12ರ ಹರಯಕ್ಕೇ ತಂದೆಯಾದ ಬಾಲಕ!

7

12ರ ಹರಯಕ್ಕೇ ತಂದೆಯಾದ ಬಾಲಕ!

Published:
Updated:
12ರ ಹರಯಕ್ಕೇ ತಂದೆಯಾದ ಬಾಲಕ!

ಕೊಚ್ಚಿ: ಕೇವಲ 12ವರ್ಷದ ಬಾಲಕನೋರ್ವ ತಂದೆಯಾಗುವ ಮೂಲಕ ‘ದೇಶದ ಕಿರಿಯ ತಂದೆ’ ಎನಿಸಿಕೊಂಡ ವಿಲಕ್ಷಣ ಪ್ರಕರಣವೊಂದು ಬೆಳಕಿಗೆ ಬಂದಿದೆ.

2016ರ ನವೆಂಬರ್‌ನಲ್ಲಿ 17 ವರ್ಷದ ಬಾಲಕಿ ಕಕ್ಕನಾಡ್‌ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮನೀಡಿದ್ದಳು. ಬಳಿಕ ತಮ್ಮ ಸಂಬಂಧಿ 12ರ ಬಾಲಕನಿಂದಲೇ ತಾನು ಗರ್ಭಧರಿಸಿದ್ದಾಗಿ ಹೇಳಿಕೆ ನೀಡಿದ್ದಳು. ಈ ಸಂಬಂಧ ಪೊಲೀಸರು ತನಿಖೆ ನಡೆಸಿದ್ದರು.

ತಿರುವನಂತಪುರಂಮಡಿಕಲ್‌ ಕಾಲೇಜಿನಲ್ಲಿ ಇಬ್ಬರ ರಕ್ತದ ಮಾದರಿಗಳನ್ನು ಪಡೆದು ಡಿಎನ್ಎ ಪರೀಕ್ಷೆ ನಡೆಸಿದ ನಂತರ ನಾಲ್ಕು ತಿಂಗಳ ಮಗುವಿನ ತಾಯಿಯಾಗಿರುವ 17 ವರ್ಷದ ಬಾಲಕಿ ತಾಯಿಯಾಗಲು  12ರ ಬಾಲಕನೇ ಕಾರಣ ಎಂಬುದು ಸಾಬೀತಾಗಿದೆ.

ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಕಲಾಮಸ್ಸೇರಿ ಸರ್ಕಲ್‌ ಇನ್ಸ್‌ಪೆಕ್ಟರ್ ಎಸ್‌. ಜಯಕೃಷ್ಣನ್‌ ಅವರು ‘ಇಬ್ಬರನ್ನೂ ಡಿಎನ್‌ಎ ಪರೀಕ್ಷೆಗೆ ಒಳಪಡಿಸಿದ ನಂತರ 12ರ ಹರೆಯದ ಬಾಲಕನೇ ಮಗುವಿನ ತಂದೆ ಎಂದು ತಿಳಿದು ಬಂದಿದೆ’ ಎಂದು ಮಾಹಿತಿ ನೀಡಿದ್ದಾರೆ.

ಸದ್ಯ ಇಬ್ಬರೂ ಅಪ್ರಾಪ್ತರಾಗಿರುವುದರಿಂದ ಪೋಸ್ಕೋ(ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ) ಕಾಯಿದೆ ಅಡಿಯಲ್ಲಿ  ಪ್ರಕರಣ ದಾಖಲಿಸಿಲಾಗಿದ್ದು, ಜುವೆನೈಲ್ ಜಸ್ಟೀಸ್ ಬೋರ್ಡ್ ಮುಂದೆ ಹಾಜರು ಪಡಿಸಲಾಗುವುದು ಎಂದು ತಿಳಿಸಿದ್ದಾರೆ.

ಖಾಸಗಿ ಅಸ್ಪತ್ರೆಯ ಮಾಧ್ಯಮ ಪ್ರತಿನಿಧಿ ಮಾತನಾಡಿ ‘ಮಗುವಿಗೆ ಜನ್ಮ ನೀಡಿದ ತಾಯಿ ಅಪ್ರಾಪ್ತೆ ಎಂದು ತಿಳಿದ ಕೂಡಲೇ ಮಕ್ಕಳ ರಕ್ಷಣಾ ಆಯೋಗ ಹಾಗೂ ಪೊಲೀಸರಿಗೆ ವಿಷಯ ತಿಳಿಸಿದ್ದೆವು’ ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry