ಗುಂಡಿನ ದಾಳಿ: 6 ಮಂದಿ ಬಲಿ

7
ಕೆನಡಾದ ಕ್ಯುಬೆಕ್ ನಗರದ ಮಸೀದಿಯಲ್ಲಿ ಶಸ್ತ್ರಧಾರಿಗಳಿಂದ ಕೃತ್ಯ

ಗುಂಡಿನ ದಾಳಿ: 6 ಮಂದಿ ಬಲಿ

Published:
Updated:
ಗುಂಡಿನ ದಾಳಿ: 6 ಮಂದಿ ಬಲಿ

ಕ್ಯುಬೆಕ್ ನಗರ, ಕೆನಡಾ: ಕೆನಡಾದ ಕ್ಯುಬೆಕ್ ನಗರದಲ್ಲಿರುವ ಮಸೀದಿಯೊಂದರಲ್ಲಿ ಶಸ್ತ್ರಧಾರಿ ವ್ಯಕ್ತಿಗಳು  ನಡೆಸಿದ ಗುಂಡಿನ ದಾಳಿಗೆ 6 ಮಂದಿ ಸಾವಿಗೀಡಾಗಿದ್ದಾರೆ.  ಭಾನುವಾರ ಸಂಜೆ ಪ್ರಾರ್ಥನೆ ವೇಳೆಗೆ ದಾಳಿ ನಡೆದಿದ್ದು, ಈ ದಾಳಿಯಲ್ಲಿ ಎಂಟು ಮಂದಿಗೆ ಗಂಭೀರ ಗಾಯಗಳಾಗಿವೆ.



ದಾಳಿ ನಂತರ ಇಬ್ಬರು ಶಂಕಿತರನ್ನು ಪೊಲೀಸರು ಬಂಧಿಸಿದ್ದಾರೆ. ಇದು ಉಗ್ರರ ಕೃತ್ಯ ಎಂದು ಪೊಲೀಸ್‌ ಇಲಾಖೆ ವಕ್ತಾರೆ ಕ್ರಿಸ್ಟಿಯನ್‌ ಕೌಲೊಂಬೆ ತಿಳಿಸಿದ್ದಾರೆ.



ಈ ಬಗ್ಗೆ ಹೇಳಿಕೆ ನೀಡಿರುವ ಕೆನಡಾದ ಪ್ರಧಾನಿ ಜಸ್ಟಿನ್‌ ಟ್ರುಡಿ, ‘ದೇಶ ಕಟ್ಟುವ ವಿಚಾರದಲ್ಲಿ ಮುಸ್ಲಿಂ ಹಾಗೂ ಕೆನಡಾದ ನಿವಾಸಿಗಳು ಬಹುಮುಖ್ಯ ಪಾತ್ರ ವಹಿಸುತ್ತಾರೆ. ಇಂತಹ ಅಮಾನವೀಯ ಕೃತ್ಯಗಳಿಗೆ ನಮ್ಮ ದೇಶದಲ್ಲಿ ಜಾಗವಿಲ್ಲ’ ಎಂದು ತಿಳಿಸಿದ್ದಾರೆ.



ರಾತ್ರಿ 7.15ರ ಸುಮಾರಿಗೆ ಈ ದಾಳಿ ನಡೆದಿದ್ದು, ಮೃತರು 35 ರಿಂದ 75 ವರ್ಷದ ಒಳಗಿನವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.



ವಲಸಿಗ ಮುಸ್ಲಿಂರಿಗೆ  ತಾತ್ಕಾಲಿಕವಾಗಿ ಆಶ್ರಯ ನೀಡುವುದಾಗಿ ಭಾನುವಾರ ಜಸ್ಟಿನ್‌ ಟ್ರುಡಿ ಹೇಳಿಕೆ ನೀಡಿದ್ದರು, ಇದರ ಬೆನ್ನಲ್ಲೇ ಈ ದಾಳಿ ನಡೆದಿರುವುದು ಕೆನಡಾದಲ್ಲಿ ಆತಂಕ ಸೃಷ್ಟಿಸಿದೆ. ಕಳೆದ ಜೂನ್‌ ತಿಂಗಳಲ್ಲಿ ಈ ಮಸೀದಿಯೂ ದುಷ್ಕರ್ಮಿಗಳ ಜನಾಂಗೀಯ ಆಕ್ರಮಣಕ್ಕೆ ತುತ್ತಾಗಿತ್ತು.

*

ಇದೊಂದು ಭಯೋತ್ಪಾದಕ ದಾಳಿ. ಇಂತಹ ಕೃತ್ಯಗಳಿಗೆ ದೇಶದಲ್ಲಿ ಜಾಗವಿಲ್ಲ.

–ಜಸ್ಟಿನ್‌ ಟ್ರುಡಿ,

ಕೆನಡಾ ಪ್ರಧಾನಿ

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry