ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹500ರ ನೋಟು ಮುದ್ರಣಕ್ಕೆ ₹4 ವೆಚ್ಚ

Last Updated 20 ಜನವರಿ 2017, 19:37 IST
ಅಕ್ಷರ ಗಾತ್ರ

ಮುಂಬೈ: ಐನೂರು ರೂಪಾಯಿಯ ಹೊಸ ನೋಟೊಂದನ್ನು ಮುದ್ರಿಸಲು ತಗಲುವ ವೆಚ್ಚ 3 ರೂಪಾಯಿ 90 ಪೈಸೆ. ಮಾಹಿತಿ ಹಕ್ಕು ಕಾಯ್ದೆ ಅಡಿ ಕೇಳಲಾದ ಪ್ರಶ್ನೆಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಈ ಮಾಹಿತಿ ನೀಡಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಹೊಸ ನೋಟುಗಳನ್ನು ಮುದ್ರಣ ಮಾಡುತ್ತಿದೆ. ₹500 ಮುಖಬೆಲೆಯ ಪ್ರತಿ ನೋಟಿಗೆ  ಆರ್‌ಬಿಐಯಿಂದ ₹3.9 ಪಡೆಯುತ್ತಿದೆ ಎಂದು ಆರ್‌ಬಿಐ ಉಪ ಪ್ರಧಾನ ವ್ಯವಸ್ಥಾಪಕ ಪಿ. ವಿಲ್ಸನ್ ಅವರು ಮಾಹಿತಿ ಹಕ್ಕು ಕಾರ್ಯಕರ್ತ ಅನಿಲ್‌ ಗಲಗಲಿ ಅವರಿಗೆ ನೀಡಿರುವ ಮಾಹಿತಿಯಲ್ಲಿ ತಿಳಿಸಿದ್ದಾರೆ.

ಒಟ್ಟು ಎಷ್ಟು ನೋಟು ಮುದ್ರಣಕ್ಕೆ ಆದೇಶ ನೀಡಲಾಗಿದೆ ಮತ್ತು ಎಷ್ಟು ಮುದ್ರಣವಾಗಿದೆ ಇವೇ ಮೊದಲಾದ ಮಾಹಿತಿಯನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಗಲಗಲಿ ಅವರಿಗೆ ತಿಳಿಸಲಾಗಿದೆ.

₹500 ಮತ್ತು ಸಾವಿರ ನೋಟುಗಳನ್ನು ರದ್ದುಪಡಿಸಿ ಎರಡೂವರೆ ತಿಂಗಳು ಕಳೆದರೂ ₹500 ಹಾಗೂ ಉದ್ದೇಶಿತ ₹1000 ಮುಖಬೆಲೆಯ ಎಷ್ಟು ನೋಟುಗಳನ್ನು ಯಾವಾಗ ಮುದ್ರಣ ಮಾಡಿ ಬಿಡುಗಡೆ ಮಾಡಲಾಗುತ್ತದೆ ಎಂಬುದನ್ನು ಸರ್ಕಾರ ಏಕೆ ಬಹಿರಂಗಪಡಿಸುತ್ತಿಲ್ಲ ಎಂಬುದು ಅರ್ಥವಾಗುತ್ತಿಲ್ಲ ಎಂದು ಗಲಗಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT