ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟಾಚಾರ ಕಡಿವಾಣ ಹೊರತಾಗಿಯೂ ಮೂಲಸೌಲಭ್ಯಕ್ಕಾಗಿ ಲಂಚ ನೀಡಿಕೆ ಒತ್ತಡದಲ್ಲಿ ಶೇ 70ರಷ್ಟು ಭಾರತೀಯರು

Last Updated 7 ಮಾರ್ಚ್ 2017, 14:29 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭ್ರಷ್ಟಾಚಾರ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಹೊರತಾಗಿಯೂ ಭಾರತದಲ್ಲಿ ನಾಗರಿಕರು ಮೂಲ ಸೌಲಭ್ಯ ಪಡೆಯಲು ಲಂಚ ನೀಡಲೇ ಬೇಕಾದ ಒತ್ತಡದಲ್ಲಿ ಸಿಲುಕಿದ್ದಾರೆ ಎಂದು ವರದಿ ಬಹಿರಂಗಪಡಿಸಿದೆ.

ಸರ್ಕಾರಿ ಸಾರ್ವಜನಿಕ ಸೇವೆಗಳಾದ ಶಾಲೆ, ಆಸ್ಪತ್ರೆಗಳಂತಹ ಮೂಲ ಸೌಲಭ್ಯ ಪಡೆಯಲು 10 ಮಂದಿ ಭಾರತೀಯರಲ್ಲಿ ಏಳು ಮಂದಿ(ಶೇಕಡಾ 69) ಲಂಚ ನೀಡಬೇಕಾದ ಸ್ಥಿತಿ ಇದೆ ಎಂದು ‘ಟ್ರಾನ್ಸ್‌ಪರೆನ್ಸಿ ಇಂಟರ್‌ ನ್ಯಾಷನಲ್‌’ ವರದಿಯಲ್ಲಿ ಹೇಳಿದೆ ಎಂದು ‘ಫ್ಲಿಪ್‌ಬೋರ್ಡ್‌’ ವರದಿ ಮಾಡಿದೆ.

‘ಸಾರ್ವಜನಿಕರು ಮತ್ತು ಭ್ರಷ್ಟಾಚಾರ: ಏಷ್ಯಾ ಪೆಸಿಫಿಕ್‌’ ಶೀರ್ಷಿಕೆ ಅಡಿ 16 ರಾಷ್ಟ್ರಗಳು ಹಾಗೂ ಇತರೆ ಕೆಲವು ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಲಾಗಿದ್ದು, ಅತಿ ಹೆಚ್ಚು ಲಂಚದ ಪ್ರಮಾಣ ಭಾರತದಲ್ಲಿ ನಡೆಯುತ್ತಿದೆ ಎಂದು ವರದಿ ಬಹಿರಂಗಪಡಿಸಿದೆ. ಭ್ರಷ್ಟಾಚಾರ ವಿರೋಧಿ ಸಂಘಟನೆ 2016ರ ಮಾರ್ಚ್‌ ಮತ್ತು ಏಪ್ರಿಲ್‌ನಲ್ಲಿ ಭಾರತದಲ್ಲಿ 2,802 ಜನರ ಮುಖಾ ಮುಖಿ ಸಂದರ್ಶನ ನಡೆಸಿದೆ.

ದೊಡ್ಡಮಟ್ಟದ ಹಗರಣಗಳು ಮಾಧ್ಯಮಗಳನ್ನು ಸೆಳೆಯುತ್ತವೆ; ಈ ಕುರಿತು ವರದಿ ಮಾಡುತ್ತವೆ. ಆದರೆ, ಇವು ದಿನ ನಿತ್ಯ ನಡೆಯುವ ಸಣ್ಣ ಸಣ್ಣ ಲಂಚ ಪ್ರಕರಣಗಳು ದೇಶದ ಅಭಿವೃದ್ಧಿ ಹಾಗೂ ಬೆಳವಣಿಗೆಯ ಪಥದಲ್ಲಿ ನಿಂತಿದೆ.

ಪೊಲೀಸರು ಹಾಗೂ ನ್ಯಾಯಾಲಯಗಳಲ್ಲಿ ವ್ಯವಹರಿಸುವ ಸಂದರ್ಭಗಳೂ ಸೇರಿದಂತೆ ನಾಗರಿಕರ ಸಾಮಾನ್ಯ ಅಗತ್ಯಗಳಾದ ಗುರುತಿನ ಚೀಟಿ, ಮತದಾರರ ಗುರುತಿನ ಚೀಟಿ, ಚಾಲನ ಪರವಾನಗಿ ಮತ್ತಿತರ ಉಪಯುಕ್ತ ಸೇವೆಗಳನ್ನು ಪಡೆಯಲು ಹೆಚ್ಚುವರಿ ಲಂಚ ಪಾವತಿ ಮಾಡಬೇಕಾದ ಒತ್ತಡದಲ್ಲಿ ಸಿಲುಕಿದ್ದಾರೆ ಎಂದು ವರದಿಯಲ್ಲಿ ಹೇಳಿದೆ.

2014ರಲ್ಲಿ ಅಧಿಕಾರಕ್ಕೆ ಬಂದ ವೇಳೆ ಪ್ರಧಾನಿ ಮೋದಿ ಅವರು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದಾಗಿ ವಾ‌ಗ್ದಾನ ಮಾಡಿದ್ದರು. ಆದಾಗ್ಯೂ, ಅತ್ಯಂತ ದೊಡ್ಡ ಮಟ್ಟದ ಹಗರಗಳೂ ಬಯಲಾಗಿವೆ. ನೋಟು ಅಮಾನ್ಯ ಮಾಡಿ ನಗದು ರಹಿತ ವಹಿವಾಟಿಗೆ ಒತ್ತು ನೀಡುವ ಮೂಲಕ ಮೋದಿ ಅವರು ಭ್ರಷ್ಟಾಚಾರ ನಿಯಂತ್ರಣಕ್ಕೆ ಮುಂದಾದರು.

ಇದಕ್ಕೂ ಮುನ್ನ ಶೇ 53ರಷ್ಟು ಜನ ಮೋದಿ ಸರ್ಕಾರ ಭ್ರಷ್ಟಾಚಾರ ನಿಯಂತ್ರಣಕ್ಕೆ ಕ್ರಮ ಕೈಗೊಂಡಿರುವುದಾಗಿ ನಂಬಿದ್ದರು ಎಂದು ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT