ಜಮ್ಮು–ಶ್ರೀನಗರ ಹೆದ್ದಾರಿಯಲ್ಲಿ ಮತ್ತೆ ಹಿಮಕುಸಿತ: ಸಾವಿನ ಸಂಖ್ಯೆ 20ಕ್ಕೆ ಏರಿಕೆ

7

ಜಮ್ಮು–ಶ್ರೀನಗರ ಹೆದ್ದಾರಿಯಲ್ಲಿ ಮತ್ತೆ ಹಿಮಕುಸಿತ: ಸಾವಿನ ಸಂಖ್ಯೆ 20ಕ್ಕೆ ಏರಿಕೆ

Published:
Updated:
ಜಮ್ಮು–ಶ್ರೀನಗರ ಹೆದ್ದಾರಿಯಲ್ಲಿ ಮತ್ತೆ ಹಿಮಕುಸಿತ: ಸಾವಿನ ಸಂಖ್ಯೆ 20ಕ್ಕೆ ಏರಿಕೆ

ಶ್ರೀನಗರ: ಜಮ್ಮು ಮತ್ತು ಶ್ರೀನಗರದ ಹೆದ್ದಾರಿಯಲ್ಲಿ ಮತ್ತೆ ಹಿಮಕುಸಿತ ಹಾಗೂ ಭೂಕುಸಿತ ಮುಂದುವರಿದಿದೆ. ಸೇನಾ ಕ್ಯಾಂಪ್‌ನಲ್ಲಿ ಸಂಭವಿಸಿದ ಹಿಮಕುಸಿತದಲ್ಲಿ ಕಾಣೆಯಾಗಿದ್ದ ನಾಲ್ವರು ಯೋಧರ ಮೃತ ದೇಹಗಳು ಶುಕ್ರವಾರ ಪತ್ತೆಯಾಗಿದ್ದು, ಸಾವಿಗೀಡಾದವರ ಸಂಖ್ಯೆ 20ಕ್ಕೆ ಏರಿದೆ. ರಾಜ್ಯದ ಹಾಸನ ಜಿಲ್ಲೆಯ ದೇವಿಹಳ್ಳಿಯ ಯೋಧ ಸಂದೀಪ್‌ ಶೆಟ್ಟಿ ಅವರು ದುರ್ಘಟನೆಯಲ್ಲಿ ಹುತಾತ್ಮರಾಗಿದ್ದಾರೆ.

ಗುರೆಜ್‌ ವಲಯದ ಗಂಧೇರ್ಬಲ್‌ ಜಿಲ್ಲೆಯ ಸೋನಮಾರ್ಗ್‌ ಸೇನಾ ಕ್ಯಾಂಪ್‌ನಲ್ಲಿ ಹಿಮಕುಸಿತದ ಬಳಿಕ ನಡೆಸಿದ ಕಾರ್ಯಾಚರಣೆಯಲ್ಲಿ ನಾಲ್ವರು ಯೋಧರ ಮೃತದೇಹಗಳು ಪತ್ತೆಯಾಗಿವೆ. ಮೃತರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ ಎಂದು ಶ್ರೀನಗರ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಹಿಮ ಕುಸಿತದಿಂದಾಗಿ ಹೆದ್ದಾರಿಯಲ್ಲಿ ಸಂಚಾರಕ್ಕೆ ಅಡ್ಡಿಯಾಗಿದೆ. ಬುಧವಾರದಿಂದ ಈಚೆಗೆ ನಾಲ್ಕು ದಿನದಲ್ಲಿ ಜಮ್ಮು ಕಾಶ್ಮಿರದಲ್ಲಿ ಸಂಭವಿಸಿದ ಹಿಮಕುಸಿತಕ್ಕೆ ಸೇನೆಯ 15 ಮಂದಿ ಸೇರಿದಂತೆ ಒಟ್ಟು 20 ಮಂದಿ ಸಾವಿಗೀಡಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಗುರೆಜ್‌ ವಲಯದಲ್ಲಿ ಬುಧವಾರ ಸಂಜೆ ಎರಡು ಕಡೆ ಹಿಮ ಕುಸಿತ ಸಂಭವಿಸತ್ತು. ಘಟನೆ ಬಳಿಕ ಏಳು ಯೋಧರನ್ನು ರಕ್ಷಿಸಲಾಗಿತ್ತು. 10 ಯೋಧರ ಮೃತ ದೇಹಗಳು ಪತ್ತೆಯಾಗಿದ್ದವು. ಕಾಣೆಯಾದವರಿಗಾಗಿ ಶೋಧ ಕಾರ್ಯ ಕೈಗೊಳ್ಳಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry