ಫುಟ್‌ಬಾಲ್‌: ಭಾರತಕ್ಕೆ ಸೋಲು

7

ಫುಟ್‌ಬಾಲ್‌: ಭಾರತಕ್ಕೆ ಸೋಲು

Published:
Updated:
ಫುಟ್‌ಬಾಲ್‌: ಭಾರತಕ್ಕೆ ಸೋಲು

ನವದೆಹಲಿ: ಭಾರತದ 17 ವರ್ಷದೊಳಗಿನವರ ಬಾಲಕರ ತಂಡ ದವರು ರಷ್ಯಾದ ಮಾಸ್ಕೊದಲ್ಲಿ ನಡೆದ ಗ್ರನಾಟ್ಕಿನ್‌ ಸ್ಮಾರಕ ಕಪ್‌ ಫುಟ್‌ಬಾಲ್‌ ಟೂರ್ನಿಯ ‘ಪ್ಲೇ ಆಫ್‌’ ಪಂದ್ಯದಲ್ಲಿ ನಿರಾಸೆ ಕಂಡಿದ್ದಾರೆ.ಶುಕ್ರವಾರ ನಡೆದ ಪಂದ್ಯದಲ್ಲಿ ಭಾರತ ತಂಡ 0–1 ಗೋಲಿನಿಂದ ತಜಿಕಿಸ್ತಾನ ತಂಡಕ್ಕೆ ಮಣಿಯಿತು. ಈ ಮೂಲಕ ಆಡಿದ ಐದು ಪಂದ್ಯಗಳಿಂದ ಒಂದು ಪಾಯಿಂಟ್‌ ಕಲೆಹಾಕಿ ಕೊನೆಯ ಸ್ಥಾನದೊಂದಿಗೆ ಸ್ಪರ್ಧೆ ಕೊನೆಗೊಳಿಸಿತು. ಟೂರ್ನಿಯಲ್ಲಿ ವಿವಿಧ ರಾಷ್ಟ್ರಗಳ 16 ತಂಡಗಳು ಭಾಗವಹಿಸಿದ್ದವು.ಹಿಂದಿನ ಪಂದ್ಯಗಳಲ್ಲಿ ಎದುರಾದ ಸೋಲಿನಿಂದ ಕಂಗೆಟ್ಟಿದ್ದ  ಭಾರತದ ಬಾಲಕರು ಮೊದಲರ್ಧದಲ್ಲಿ ದಿಟ್ಟ ಹೋರಾಟ ನಡೆಸಿದರು. ಚೆಂಡು ಹೆಚ್ಚು ಸಮಯ ತಮ್ಮ ಬಳಿಯೇ ಇರುವಂತೆ ನೋಡಿಕೊಂಡ ಪ್ರವಾಸಿ ಬಳಗದವರು ಎದುರಾಳಿ ತಂಡದ ಗೋಲು ಗಳಿಕೆಯ ಎಲ್ಲಾ ಪ್ರಯತ್ನಗಳನ್ನು ವಿಫಲಗೊಳಿಸಿ ದರು. ಹೀಗಾಗಿ ಮೊದಲರ್ಧದ ಆಟ ಗೋಲು ರಹಿತವಾಗಿತ್ತು.ಉತ್ತರಾರ್ಧದ ಶುರುವಿನಲ್ಲೂ ಉಭಯ ತಂಡಗಳು ಖಾತೆ ತೆರೆಯಲು ಇನ್ನಿಲ್ಲದ ಕಸರತ್ತು ನಡೆಸಿದವು. 59ನೇ ನಿಮಿಷದಲ್ಲಿ ತಜಿಕಿಸ್ತಾನ ತಂಡದ ನಾಯಕ ಭಾರತದ ಆಟಗಾರರೊಂದಿಗೆ ಒರಟಾಗಿ ನಡೆದುಕೊಂಡರು. ಹೀಗಾಗಿ ಪಂದ್ಯದ ರೆಫರಿ, ಅವರಿಗೆ ಕೆಂಪು ಕಾರ್ಡ್‌ನ ದರ್ಶನ ಮಾಡಿ ಅಂಗಳದಿಂದ ಹೊರ ಹಾಕಿದರು. ಹೀಗಾಗಿ ತಂಡ ಉಳಿದ ಅವಧಿಯಲ್ಲಿ 10 ಆಟಗಾರರೊಂದಿಗೆ ಆಡಬೇಕಾದ ಅನಿವಾರ್ಯತೆಗೆ ಸಿಲುಕಿತು.66ನೇ ನಿಮಿಷದಲ್ಲಿ ಭಾರತದ ಮುಖ್ಯ ಕೋಚ್‌ ನಿಕೊಲಾಯ್‌ ಆ್ಯಡಮ್ಸ್‌ ಅವರು ಜಾಯ್‌ಸನಾ  ಬದಲಿಗೆ ಶುಭಂ ಅವರನ್ನು ಕಣಕ್ಕಿಳಿಸಿದರು. ಹೀಗಿದ್ದರೂ  ಪ್ರಯೋಜನವಾಗಲಿಲ್ಲ.

80ನೇ ನಿಮಿಷದಲ್ಲಿ ತಜಿ ಕಿಸ್ತಾನ ಗೋಲು ಗಳಿಸಿ ಮುನ್ನಡೆ ತನ್ನದಾಗಿಸಿಕೊಂಡಿತು. ಆ ನಂತರ ಸಮಬಲದ ಗೋಲು ಗಳಿಸಲು ಭಾರತದ ಆಟಗಾರರು ನಡೆಸಿದ ಪ್ರಯತ್ನಕ್ಕೆ ಫಲ ಸಿಗಲಿಲ್ಲ. ಹೀಗಾಗಿ ತಂಡಕ್ಕೆ ನಿರಾಸೆ ಕಾಡಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry