ಸಿರಿಯಾ: 47 ಜನರ ಸಾವು

7

ಸಿರಿಯಾ: 47 ಜನರ ಸಾವು

Published:
Updated:

ಡಮಾಸ್ಕಸ್‌: ಸಿರಿಯಾ ರಾಜಧಾನಿ ಡಮಾಸ್ಕಸ್‌ನಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ನಡೆದ ಸಂಘರ್ಷದಲ್ಲಿ 47 ಮಂದಿ ಹತ್ಯೆಯಾಗಿದ್ದಾರೆ ಎಂದು  ಮಾನವ ಹಕ್ಕುಗಳ ವೀಕ್ಷಣಾಲಯ (ಎಸ್‌ಒಎಚ್‌ಆರ್‌) ವರದಿ ಮಾಡಿದೆ. 

 

ಮೃತಪಟ್ಟವರಲ್ಲಿ 26 ಜನರು ಭದ್ರತಾ ಪಡೆ ಸಿಬ್ಬಂದಿ ಹಾಗೂ 21 ಮಂದಿ ಉಗ್ರರು ಎಂದು ಮಾನವ ಹಕ್ಕುಗಳ ವೀಕ್ಷಣಾಲಯ ಹೇಳಿದೆ. ಇದರಲ್ಲಿ ಆತ್ಮಹತ್ಯಾ ದಾಳಿಯಲ್ಲಿ ಮೃತಪಟ್ಟ ಇಬ್ಬರು ಸೇರಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. 

 

ಜೋಬರ್‌ ಪ್ರದೇಶದಲ್ಲಿ ಯುದ್ಧ ವಿಮಾನಗಳು 10 ಬಾರಿ ದಾಳಿ ನಡೆಸಿವೆ. ಮಾ.15 ರಂದು ಡಮಾಸ್ಕಸ್‌ನ ಕೇಂದ್ರ ಭಾಗದಲ್ಲಿ ನಡೆದ ಆತ್ಮಹತ್ಯಾ ದಾಳಿಯಲ್ಲಿ 31 ಜನರು ಮೃತಪಟ್ಟಿದ್ದರು ಎಂದು ಬಿಬಿಸಿ ವರದಿ ಮಾಡಿತ್ತು. ಅದೇ ದಿನ ರೆಸ್ಟೊರೆಂಟ್‌ ಮೇಲೆ ನಡೆದ ಇನ್ನೊಂದು ಆತ್ಮಹತ್ಯಾ ದಾಳಿಯಲ್ಲಿ 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry