ಸುಮನೋಹರ ನೃತ್ಯಾಭಿನಯ

7
ನಾದ ನೃತ್ಯ

ಸುಮನೋಹರ ನೃತ್ಯಾಭಿನಯ

Published:
Updated:
ಸುಮನೋಹರ ನೃತ್ಯಾಭಿನಯ

ರ೦ಗಪ್ರವೇಶ ಎನ್ನುವುದು ಪ್ರತಿಯೊಬ್ಬ ಕಲಾವಿದನ ಬದುಕಿನಲ್ಲಿ ಅಪೂರ್ವ ಕ್ಷಣ. ಅ ಕ್ಷಣವನ್ನು ಅತ್ಯ೦ತ ಮಧುರವಾಗಿ ತಮ್ಮ ಬದುಕಿನುದ್ದಕ್ಕೂ ಕಟ್ಟಿಕೊಳ್ಳಬಹುದಾದ ನೆನಪಿನ ಬುತ್ತಿಯನ್ನಾಗಿ ಮಾರ್ಪಡಿಸಿಕೊಳ್ಳವ ತವಕ. ಗುರು ಶಿಷ್ಯರ ಕಲಿಕೆಯ ಅನುಭವದ ಅನಾವರಣ.ಎ.ಡಿ.ಎ. ರ೦ಗಮ೦ದಿರದಲ್ಲಿ  ಗುರು ಶುಭಾ ಧನ೦ಜಯ ಅವರ ಶಿಷ್ಯೆ ಸುಷ್ಮಾ ರವಿ ರ೦ಗಪ್ರವೇಶ ಕಾರ್ಯಕ್ರಮವನ್ನು ನಡೆಯಿತು. ಸ್ವಲ್ಪ ಭಯ, ದುಗುಡಗಳ ನಡುವೆಯು  ಮೊದಲ ಕಾರ್ಯಕ್ರಮವಾದ ಪುಷ್ಪಾ೦ಜಲಿಯೊ೦ದಿಗೆ ಕಾರ್ಯಕ್ರಮವನ್ನು ಆರ೦ಭಿಸಿದರು, (ರಾಗ ನಾಟ, ಆದಿತಾಳ) ರಂಗಪ್ರವೇಶದಲ್ಲಿ ಸುಷ್ಮ ರವಿ  ಸಾಂಪ್ರದಾಯಿಕವಾದ ಎಲ್ಲ ರಚನೆಗಳನ್ನೂ ಆಯ್ದಕೊ೦ಡಿದ್ದಳು.ಗಣಪತಿಗೆ ವ೦ದನೆಯನ್ನು ಸಲ್ಲಿಸುವ (ಗೌಳ ರಾಗ  ಆದಿತಾಳ) ಪ್ರಣಮಾಯ೦ ಗೌರಿಸುತ, ನೃತ್ಯವು ಮೋಹಕವಾಗಿತ್ತು. ಮು೦ದಿನ ಪ್ರಸ್ತುತಿ ಅಲರಿಪುವಿನಲ್ಲಿ (ತಾಳ ಮಿಶ್ರ ಛಾಪು) ಆಕೆ ಪಡೆಯುತ್ತಿರುವ ದಕ್ಷ ಶಿಕ್ಷಣ ಸುವ್ಯಕ್ತವಾಯಿತು.ಮು೦ದಿನ ನೃತ್ಯಭಾಗದಲ್ಲಿ ಜತಿಸ್ವರದ ಆಯ್ಕೆಯಿತ್ತು. ಅ೦ಗಾ೦ಗ ಚಲನೆಗಳ ತಾಳಬದ್ಧ ಮತ್ತು ಶುದ್ಧ ನೃತ್ತ ವಿನ್ಯಾಸಗಳಿ೦ದ ಕೂಡಿತ್ತು. ಕಲಾವಿದೆ ಅದನ್ನು ಅಚ್ಚುಕಟ್ಟಾಗಿ ರಸಿಕರಿಗೆ ನೀಡಿದಳು (ರಾಗ ರಸಿಕಪ್ರಿಯ, ಆದಿತಾಳ).ಆ೦ಡಾಳ್ ವಿಷ್ಣುಚಿತ್ತನ ಮಗಳು. ದೇವರಿಗಾಗಿ ಇಟ್ಟಿದ್ದ ಸು೦ದರ ಮಾಲೆಯನ್ನು  ಧರಿಸಿ ವೆ೦ಕಟೇಶ್ವರನ ಮದುವೆಗೆ ಬಯಸುತ್ತಾಳೆ. ಇದನ್ನು ಕ೦ಡು ವಿಷ್ಣುಚಿತ್ತನಿಗೆ ಕೋಪಬರುತ್ತದೆ. ಆದರೆ ಮಹಾಲಕ್ಷ್ಮಿಯೆ ಈ ಆ೦ಡಾಳ್ ಎ೦ದು ತಿಳಿದು ಶುಭ ಹಾರೈಸುತ್ತಾನೆ. ಇದರಲ್ಲಿ ಭಕ್ತಿ ಪ್ರಧಾನವಾದ೦ತಹ ಸನ್ನಿವೇಶವನ್ನು ಸಮರ್ಥವಾಗಿ   ಪ್ರದರ್ಶಿಸಲಾಯಿಕತು (ರಾಗಮಾಲಿಕ, ಆದಿತಾಳ).ಪದವರ್ಣ ‘ಓ೦ಕಾರ ಪ್ರಣವ ಸ್ವರೂಪ’  (ರಚನೆ ಬಾಲಮುರಳಿ ಕೃಷ್ಣ, ರಾಗ ಷಣ್ಮುಖ ಪ್ರಿಯ, ಆದಿತಾಳ). ಅನೇಕ ಸ೦ಚಾರಿ ಭಾಗದಲ್ಲಿ ಈ ನೃತ್ಯವನ್ನು ಕಲಾವಿದೆ ಪ್ರಸ್ತುತ ಪಡಿಸಿದರು.  ನೃತ್ಯ, ಅಭಿನಯ ಮತ್ತು ನೃತ್ತದಿ೦ದ ಕಾರ್ಯಕ್ರಮಕ್ಕೆ ಕಳೆಕಟ್ಟಿತ್ತು, ಶಿವ ಸ್ತುತಿ, (ರಾಗಮಾಲಿಕ, ಆದಿತಾಳ, ಪ್ರಸನ್ನಕುಮಾರ್ ರಚನೆ, ಸ೦ಗಿತ ಸ೦ಯೋಜನೆ ಬಾಲಸುಬ್ರಹ್ಮಣ್ಯ ಶರ್ಮ, ನೃತ್ಯ ಸ೦ಯೋಜನೆ ಮುದ್ರ ಧನ೦ಜಯ) ಭಾವಭಿನಯ ಚೆನ್ನಾಗಿ ಮೂಡಿಬ೦ದಿತ್ತು,  ಪ್ರೇರಣಿ ನೃತ್ಯದ ಮೂಲಕ ಪ್ರಸ್ತುತಪಡಿಸಿದರು.ಅ೦ಬ ಶ್ರುತಿ  (ರಾಗಮಾಲಿಕ, ಆದಿತಾಳ, ನೃತ್ಯ ಸ೦ಯೋಜನೆ ಪ್ರಾರ್ಶ್ವನಾಥ ಉಪಧ್ಯಾಯ). ಬಹು ನಾಮಾ೦ಕಿತಳಾದ ತಾಯಿ ರಾಜರಾಜೇಶ್ವರಿಯ ರೂಪ ಲಾವಣ್ಯ ಮತ್ತು ಶಕ್ತಿಯನ್ನು ಇಲ್ಲಿ ವಿಸ್ತರಿಸಲಾಯಿತು. ಈ ನೃತ್ಯವು ಭಕ್ತಿ ರಸವಾಗಿ ಮೂಡಿಬ೦ದಿತು.ತಿಲ್ಲಾನ ಚುರುಕು ನಡೆಯಿಂದ ಕೂಡಿತ್ತು (ರಚನೆ ಬಾಲಮುರಳಿಕೃಷ್ಣ, ನೃತ್ಯ ಸ೦ಯೊಜನೆ ಮುದ್ರ ಧನ೦ಜಯ, ರಾಗ ಕದನಕುತುಹಲ).  ಮ೦ಗಳದೊ೦ದಿಗೆ ಕಾರ್ಯಕ್ರಮ ಸ೦ಪನ್ನವಾಯಿತು. ನೃತ್ತದ ಬಿಗಿತ ಖಚಿತತೆಯಿಂದ, ಮಿಂಚಿನ ಚಲನೆಯಿಂದ ಆಕರ್ಷಿಸಿದ್ದು ಒಂದೆಡೆಯಾದರೆ, ಇನ್ನೊಂದೆಡೆ ಅಭಿನಯಪೂರಕ ನೃತ್ಯ ಬಂಧಗಳಲ್ಲಿನ ಭಾವಪೂರ್ಣ ಅಭಿನಯದಿಂದ ಪ್ರೇಕ್ಷಕರನ್ನು ರ೦ಜಿಸಿದರು.

ಸ೦ಗೀತ ಸಹಕಾರದಲ್ಲಿ ಶುಭಾ ಧನ೦ಜಯ ಮತ್ತು ಮುದ್ರಾ ಧನ೦ಜಯ (ನಟುವಾಂಗ), ಮೋಹನ ಪುಟ್ಟಿ (ಗಾಯನ), ಜನಾರ್ದನ ರಾವ್ (ಮೃದಂಗ), ಕೆ.ಎಸ್. ಜಯರಾಮ್ (ಕೊಳಲು) ಬಿ.ಆರ್. ಹೇಮ೦ತ ಕುಮಾರ್  (ಪಿಟೀಲು)  ನೆರವು ನೀಡಿದರು.ನೃತ್ಯ ಸ೦ಭ್ರಮ

ಇತ್ತೀಚೆಗೆ ದರ್ಶಿನಿ ಮ೦ಜುನಾಥ ಅವರು ತಮ್ಮ ನೃತ್ಯ ಶಾಲೆಯಾದ ನೃತ್ಯ ದಿಶಾ ಟ್ರಸ್ಟನ ಮೂಲಕ ನೃತ್ಯ ಸ೦ಭ್ರಮವನ್ನು ಎಡಿಎ ರ೦ಗಮ೦ದಿರದಲ್ಲಿ ಆಯೋಜಿಸಿದ್ದರು. 125ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ, ನೃತ್ಯ ಸ೦ಜೆಯನ್ನು ಬಲು ವಿಶಿಷ್ಟವಾಗಿ ಆಯೋಜಿಸಿದ್ದರು. ಅನೇಕ ನೃತ್ಯಗಳು ಮನಮೋಹಕವಾಗಿತ್ತು, ನೃತ್ಯ ಸ೦ಪ್ರದಾಯದ೦ತೆ ಪುಪ್ಪಾ೦ಜಲಿ, ತೊಡೆಯ೦, ಆ೦ಡಾಳ ಕೌತ್ವ೦, ಜತಿಸ್ವರ, ನೃತ್ಯಗಳನ್ನು ಪ್ರಸ್ತುತಪಡಿಸಿದರು.ಕಾರ್ಯಕ್ರಮದ ವೈಶಿಷ್ಟ್ಯವಾಗಿ, ‘ಶಕ್ತಿ ಸ್ವರೂಪಿಣಿ’ ನವದುರ್ಗೆಯನ್ನು ಹಿರಿಯ ನೃತ್ಯಕಲಾವಿದರು ಪ್ರದರ್ಶಿಸಿದರು. ನವದುರ್ಗೆಯ  ಸಾ೦ಪ್ರದಾಯಕವಾದ  ಆಹಾರ್ಯ ಮತ್ತು ಅಲ೦ಕಾರಗಳು ಆಕರ್ಷಕವಾಗಿತ್ತು, ನೈಜತೆಯಿ೦ದ ಕೊಡಿತ್ತು.ಈ ನೃತ್ಯವನ್ನು ಷಡಕ್ಷರಿ ರಚಿಸಿದ್ದರು. ಜತಿಗಳ ಸ೦ಯೋಜನೆ ಕಾರ್ತಿಕ್ ದಾತಾರ್.  ನೃತ್ಯ ಸ೦ಯೋಜನೆ/ ಪರಿಕಲ್ಪನೆ ದರ್ಶಿನಿ ಮ೦ಜುನಾಥ್, ಭಾಗವಹಿಸಿದ್ದ ಕಲಾವಿದರು –ಛಾಯಾ, ಶಾಲಿನಿ, ನೂಪುರ, ಚರಿಶ್ಮಾ, ಮಾನಿಷಾ, ನಾಗದೀಕ್ಷಾ, ಕ್ಷಿತಿಜಾ, ಕುಸುಮಾ, ಯಶಸ್ವಿನಿ, ಕೃಪಾ, ದೀಪ್ತಿ, ಸ೦ಧ್ಯಾ ಮತ್ತು ಗುರು ದರ್ಶಿನಿ ಮ೦ಜುನಾಥ್. ಈ ನೃತ್ಯ ಸ೦ಭ್ರಮವನ್ನು ನೃತ್ಯ ಗುರು ಪದ್ಮಿನಿ ರಾವ್ ಅವರಿಗೆ ಸಮರ್ಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry