ಪ್ರಶಸ್ತಿ ಮೇಲೆ ಸಿಂಧು ಕಣ್ಣು

7

ಪ್ರಶಸ್ತಿ ಮೇಲೆ ಸಿಂಧು ಕಣ್ಣು

Published:
Updated:
ಪ್ರಶಸ್ತಿ ಮೇಲೆ ಸಿಂಧು ಕಣ್ಣು

ಲಖನೌ (ಪಿಟಿಐ): ರಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿ.ವಿ. ಸಿಂಧು ಅವರು ಮಂಗಳವಾರ ಇಲ್ಲಿ ಆರಂಭವಾಗಲಿರುವ ಸೈಯದ್ ಮೋದಿ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಮುಖ ಆಕರ್ಷಣೆಯಾಗಲಿದ್ದಾರೆ.

ಆದರೆ ಭಾನುವಾರ ಮಲೇಷ್ಯಾ ಮಾಸ್ಟರ್ಸ್ ಗ್ರ್ಯಾನ್‌ಪ್ರಿ ಗೋಲ್ಡ್ ಪ್ರಶಸ್ತಿ ಜಯಿಸಿದ್ದ ಸೈನಾ ನೆಹ್ವಾಲ್ ಅವರು ಕಣಕ್ಕೆ ಇಳಿಯುತ್ತಿಲ್ಲ. ಈ ಹಿಂದೆ ಮೂರು ಸಲ ಸೈಯದ್ ಮೋದಿ ಟ್ರೋಫಿ ಜಯಿಸಿದ್ದ ಸೈನಾ ಈ ಬಾರಿ ವಿಶ್ರಾಂತಿ ಪಡೆಯಲಿದ್ದಾರೆ.

‘ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ (ಪಿಬಿಎಲ್) ಮತ್ತು ಮಲೇಷ್ಯಾ ಓಪನ್   ಟೂರ್ನಿಗಳಲ್ಲಿ ಸತತವಾಗಿ ಆಡಿದ್ದೇನೆ. ಅದರಿಂದ ಬಹಳಷ್ಟು ದಣಿದಿದ್ದೇನೆ. ರಿಯೊ ಒಲಿಂಪಿಕ್ಸ್‌ ಸಂದರ್ಭದಲ್ಲಿ ಗಾಯಗೊಂಡು ನಂತರ ಶಸ್ತ್ರಚಿಕಿತ್ಸೆ ಪಡೆದಿದ್ದೆ.  ಅದರ ನಂತರ ಹಂತಹಂತ ವಾಗಿ ದೈಹಿಕ ಕ್ಷಮತೆ ಗಳಿಸಿಕೊಂಡಿ ದ್ದೇನೆ. ಆದ್ದರಿಂದ ಈಗ ವಿಶ್ರಾಂತಿ ಪಡೆಯಲು ನಿರ್ಧರಿಸಿದ್ದೇನೆ. ಮುಂಬರ ಲಿರುವ ಜರ್ಮನ್ ಗ್ರ್ಯಾನ್ ಪ್ರಿ ಗೋಲ್ಡ್  ಟೂರ್ನಿಯಲ್ಲಿ ಆಡುವ ಬಗ್ಗೆ ಯೋಚಿಸು ತ್ತಿದ್ದೇನೆ’ ಎಂದು  ಸೈನಾ ಹೇಳಿದ್ದಾರೆ.

ಸಿಂಧು ಮಿಂಚುವ ನಿರೀಕ್ಷೆ

ಹೈದರಾಬಾದಿನ 21 ವರ್ಷದ ಸಿಂಧು ಅವರು ಹೋದ ಡಿಸೆಂಬರ್‌ನಲ್ಲಿ  ಬಿಡಬ್ಲ್ಯುಎಫ್ ದುಬೈ ಸೂಪರ್ ಸಿರೀಸ್ ಫೈನಲ್‌ನಲ್ಲಿ ಆಡಿದ್ದರು. ಅದರ ನಂತರ ಅವರು ಪ್ರತಿನಿಧಿಸಿದ್ದ ಚೆನ್ನೈ ಸ್ಮ್ಯಾಷರ್ಸ್ ತಂಡವು ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ (ಪಿಬಿಎಲ್‌) ಟೂರ್ನಿಯಲ್ಲಿ ಚಾಂಪಿಯನ್ ಆಗಿತ್ತು. ಅವರ ಮಲೇಷ್ಯಾ ಟೂರ್ನಿಯಲ್ಲಿ ಅಡಿರಲಿಲ್ಲ.

ಇದೀಗ ಅವರು  ಲಖನೌನಲ್ಲಿ ನಡೆಯಲಿರುವ ಟೂರ್ನಿಯ ಮಹಿಳೆ ಯರ ವಿಭಾಗದಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರ್ತಿಯಾಗಿದ್ದಾರೆ.

ಅಗ್ರಶ್ರೇಯಾಂಕದ ಆಟಗಾರ್ತಿ  ಸಿಂಧು ಅವರು ಮೊದಲ ಸುತ್ತಿನಲ್ಲಿ  ಅನುರಾ ಪ್ರಭುದೇಸಾಯಿ ಅವರನ್ನು ಎದುರಿಸಲಿದ್ದಾರೆ. ಒಂದು ವೇಳೆ ಅವರು ಸೆಮಿಫೈನಲ್ ತಲುಪಿದರೆ  ನಾಲ್ಕನೇ ಶ್ರೇಯಾಂಕದ ಫಿತ್ರಿಯಾನಿ ಫಿತ್ರಿಯಾನಿ ಅವರ ಸವಾಲು ಎದುರಿಸುವರು.

ಪ್ರಶಸ್ತಿ ಮೇಲೆ ಶ್ರೀಕಾಂತ್ ಕಣ್ಣು

ನಾಲ್ಕು ತಿಂಗಳುಗಳ ವಿಶ್ರಾಂತಿಯ ನಂತರ ಅಂಕಣಕ್ಕೆ ಮರಳಲಿರುವ ಕಿದಂಬಿ ಶ್ರೀಕಾಂತ್ ಅವರು ಪುರುಷರ ವಿಭಾಗದ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ.

ವಿಶ್ವ ಶ್ರೇಯಾಂಕದಲ್ಲಿ 15ನೇ ಸ್ಥಾನದಲ್ಲಿರುವ ಅವರ ಎದುರು ಕಠಿಣ ಸವಾಲು ಇದೆ.  ಡೆನ್ಮಾರ್ಕ್‌ನ ಎಚ್‌.ಕೆ. ವಿಟ್ಟಿಂಗಸ್ ಮತ್ತು ಥಾಯ್ಲೆಂಡ್‌ನ ಅಗ್ರ ಶ್ರೇಯಾಂಕದ ಆಟಗಾರ ತಾಂಗಸಾಕ್ ಸೇನ್ಸೊಮಬೂನ್ಸಕ್, ಭಾರತದವರೇ ಆದ ಪ್ರಣಯ್ ಮತ್ತು ಅಜಯ್ ಜಯ ರಾಮ್ ಅವರು ಕೂಡ ಕಣದಲ್ಲಿದ್ದಾರೆ. ಪ್ರಣಯ್ ಮತ್ತು ಅಜಯ್ ಅವರು ಪಿಬಿಎಲ್‌ನಲ್ಲಿ ಉತ್ತ ಮವಾಗಿ ಆಡಿದ್ದರು. ಆರನೇ ಶ್ರೇಯಾಂಕದ ಪ್ರಣಯ್ ಅವರು ಎನ್‌.ವಿ.ಎಸ್. ವಿಜೇತಾ ಅವರನ್ನು ಎದುರಿಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry