ಗದ್ದಲದ ನಡುವೆ ಪಳನಿಸ್ವಾಮಿಗೆ ವಿಶ್ವಾಸ ಮತ

7

ಗದ್ದಲದ ನಡುವೆ ಪಳನಿಸ್ವಾಮಿಗೆ ವಿಶ್ವಾಸ ಮತ

Published:
Updated:
ಗದ್ದಲದ ನಡುವೆ ಪಳನಿಸ್ವಾಮಿಗೆ ವಿಶ್ವಾಸ ಮತ

ಚೆನ್ನೈ: ಡಿಎಂಕೆ ಹಾಗೂ ಕಾಂಗ್ರೆಸ್‌ ನಡೆಸಿದ ಗದ್ದಲದ ನಡುವೆಯೇ ತಮಿಳುನಾಡು ವಿಧಾನಸಭೆಯಲ್ಲಿ ಎಐಎಡಿಎಂಕೆಯ ಪಳನಿಸ್ವಾಮಿ ಅವರಿಗೆ ವಿಶ್ವಾಸ ಮತ ಲಭಿಸಿದೆ.

ಬೆಳಿಗ್ಗೆಯಿಂದ ಸದನದಲ್ಲಿ ಗದ್ದಲ ಎಬ್ಬಿಸಿದ ಡಿಎಂಕೆ ಮತ್ತು ಕಾಂಗ್ರೆಸ್‌ ಸದಸ್ಯರು ತಲೆ ಎಣಿಕೆ ಬದಲು ಗುಪ್ತ ಮತದಾನಕ್ಕೆ ಅವಕಾಶ ನೀಡಬೇಕು ಆಗ್ರಹಸಿದ್ದರು. ಇದಕ್ಕೆ ಸ್ಪೀಕರ್‌ ಧನಪಾಲ್‌ ಅವರು ಅವಕಾಶ ನೀಡದೇ ಇದ್ದುದರಿಂದ ಡಿಎಂಕೆ ಸದಸ್ಯರು ಸ್ಪೀಕರ್‌ ಪೀಠದ ಮುಂದಿನ ಟೇಬಲ್‌, ಕರ್ಚಿ ಒಡೆದು ಮೈಕ್‌ಗಳನ್ನು ಕಿತ್ತು ಹಾಕಿ ಪ್ರತಿಭಟನೆ ನಡೆಸಿದರು. ಬಳಿಕ, ಕಲಾಪವನ್ನು ಮುಂದೂಡಿ, ಮಧ್ಯಾಹ್ನದ ನಂತರ ಡಿಎಂಕೆ ಸದಸ್ಯರನ್ನು ಹೊರಗಿಟ್ಟು ವಿಶ್ವಾಸ ಮತಯಾಚಿಸಲಾಯಿತು.

ಸ್ಪೀಕರ್‌ ಧನಪಾಲ್‌ ಅವರು ಡಿಎಂಕೆ ಸದಸ್ಯರನ್ನ ಸದನದಿಂದ ಹೊರಗಿಟ್ಟು ವಿಶ್ವಾಸ ಮತಕ್ಕೆ ಅವಕಾಶ ಕಲ್ಪಿಸಿದರು. ಪಳನಿಸ್ವಾಮಿ ಅವರ ಪರ 122 ಮತ ಚಲಾವಣೆಯಾಗಿದ್ದು, ವಿರುದ್ಧವಾಗಿ 11 ಮತ ಚಲಾವಣೆಯಾಗಿವೆ.

ಹೊಸ ಸರ್ಕಾರ ರಚನೆಗೆ ವಿಶ್ವಾಸಮತ ಕೋರಲು ಕರೆದಿದ್ದ ವಿಶೇಷ ಅಧಿವೇಶನದಲ್ಲಿ, ಶಶಿಕಲಾ ಜೈಲಿನಲ್ಲಿದ್ದರೂ ಅವರ ಬಣ ವಿಶ್ವಾಸಮತ ಪಡೆಯುವಲ್ಲಿ ಯಶಸ್ವಿಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry