ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನ ಸಂಚಾರ ದಟ್ಟಣೆ: ನೇರ ರನ್‌ ವೇಗೆ ಪರ್ಯಾಯವಾಗಿ ವೃತ್ತಾಕಾರದ ರನ್‌ ವೇ ಯೋಜನೆ!

Last Updated 17 ಮಾರ್ಚ್ 2017, 14:21 IST
ಅಕ್ಷರ ಗಾತ್ರ

ಹವಾಮಾನ ವೈಪರೀತ್ಯದ ಸಂದರ್ಭದಲ್ಲಿ ವಿಮಾನಗಳನ್ನು ಸುರಕ್ಷಿತವಾಗಿ ಲ್ಯಾಂಡಿಂಗ್‌(ಇಳಿಸಲು) ಮಾಡಲು ಪ್ರಯಾಸ ಪಡಬೇಕಾಗುತ್ತದೆ. ಬಿರುಗಾಳಿ ಸಂದರ್ಭದಲ್ಲಿ ವಿಮಾನ ಲ್ಯಾಂಡಿಂಗ್‌ ಮಾಡುವುದು ಅಪಾಯಕಾರಿ.

ವೇಗವಾಗಿ ಬೀಸುವ ಗಾಳಿಗೆ ಅಡ್ಡವಾಗಿ ಲ್ಯಾಂಡ್ ಆಗುತ್ತಿದ್ದ ವಿಮಾನವೊಂದು ಗಾಳಿಯ ವೇಗದಿಂದಾಗಿ ಸ್ಥಿರತೆ ಕಳೆದುಕೊಂಡು ಅಪಾಯಕ್ಕೆ ಸಿಲುಕುವ ವಿಡಿಯೊವೊದನ್ನು ನೋಡಿದ ಹೆಂಕ್‌ ಹಾಸೆಲಿಂಕ್‌ ಎನ್ನುವವರು ಇದಕ್ಕೆ ಪರಿಹಾರ ಕಂಡುಕೊಳ್ಳುವ ಆಲೋಚನೆ ಮಾಡುತ್ತಾರೆ.

ಜೊತೆಗೆ ಸಾರಿಗೆ ವ್ಯವಸ್ಥೆಯಲ್ಲಿ ವಾಹನ ದಟ್ಟಣೆ ಸಮಸ್ಯೆ ಹೆಚ್ಚಾದಂತೆ ವಿಮಾನಯಾನಕ್ಕೆ ಬೇಡಿಕೆ ಹೆಚ್ಚಾಗಿದೆ. ಸಮಯ ಉಳಿತಾಯ ಹಾಗೂ ಹಿತಕರ ಪ್ರಯಾಣದ ದೃಷ್ಟಿಯಿಂದ ಪ್ರಯಾಣಿಕರ ನೆಚ್ಚಿನ ಸಾರಿಗೆ ಮಾರ್ಗವಾಗಿರುವ ವಿಮಾನಯಾನದಲ್ಲೂ ದಿನದಿಂದ ದಿನಕ್ಕೆ ಜನದಟ್ಟಣೆ ಆಗುತ್ತಿರುವುದನ್ನು ಮನಗಂಡ ಹೆಂಕ್‌ ಅವರು ವೃತ್ತಾಕಾರದ ರನ್‌ ವೇಗಳನ್ನು ನಿರ್ಮಿಸುವ ಬಗ್ಗೆ ಚಿಂತಿಸಿದ್ದಾರೆ.

ಈ ಯೋಜನೆಯ ಬೆನ್ನು ಹತ್ತಿದ ಹೆಂಕ್‌ ಕಾರ್ಯರೂಪಕ್ಕೆ ತರಲು ತಂಡ ಕಟ್ಟಿಕೊಂಡು ಸತತ ಹಲವು ವರ್ಷ ಸಂಶೋಧನೆ ನಡೆಸಿ, ಸಿಮ್ಯುಲೇಟರ್ ಬಳಸಿ ಏಕಕಾಲದಲ್ಲಿ ಮೂರು ವಿಮಾನಗಳನ್ನು ಲ್ಯಾಂಡಿಂಗ್‌ ಮಾಡಲು ಸಾಧ್ಯವಿರುವ 3.5ಕಿ.ಮೀ ವ್ಯಾಸದ ಸುರುಳಿಯಾಕಾರದ ರನ್‌ವೇ ರಚಿಸುತ್ತಾರೆ.

ಈ ಯೋಜನೆ ಪ್ರಕಾರ ಲ್ಯಾಂಡಿಂಗ್‌ ವೇಳೆ ವಿಮಾನ ರನ್‌ ವೇನ ಕೇಂದ್ರಾಭಿಮುಖವಾಗಿ(ಮಧ್ಯದ ಕಡೆಗೆ) ಚಲಿಸುವುದರಿಂದ ಪ್ರಯಾಣಿಕರು ಗಾಳಿಯಲ್ಲಿ ತೇಲುತ್ತಿರುವಂತ ವಿಶೇಷ ಅನುಭವ ಪಡೆಯಬಹುದು ಹಾಗೂ ಯಾವುದೇ ದಿಕ್ಕಿನಿಂದ ಬೇಕಾದರೂ ವಿಮಾನವನ್ನು ಚಾಲನೆ ಮಾಡಲು ಸಾಧ್ಯವಿದ್ದು ವಿಮಾನ ಚಲಿಸುತ್ತಿರುವ ದಿಕ್ಕಿನಿಂದಲೇ ನೇರವಾಗಿ ಲ್ಯಾಂಡಿಂಗ್‌ ಮಾಡಿಕೊಳ್ಳಲು ಈ ಯೋಜನೆ ಸಹಾಯಕವಾಗಿದೆ.

ಇದರ ಮಹತ್ವನ್ನರಿತ ಯುರೋಪಿಯನ್‌ ವಿಮಾನಯಾನ ಸಂಸ್ಥೆ 1960ರ ದಶಕದಲ್ಲಿ ಒಮ್ಮೆ ಮಿಲಿಟರಿ ಯುದ್ಧ ವಿಮಾನಗಳನ್ನು ಪರೀಕ್ಷಾರ್ಥವಾಗಿ ಹಾರಾಟ ಮಾಡಿತ್ತು. ಆದರೆ ಬಳಿಕ ಇಂತಹ ಮಹತ್ವದ ಯೋಜನೆಯನ್ನು ಕಾರ್ಯಗತಗೊಳಿಸುವ ಆಲೋಚನೆ ಮಾಡಲಿಲ್ಲ.

ವೃತ್ತಾಕಾರದ ರನ್‌ ವೇನ ಧನಾತ್ಮಕ ಅಂಶಗಳು

* ಕಡಿಮೆ ಇಂಧನ ದಕ್ಷತೆಯ ಮೂಲಕ ಲ್ಯಾಂಡಿಂಗ್‌ ಮಾಡಲು ಸಾಧ್ಯ

* ಶಬ್ದ ಮಾಲಿನ್ಯಕ್ಕೆ ತಡೆ

* ಪರಿಸರ ಸ್ನೇಹಿ ರನ್‌ ವೇ

* ವಿಮಾಣ ನಿಲ್ದಾಣ ಸಮೀಪದಲ್ಲಿ ವಾಸಿಸುವ ಜನ ಜೀವನದ ಮೇಲೆ ಉಂಟಾಗುವ ಮಾಲಿನ್ಯದ ಪರಿಣಾಮವನ್ನು ತಗ್ಗಿಸಬಹುದು.

* ನಾಲ್ಕು ನೇರ ರನ್‌ ವೇಗಳಿಗೆ ಸಮನಾಗಿ ಒಂದೇ ವೃತ್ತಾಕಾರದ ರನ್‌ ವೇಗಳು ಕಾರ್ಯನಿರ್ವಹಿಸುತ್ತದೆ.

* ಹವಾಮಾನ ವೈಪರಿತ್ಯದ ಸಂದರ್ಭದಲ್ಲಿಯೂ ಸುಲಭ ಲ್ಯಾಂಡಿಂಗ್‌ ಮಾಡಬಹುದು.

* ಪ್ರಯಾಣಿಕರಿಗೆ ಹಿತಕರ ಅನುಭವ ನೀಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT