7

ನಾಲಿಗೆಗೆ ಮತ್ತಷ್ಟು ರುಚಿ ಕೊಡುವ ಚಿಕನ್ ಅಂಬ್ರೆಲಾ

Published:
Updated:
ನಾಲಿಗೆಗೆ ಮತ್ತಷ್ಟು ರುಚಿ ಕೊಡುವ ಚಿಕನ್ ಅಂಬ್ರೆಲಾ

ಕೋಳಿ ಮಾಂಸದಲ್ಲಿ ವಿವಿಧ ರೀತಿಯ ಖಾದ್ಯಗಳನ್ನು ಮಾಡಬಹುದು. ಚಿಕನ್‌ ಕಬಾಬ್, ಚಿಕನ್ ಕರ್ರಿ, ಚಿಲ್ಲಿ ಚಿಕನ್ ನಮಗೆ ಪರಿಚಿತ. ಇದೀಗ ನಾಲಿಗೆಗೆ ಮತ್ತಷ್ಟು ರುಚಿ ಕೊಡುವ, ಹೊಸ ನಮೂನೆಯ ಚಿಕನ್‌ ಅಂಬ್ರೆಲಾ ಬಂದಿದೆ. ಈ ವಾರದ ಪ್ರಜಾವಾಣಿ ರೆಸಿಪಿಯಲ್ಲಿ ಚಿಕನ್ ಅಂಬ್ರೆಲಾ ಮಾಡುವ ಬಗ್ಗೆ ಮಾಹಿತಿ ನೀಡಲಾಗಿದೆ.

ಸಾಮಗ್ರಿಗಳು

1. ಚಿಕನ್ -                           1/2 ಕೆಜಿ

2. ಎಣ್ಣೆ -                              2  ದೊಡ್ಡ ಚಮಚ

3. ಹಸಿಮೆಣಸಿನಕಾಯಿ -            20

4. ಶುಂಠಿ ಬೆಳ್ಳುಳ್ಳಿ ಪೇಸ್ಟ್ -         1 ದೊಡ್ಡ ಚಮಚ

5. ಅರಿಶಿನ -                          1/2 ಸ್ಪೂನ್

6. ತಂದೂರಿ ಬಣ್ಣ -                   ಸ್ವಲ್ಪ

7. ಟೊಮ್ಯಾಟೊ -                    2

8. ಉಪ್ಪು -                             ಸ್ವಲ್ಪ

9. ಗೋಡಂಬಿ -                       50 ಗ್ರಾಂ

10. ಖಾರದ ಪುಡಿ -                 1/2 ಸ್ಪೂನ್

11. ಧನಿಯಾ ಪುಡಿ -                1 ದೊಡ್ಡ ಚಮಚ

12. ಜೀರಿಗೆ ಪುಡಿ –                 1 ಚಮಚ

13. ತುಪ್ಪ -                          1 ದೊಡ್ಡ ಚಮಚ

ಮಾಡುವ ವಿಧಾನ: ಬಾಣಲೆಯಲ್ಲಿ ಎಣ್ಣೆ ಹಾಕಿ, ಹೆಚ್ಚಿದ ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸಿನ ಕಾಯಿ, ಅಚ್ಚ ಖಾರದ ಪುಡಿ, ಧನಿಯಾ ಪುಡಿ, ಅರಿಶಿನ, ತಂದೂರಿ ಬಣ್ಣ, ಹಾಕಿ ಹುರಿಯಿರಿ. ಆಮೇಲೆ ಟೊಮ್ಯಾಟೋ ಹಾಗೂ ಗೋಡಂಬಿ ಸೇರಿಸಿ ಮತ್ತೊಮ್ಮೆ ಕಲಸಿ. ಇದಕ್ಕೆ ಚಿಕನ್ ಹಾಖಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ 8-10 ನಿಮಿಷ ಗಟ್ಟಿಯಾಗಿ ಬೇಯಿಸಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry