7

ಬೇಸಿಗೆಯಲ್ಲಿ ದೇಹಕ್ಕೆ ತಂಪು ನೀಡುವ ರಾಗಿ ಮಾಲ್ಟ್

Published:
Updated:
ಬೇಸಿಗೆಯಲ್ಲಿ ದೇಹಕ್ಕೆ ತಂಪು ನೀಡುವ ರಾಗಿ ಮಾಲ್ಟ್

ಬೇಸಿಗೆ ಬಂತೆಂದರೆ ಸಾಕು!  ಬಿಸಿಲ ಬೇಗೆ ತಾಳುವುದು ಕಷ್ಟ ಕಷ್ಟ! ಈ ವೇಳೆ ದೇಹವನ್ನು ತಂಪಾಗಿಡುವ ಆಹಾರದ  ಮೊರೆ ಹೋಗುವುದು ಸಹಜ.  ಈ ಸಲ  ‘ಪ್ರಜಾವಾಣಿ’  ರಾಗಿ ಮಾಲ್ಟ್  ಮಾಡುವ ರೆಸಿಪಿಯನ್ನು ತಂದಿದೆ.  ರಾಗಿ ಮಾಲ್ಟ್‌ ಮಾಡುವ ವಿಡಿಯೊ ಸಹಿತ  ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. 

 

ಬೇಕಾಗುವ ಸಾಮಗ್ರಿಗಳು:

1. ಮೊಳಕೆ ಬಂದು ಒಣಗಿದ ರಾಗಿ               1/2ಕಪ್

2. ಸೋಯಾ ಹಿಟ್ಟು                                40ಗ್ರಾಮ್

3. ತಯಾರಾದ ಹಿಟ್ಟು                            100ಗ್ರಾಮ್

4. ತಯಾರಾದ ಸಿಹಿಗುಂಬಳಕಾಯಿಪುಡಿ      10ಗ್ರಾಮ್

5. ಹಾಲಿನಪುಡಿ                                     50ಗ್ರಾಮ್

6. ಪುಡಿ ಸಕ್ಕರೆ                                     40ಗ್ರಾಮ್

 

ಮಾಡುವ ವಿಧಾನ: ಮೊಳಕೆಬಂದ ರಾಗಿಯನ್ನು ಮೊದಲಿಗೆ ಮಿಕ್ಸಿ ಮಾಡಿಕೊಂಡು ಪುಡಿ ಮಾಡುವುದು. ನಂತರ ಒಂದು ಬೌಲ್‍ನಲ್ಲಿ ಸೋಯಾ ಹುಡಿ, ರಾಗಿ ಹಿಟ್ಟು, ಸಿಹಿಕುಂಬಳ ಕಾಯಿ ಪುಡಿ, ಹಾಲಿನ ಪುಡಿ, ಸಕ್ಕರೆ ಪುಡಿ ಎಲ್ಲವನ್ನು ಹಾಕಿ ಚೆನ್ನಾಗಿ ಬೆರೆಸಿ ಒಂದು ಸ್ಪೂನ್, ಗ್ಲಾಸ್‍ಗೆ ಹಾಕಿ ಕಾಯಿಸಿದ ಹಾಲಿಗೆ ಹಾಕಿದರೆ ರಾಗಿ ಮಾಲ್ಟ್ ಸವಿಯಲು ಸಿದ್ಧ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry