97 ನೇ ವಯಸ್ಸಿನಲ್ಲಿ ಪದವಿ ಅಧ್ಯಯನ

7

97 ನೇ ವಯಸ್ಸಿನಲ್ಲಿ ಪದವಿ ಅಧ್ಯಯನ

Published:
Updated:
97 ನೇ ವಯಸ್ಸಿನಲ್ಲಿ ಪದವಿ ಅಧ್ಯಯನ

ಪಟ್ನಾ (ಐಎಎನ್‌ಎಸ್): ಬಿಹಾರದ 97 ವರ್ಷ ವಯಸ್ಸಿನ ವೃದ್ಧರೊಬ್ಬರು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಶಿಕ್ಷಣಕ್ಕೆ ದಾಖಲಾಗುವ ಮೂಲಕ ಗಮನ ಸೆಳೆದಿದ್ದಾರೆ.

ತಮ್ಮ ಕನಸನ್ನು ಸಾಕಾರಗೊಳಿಸುವ ಕೊನೆಯ ಹಂತದಲ್ಲಿರುವ ಹಿರಿಯಜ್ಜ ರಾಜ್‌ಕುಮಾರ್ ವೈಶ್ಯ ಈಗ ಸ್ನಾತಕೋತ್ತರ ಪದವಿ ಓದುತ್ತಿರುವ ಅತಿ ಹಿರಿಯ ವ್ಯಕ್ತಿ ಎಂದು ಲಿಮ್ಕಾ ದಾಖಲೆಗೂ ಪಾತ್ರರಾಗಿದ್ದಾರೆ. ಇವರು 2015ರಲ್ಲಿ ನಲಂದಾ ಮುಕ್ತ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿಗೆ ಸೇರಿಕೊಂಡಿದ್ದಾರೆ.

‘ಸ್ನಾತಕೋತ್ತರ ಪದವಿ ಪಡೆಯಬೇಕೆಂದು ಬಹಳ ಹಿಂದಿನಿಂದಲೂ ಆಸೆಯಿತ್ತು. ಅಲ್ಲದೆ, ಬಡತನದಂಥ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಭಾರತ ಯಾಕೆ ವಿಫಲವಾಗಿದೆ ಎಂಬುದನ್ನು ತಿಳಿಯುವುದಕ್ಕಾಗಿ ಅರ್ಥಶಾಸ್ತ್ರ ಕಲಿಯಬೇಕು ಎಂದುಕೊಂಡಿದ್ದೆ. ಈ ಎರಡು ಕಾರಣಗಳಿಗಾಗಿ ಅಧ್ಯಯನ ಆರಂಭಿಸಿದ್ದೇನೆ’ ಎಂದು  ವೈಶ್ಯ ತಿಳಿಸಿದ್ದಾರೆ.

1920ರ ಏಪ್ರಿಲ್ 1ರಂದು ಉತ್ತರಪ್ರದೇಶದ ಬರೇಲಿಯಲ್ಲಿ ಜನಿಸಿದ್ದ ವೈಶ್ಯ ಅವರು 1938ರಲ್ಲಿ ಪದವಿ ಶಿಕ್ಷಣ ಪೂರೈಸಿದ್ದಾರೆ. 1940ರಲ್ಲಿ ಕಾನೂನು ವಿಷಯದಲ್ಲಿ ಪದವಿ ಪಡೆದಿದ್ದಾರೆ. ಅವರು ಕೊಡೆರ್ಮಾದಲ್ಲಿ (ಈಗ ಜಾರ್ಖಂಡ್‌ನಲ್ಲಿರುವ ಪ್ರದೇಶ) ಖಾಸಗಿ ಕಂಪೆನಿಯೊಂದರ ಪ್ರಧಾನ ವ್ಯವಸ್ಥಾಪಕರಾಗಿ 1980ರಲ್ಲಿ ನಿವೃತ್ತಿ ಹೊಂದಿದ್ದಾರೆ. ಕಳೆದ 10 ವರ್ಷಗಳಿಂದ ತಮ್ಮ ಎರಡನೇ ಮಗನ ಜತೆ ಪಟ್ನಾದ ರಾಜೇಂದ್ರ ನಗರ ಕಾಲನಿಯಲ್ಲಿ ವಾಸಿಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry