ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಊಟದ ಜತೆಗೆ ಇರಲಿ ತುಂಬು ಬೆಂಡೆಕಾಯಿ !

Last Updated 8 ಮಾರ್ಚ್ 2017, 6:17 IST
ಅಕ್ಷರ ಗಾತ್ರ
ADVERTISEMENT

ಬೆಂಡೆಕಾಯಿಯಲ್ಲಿ ಸಾಕಷ್ಟು ಖಾದ್ಯಗಳನ್ನು ತಯಾರಿಸಬಹುದು. ಇವುಗಳಲ್ಲಿ ತುಂಬು ಬೆಂಡೆಕಾಯಿ  ಮಾಡಿ ಊಟದ ಜತೆಯಲ್ಲಿ ಮೆಲ್ಲುವುದೇ ಒಂದು ಖುಷಿ. ಪ್ರಜಾವಾಣಿ, ತುಂಬು ಬೆಂಡೆಕಾಯಿ ಮಾಡುವುದು ಹೇಗೆ ಎಂಬ  ರೆಸಿಪಿಯನ್ನು ತಂದಿದೆ. ವಿಡಿಯೊ ನೋಡುವ ಮೂಲಕ ತುಂಬು ಬೆಂಡೆಕಾಯಿ ಮಾಡುವುದನ್ನು ಕಲಿಯಿರಿ.

ಬೇಕಾಗುವ ಸಾಮಗ್ರಿಗಳು:
1. ಎಳೆಬೆಂಡೆಕಾಯಿ ಸೀಳಿದ್ದು         6
2. ಕೊತ್ತಂಬರಿ ಸೊಪ್ಪು                ಸ್ವಲ್ಪ
3. ಉಪ್ಪು                                ಸ್ವಲ್ಪ
4. ಎಣ್ಣೆ                                  3ಚಮಚ

ತುಂಬುವುದಕ್ಕೆ
1. ತೆಂಗಿನಕಾಯಿ ತುರಿ               1ಕಪ್
2. ಅಚ್ಚಖಾರದ ಪುಡಿ                  2ಚಮಚ
3. ಧನಿಯಾ ಪುಡಿ                     2ಚಮಚ
4. ಅರಿಶಿನ                           1/2ಚಮಚ
5. ಉಪ್ಪು                              ಸ್ವಲ್ಪ
ಮಾಡುವ ವಿಧಾನ: ಸೀಳಿದ ಬೆಂಡೆಕಾಯಿಯೊಳಗೆ ತೆಂಗಿನ ಕಾಯಿ ಮಿಶ್ರಣವನ್ನು ತುಂಬುವುದು. ಮಿಶ್ರಣ (ತೆಂಗಿನಕಾಯಿ ತುರಿ, ಅಚ್ಚಖಾರದ ಪುಡಿ, ಧನಿಯಾ ಪುಡಿ, ಅರಿಶಿನ, ಉಪ್ಪು) ಬಾಂಡ್ಲಿಯಲ್ಲಿ ಎಣ್ಣೆ ಬಿಸಿಮಾಡಿ ತುಂಬಿದ ಬೆಂಂಡೆಕಾಯಿಯನ್ನು ಹಾಕಿ, ತಟ್ಟೆ ಮುಚ್ಚಿಟ್ಟು ಕಮ್ಮಿ ಉರಿಯಲ್ಲಿ 5 ನಿಮಿಷ ಬೇಯಿಸಿ ನಂತರ ಉಳಿದ ತೆಂಗಿನಕಾಯಿ ಮಿಶ್ರಣವನ್ನು, ಕೊತ್ತಂಬರಿ ಸೊಪ್ಪನ್ನೂ ಹಾಕಿದರೆ ತುಂಬು ಬೆಂಡೆಕಾಯಿ ಸವಿಯಲು ಸಿದ್ಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT