ಶುಕ್ರವಾರ, ಜನವರಿ 21, 2022
30 °C

‘ಎವರೆಸ್ಟ್‌’ನ ಎತ್ತರ ಮರು ಅಳತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಎವರೆಸ್ಟ್‌’ನ ಎತ್ತರ ಮರು ಅಳತೆ

ಹೈದರಾಬಾದ್‌: ಭಾರತೀಯ ಸರ್ವೇಕ್ಷಣಾ ಇಲಾಖೆಯು ಜಗತ್ತಿನ ಅತಿ ಎತ್ತರದ ಪರ್ವತ ಮೌಂಟ್‌ ಎವರೆಸ್ಟ್‌ನ ಎತ್ತರವನ್ನು ಮತ್ತೆ ಅಳೆಯಲು ನಿರ್ಧರಿಸಿದೆ. 

 

ಎರಡು ವರ್ಷಗಳ ಹಿಂದೆ ನೇಪಾಳದಲ್ಲಿ ಸಂಭವಿಸಿದ್ದ ಭಾರಿ ಭೂಕಂಪದಿಂದ ಎವರೆಸ್ಟ್‌ನ ಎತ್ತರ ಕಡಿಮೆಯಾಗಿರಬಹುದು ಎಂದು ಕೆಲವು ತಜ್ಞರು ಅನುಮಾನಪಟ್ಟಿದ್ದರು. ಪರ್ವತದ ಮರು ಅಳತೆ ನಡೆಸುವುದರಿಂದ ವೈಜ್ಞಾನಿಕ ಅಧ್ಯಯನಕ್ಕೆ ನೆರವಾಗಲಿದೆ ಎಂದು ಸರ್ವೇಯರ್‌ ಜನರಲ್‌ ಸ್ವರ್ಣ ಸುಬ್ಬಾ ರಾವ್‌ ಹೇಳಿದ್ದಾರೆ. 

 

‘1855 ರಲ್ಲಿ ಎವರೆಸ್ಟ್‌ನ ಎತ್ತರವನ್ನು ಅಳೆಯಲಾಗಿತ್ತು. ಭಾರತೀಯ ಸರ್ವೇಕ್ಷಣಾ ಇಲಾಖೆ ಮಾತ್ರವಲ್ಲದೆ, ಇತರರು ಕೂಡಾ ಇದರ ಎತ್ತರ ಅಳೆದಿದ್ದರು. ಆದರೆ ಇಲಾಖೆಯ ಬಳಿಯಲ್ಲಿರುವ ಮಾಹಿತಿಯೇ ನಿಖರವಾಗಿದೆ. ಅದರ ಪ್ರಕಾರ ಎವರೆಸ್ಟ್‌ ಪರ್ವತ 29,028 ಅಡಿ ಎತ್ತರವಿದೆ’ ಎಂದು ತಿಳಿಸಿದ್ದಾರೆ. 

 

‘ಎತ್ತರದ ಮರು ಅಳತೆ ಕೆಲಸ ಇನ್ನೆರಡು ತಿಂಗಳಲ್ಲಿ ಆರಂಭವಾಗಲಿದೆ. ಇದಕ್ಕಾಗಿ ತಜ್ಞರ ತಂಡವನ್ನು ಬಳಸಿಕೊಳ್ಳಲಾಗುವುದು. ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸೇರಿದಂತೆ ಅಗತ್ಯವಿರುವ ಎಲ್ಲ ಕಡೆಯಿಂದ ಒಪ್ಪಿಗೆ ಪಡೆಯಲಾಗಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.