ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲ್‌ಗೆ ಬಂದ ಮಲೆನಾಡ ಚಿಪ್ಪಣಬೆ!

Last Updated 10 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮಲೆನಾಡಿನ ಬೆಟ್ಟ–ಗುಡ್ಡ, ಕಾಡುಗಳ ಮಧ್ಯೆ ಬೆಳೆಯುವ ಈ ಅಣಬೆಗೆ ಈಗ ದೊಡ್ಡ ನಗರಗಳ ಮಾಲ್‌ಗಳಲ್ಲಿ ‘ರಾಜ ಯೋಗ’ ಕುದುರಿದೆ.
ಸ್ಥಳೀಯವಾಗಿ ಚಿಪ್ಪಣಬೆ (ಆಯ್‌ ಸ್ಟರ್‌) ಎನ್ನಲಾಗುತ್ತದೆ. ಕಾಡು ಹೂವಿನಂತಿದ್ದ ಈ ಅಣಬೆಗೆ ಹೊಸ ವಿನ್ಯಾಸ ನೀಡಿ, ಮನೆ– ಮನೆಗಳಿಗೆ ತಲುಪುವಂತೆ ಮಾಡಿದ ಕೀರ್ತಿ ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ (ಐಐಎಚ್‌ಆರ್‌) ವಿಜ್ಞಾನಿಗಳಿಗೆ ಸಲ್ಲುತ್ತದೆ. 

ದೊಡ್ಡ ಗಾತ್ರದ ಟೆಟ್ರಾ ಬಾಕ್ಸ್‌ಗಳಲ್ಲಿ ಬಿಳಿ, ಗುಲಾಬಿ, ಕಂದು, ನೀಲಿ, ಹಳದಿ, ಬೂದಿ, ಕಪ್ಪು ಮಿಶ್ರಿತ ಬೂದಿ ಬಣ್ಣಗಳ ಅಣಬೆಗಳು ಲಭ್ಯ ಇವೆ. ಬಾಕ್ಸ್‌ನಿಂದ ಹೊರಗೆ ಆಕರ್ಷಕ ವಿನ್ಯಾಸಗಳಲ್ಲಿ ಅಣಬೆಗಳು ಬೆಳೆಯುತ್ತವೆ. ಇವು ಪ್ರದರ್ಶನಕ್ಕಾಗಿ ಇಡುವ  ಅಣಬೆಗಳಂತೂ ಅಲ್ಲ. ಆಹಾರವಾಗಿ ಬಳಸುವಂತದ್ದು.
‘ಆ್ಯಂಟಿ ಆಕ್ಸಡೆಂಟ್‌ ಗುಣವನ್ನು ಹೊಂದಿರುವ ಈ  ಅಣಬೆಯು ಪೌಷ್ಟಿಕ ಆಹಾರವೂ ಹೌದು’ ಎಂದು ಐಐಎಚ್‌ಆರ್‌ನ ಮಷ್ರೂಮ್‌ ರೀಸರ್ಚ್‌ ಲ್ಯಾಬೊರೇಟರಿಯ ಪ್ರಧಾನ ವಿಜ್ಞಾನಿ ಡಾ.ಮೀರಾ ಪಾಂಡೆ ‘ಪ್ರಜಾವಾಣಿ’ಗೆ ತಿಳಿಸಿದರು.

ಶಿವಮೊಗ್ಗ ಜಿಲ್ಲೆಯ ಘಟ್ಟ ಪ್ರದೇಶದಲ್ಲಿ ಬೆಳೆಯುವ ಈ ಅಣಬೆಯನ್ನು ಸಂಗ್ರಹಿಸಿ ಅದರ ತಳಿಯನ್ನು  ಒಂದಷ್ಟು  ಸುಧಾರಿಸಲಾಗಿದೆ. ಅದರ  ಸ್ವಾದ ಮತ್ತು ಬಣ್ಣ ನೈಸರ್ಗಿಕವಾದುದೇ.  ಕೇವಲ  ಬಿಳಿ ಬಣ್ಣದ ಅಣಬೆ ಒಳ್ಳೆಯದು, ಉಳಿದವು ಒಳ್ಳೆಯದಲ್ಲ ಎಂಬ ಭಾವನೆ ಜನರಲ್ಲಿದೆ. ಅದು ತಪ್ಪು. ಕೆಲವು ಬಗೆಯ ಬಿಳಿ ಅಣಬೆಗಳು ವಿಷಕಾರಿಯೂ ಆಗಿರುತ್ತವೆ ಎಂದರು.

ಬಾಕ್ಸ್‌ಗಳಲ್ಲಿ ಅಣಬೆಯನ್ನು ಬೆಳೆಸುವುದು ಅತಿ ಸುಲಭ. ಮನೆಯಲ್ಲಿ ಪ್ರತಿ ದಿನ ನೀರನ್ನು ಚಿಮುಕಿಸಿದರೆ ಸಾಕು. ಬಾಕ್ಸ್‌ನ ಆಚೆ ಮೊಳಕೆಯೊಡೆಯುತ್ತದೆ. ಕ್ರಮೇಣ ಬೆಳೆಯುತ್ತಾ ಹೋಗುತ್ತದೆ. ದೊಡ್ಡದಾದ ನಂತರ ಕತ್ತರಿಸಿ ತೆಗೆದು ಅಡುಗೆಗೆ ಬಳಸಬಹುದು. 15 ದಿನಗಳೊಳಗೆ ಎರಡು ಬೆಳೆಗಳನ್ನು ತೆಗೆಯಬಹುದು. ಸುಮಾರು 400 ಗ್ರಾಂಗಳಷ್ಟು ಅಣಬೆ ಸಿಗುತ್ತದೆ ಎಂದು ಮೀರಾ ಪಾಂಡೆ ವಿವರಿಸಿದರು. 

ಅಣಬೆ ಬೆಳೆಯುವುದಕ್ಕೆ ಮಾಧ್ಯಮವಾಗಿ ಅನೇಕ ರೀತಿಯ ಸಸ್ಯ ತ್ಯಾಜ್ಯಗಳು, ಆಹಾರ ಧಾನ್ಯಗಳ ಹುಲ್ಲು, ಹೊಟ್ಟು, ನಿರುಪಯುಕ್ತ ಹತ್ತಿ, ಜೋಳದ ದಂಟು, ಕಡಲೇಕಾಯಿ ಬೀಜದ ಸಿಪ್ಪೆ ಬಳಸಲಾಗುತ್ತದೆ. ಇದನ್ನು  ಸ್ವ–ಸಹಾಯ ಗುಂಪುಗಳ ಸ್ತ್ರೀಯರ ಮೂಲಕ ತಯಾರಿಸಲಾಗುತ್ತದೆ. ಇವರಿಗೆ ಒಂದು ಬಾಕ್ಸ್‌ಗೆ ₹ 36 ಕೊಡುತ್ತೇವೆ ಎಂದು ಬಾಕ್ಸ್‌ಗಳಲ್ಲಿ ಆಯ್‌ಸ್ಟರ್‌ ಅಣಬೆ ಬೆಳೆಸುವ ಪರವಾನಗಿ ಪಡೆದಿರುವ ಬಿಗ್‌ ಬಾಸ್ಕೆಟ್‌ನ ಪ್ರತಿನಿಧಿ ಹೇಳಿದರು.
 ಒಂದು ಬಾಕ್ಸ್‌ಗೆ ₹ 150 ಬೆಲೆ ಇದೆ. ಜನವರಿ ಕೊನೆಯಲ್ಲಿ  ಬೆಂಗಳೂರಿನ ಮಾರುಕಟ್ಟೆಗೆ  ಪರಿಚಯಿಸಿದ್ದೇವೆ   ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT