ ಅಮೆರಿಕದ 45ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸ್ಥಳೀಯ ಕಾಲಮಾನ ಶುಕ್ರವಾರ ಮಧ್ಯಾಹ್ನ 12ಕ್ಕೆ (ಭಾರತೀಯ ಕಾಲಮಾನ – ಶನಿವಾರ ಬೆಳಿಗ್ಗೆ 10.30 ಗಂಟೆ) ಟ್ರಂಪ್‌ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.  ಅಮೆರಿಕದ ಮಾಜಿ ಅಧ್ಯಕ್ಷರುಗಳಾದ ಬಿಲ್‌ ಕ್ಲಿಂಟನ್‌, ಬಿಲ್ಲಿ ಕಾರ್ಟರ್‌ ಮತ್ತು ಜಾರ್ಜ್‌ ಬುಷ್‌ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಸಮಾರಂಭದ ವಿವರ

* ಪದಗ್ರಹಣ ಸಮಾರಂಭ ಗುರುವಾರದಿಂದ  ಶನಿವಾರದವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯುವವು.

* ಶುಕ್ರವಾರ  ಬೆಳಿಗ್ಗೆ 8ಕ್ಕೆ (ಭಾರತೀಯ ಕಾಲಮಾನ ಸಂಜೆ 6.30) ನಿಯೋಜಿತ ಅಧ್ಯಕ್ಷ ಟ್ರಂಪ್‌  ಒಬಾಮ ಅವರೊಂದಿಗೆ ಕಾಫಿ ಸೇವನೆ ಮಾಡುವರು.

* 10 ಗಂಟೆ – ಅಮೆರಿಕದ ಕ್ಯಾಪಿಟೋಲ್‌ ಭವನದಲ್ಲಿ ಪ್ರಮಾಣವಚನ ಸಮಾರಂಭ  ಆರಂಭವಾಗುವುದು.

* ಮಧ್ಯಾಹ್ನ 12ಗಂಟೆಗೆ ಪ್ರಮಾಣವಚನ ಸ್ವೀಕಾರ.

* 1.30ಕ್ಕೆ – ಕುಟುಂಬದವರೊಂದಿಗೆ ಶ್ವೇತ ಭವನದವರೆಗೆ ಮೆರವಣಿಗೆ.

* ಸಂಜೆ 5.30ಕ್ಕೆ – ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಗೌರವ ಸಲ್ಲಿಸುವ  ಕಾರ್ಯಕ್ರಮಗಳು.

ಸಮಾರಂಭದ ವೆಚ್ಚ

ಅಧಿಕಾರಿಗಳ ಪ್ರಕಾರ ಮೂರು ದಿನಗಳ ವರ್ಣರಂಜಿತ ಕಾರ್ಯಕ್ರಮಗಳಿಗೆ ಒಟ್ಟು ಸುಮಾರು 200 ದಶಲಕ್ಷ ಡಾಲರ್‌ ( ಸುಮಾರು ₹ 1,360 ಕೋಟಿ) ವೆಚ್ಚವಾಗಲಿದೆ.

ಪ್ರತಿಕ್ರಿಯಿಸಿ (+)