7

ಹೊಸ ಬಗೆಯ ಬೇಬಿ ಕಾರ್ನ್ ಕಬಾಬ್ !

Published:
Updated:
ಹೊಸ ಬಗೆಯ ಬೇಬಿ ಕಾರ್ನ್ ಕಬಾಬ್ !

ಕಬಾಬ್ ಅಂದರೆ ಸಾಕು ಬಾಯಲ್ಲಿ ನೀರೂರುವುದು ಸಹಜ! ಆದರೆ ಹೊಸ ಬಗೆಯ ಬೇಬಿ ಕಾರ್ನ್ ಕಬಾಬ್ ಮಾಡುವುದು ಹೇಗೆ ಎಂಬುದು ನಿಮಗೆ ಗೊತ್ತೆ? ಈ ವಾರದ ಪ್ರಜಾವಾಣಿ ರೆಸಿಪಿಯಲ್ಲಿರುವ ’ಬೇಬಿ ಕಾರ್ನ್ ಕಬಾಬ್’ ವಿಡಿಯೊ ನೋಡುವ ಮೂಲಕ ಕಬಾಬ್ ಮಾಡುವುದನ್ನು ಕಲಿಯಿರಿ.

ಬೇಕಾಗುವ ಸಾಮಗ್ರಿಗಳು

1. ಪಾ¯ಕ್ ಪೇಸ್ಟ್ -                                         1/4  ಕಪ್

2. ಬೇಯಿಸಿ ಮ್ಯಾಶ್ ಮಾಡಿದ ಅಮೆರಿಕನ್ ಕಾರ್ನ್ -  1/4 ಕಪ್

3. ಬೇಯಿಸಿ ಮ್ಯಾಶ್ ಮಾಡಿದ ಆಲೂಗಡ್ಡೆ -               2

4. ಸಣ್ಣಗೆ ಹೆಚ್ಚಿದ ಶುಂಠಿ -                                    ಒಂದು ಚಮಚ

5. ಖಾರದ ಪುಡಿ -                                            1/2 ಚಮಚ

6. ಸಣ್ಣಗೆ ಹೆಚ್ಚಿದ ಹಸಿಮೆಣಸಿನ ಕಾಯಿ –                 4 ಚಮಚ

7. ಗರಮ್ ಮಸಾಲ -                                       1/2 ಚಮಚ

8. ಬ್ರೆಡ್ ಪುಡಿ -                                              1 ಕಪ್

9. ಬೇಯಿಸಿದ ಬೇಬಿ ಕಾರ್ನ್ ಬೇಯಿಸಿದ್ದು -              4

10. ಎಣ್ಣೆ -                                                     ಕರಿಯಲು

ಮಾಡುವ ವಿಧಾನ: ಆಲೂ ಗಡ್ಡೆಯನ್ನು ಬೇಯಿಸಿ ಮ್ಯಾಶ್ ಮಾಡಿ. ಅದಕ್ಕೆ ಅಮೆರಿಕನ್ ಕಾರ್ನ್, ಪಾಲಾಕ್ ಪೇಸ್ಟ್, ಹೆಚ್ಚಿದ ಶುಂಠಿ, ಉಪ್ಪು, ಖಾರದ ಪುಡಿ,  ಹೆಚ್ಚಿದ ಹಸಿಮೆಣಸಿನ ಕಾಯಿ, ಗರಮ್ ಮಸಾಲ, ಸ್ವಲ್ಪ ಬ್ರೆಡ್ ಪುಡಿಯನ್ನು ಹಾಕಿ ಚೆನ್ನಾಗಿ ಕಲಸಿ.

ತಯಾರಾದ ಈ ಮಸಾಲೆಯನ್ನು ಪ್ರತಿತಿಯೊಂದು ಬೇಬಿ ಕಾರ್ನ್ ಗೂ ಪೂರ್ತಿಯಾಗಿ ಹಚ್ಚಿ.  ಮಿಕ್ಕ ಬ್ರೆಡ್ ಪುಡಿಯಲ್ಲಿ ಇವನ್ನು ಹೊರಳಿಸಿ. ಕಾದ ಎಣ್ಣೆಯಲ್ಲಿ ಕರಿಯಿರಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry