ಗುರುವಾರ , ಸೆಪ್ಟೆಂಬರ್ 23, 2021
27 °C

ಐಫೆಲ್‌ ಗೋಪುರಕ್ಕೆ ಗುಂಡು ನಿರೋಧಕ ಗಾಜಿನ ಕವಚದ ಭದ್ರತೆ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಐಫೆಲ್‌ ಗೋಪುರಕ್ಕೆ ಗುಂಡು ನಿರೋಧಕ ಗಾಜಿನ ಕವಚದ ಭದ್ರತೆ

ಪ್ಯಾರಿಸ್‌: ಜಗತ್ತಿನ ಸುಂದರ ತಾಣಗಳಲ್ಲೊಂದಾದ ಪ್ಯಾರಿಸ್‌ ನಗರದಲ್ಲಿರುವ ಐಫೆಲ್‌ ಗೋಪುರದ  ಸುತ್ತಲು ಗುಂಡು ನಿರೋಧಕ ಗಾಜಿನ ಕವಚ ನಿರ್ಮಿಸುವ ಯೋಜನೆಯ ಬಗ್ಗೆ ಪ್ಯಾರಿಸ್‌ನ ಉನ್ನತಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

 

ಭಯೋತ್ಪಾದಕ ಕೃತ್ಯಗಳು ಹಾಗೂ ಮತ್ತಿತರೆ ದಾಳಿಗಳಿಂದ ಪ್ರವಾಸಿ ಸ್ಮಾರಕವನ್ನು ರಕ್ಷಿಸುವ ಉದ್ದೇಶದಿಂದ ಸುಮಾರು ₹140ಕೋಟಿ ವೆಚ್ಚದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸುವ ಲೆಕ್ಕಾಚಾರದಲ್ಲಿದೆ ಪ್ಯಾರಿಸ್‌ ಸರ್ಕಾರ.

 

ನಗರದ ಉಪಮೇಯರ್‌ ಜೀನ್‌ ಫ್ರಾಂಕೋಯಿಸ್‌ ಮಾರ್ಟಿನ್‌, ‘ಉಗ್ರರ ದಾಳಿಗಳಿಂದ ಐಫೆಲ್‌ ಗೋಪುರವನ್ನು ರಕ್ಷಿಸಿಕೊಳ್ಳಬೇಕಾಗಿರುವುದು ನಮ್ಮ ಜವಾಬ್ದಾರಿ. ವಾರ್ಷಿಕ 60ಲಕ್ಷ ಮಂದಿ ಇಲ್ಲಿಗೆ ಭೇಟಿ ನೀಡುತ್ತಾರೆ. ಅತಿಯಾದ ವಾಹನ ಸಂಚಾರವಿರುವ ಕಾರಣ ರಕ್ಷಣೆಗೆ ಮಹತ್ವ ನೀಡುವುದು ಅನಿವಾರ್ಯವಾಗಿದೆ. ರಕ್ಷಣೆಯ ಕಾರಣದಿಂದಲೇ ನಾವು ಈ ಯೋಜನೆಯನ್ನು ಕೈಗೊಂಡಿದ್ದೇವೆ’ ಎಂದು ಹೇಳಿದ್ದಾರೆ.

 

ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆಲವು ಅಧಿಕಾರಿಗಳು ‘ರಕ್ಷಣೆಗಾಗಿ ನಿರ್ಮಿಸಲು ಉದ್ದೇಶಿಸಿರುವ ಗುಂಡು ನಿರೋಧಕ ಗಾಜಿನ ಕವಚ ಐಫೆಲ್‌ ಗೋಪುರಕ್ಕೆ ಕೇವಲ ರಕ್ಷಣೆ ನೀಡುವ ಬದಲಾಗಿ ಕೋಟೆಯಾಗಿ ಮಾರ್ಪಾಡಾದರೆ ಇಲ್ಲಿಗೆ ಬರುವ ಪ್ರವಾಸಿಗಳ ಸಂಖ್ಯೆ ಇಳಿಮುಖವಾಗಲಿದೆ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

 

ಇನ್ನು ಕೆಲ ಅಧಿಕಾರಿಗಳು ಸೂಕ್ತ ಭದ್ರತೆ ದೊರೆಯುವ ಕಾರಣ ಇಲ್ಲಿಗೆ ಬರುವ ಪ್ರವಾಸಿಗಳ ಸಂಖ್ಯೆಯೂ ವೃದ್ಧಿಸಲಿಗೆ ಎಂಬ ಆಶಾಭಾವದಲ್ಲಿದ್ದಾರೆ.

 

2015ರ ಜನವರಿಯಿಂದ 2016ರ ಜುಲೈ ಅವಧಿಯಲ್ಲಿ ಪ್ಯಾರಿಸ್‌ನಲ್ಲಿ ಉಗ್ರರು ಹಾಗೂ ಜಿಹಾದಿಗಳ ದಾಳಿಗಳಿಂದಾಗಿ 238 ಮಂದಿ ನಾಗರೀಕರು ಪ್ರಾಣ ಕಳೆದುಕೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.