ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವಿ ರುಚಿಯ ನೇಂದ್ರ ಬಾಳೆ ಹಣ್ಣಿನ ಹಲ್ವ!

Last Updated 31 ಮಾರ್ಚ್ 2017, 12:21 IST
ಅಕ್ಷರ ಗಾತ್ರ
ADVERTISEMENT

ಹಲ್ವ ಎಂದರೆ ಸಾಕು ಎಂತಹವರ ಬಾಯಲ್ಲೂ ನೀರೂರುತ್ತದೆ. ಅದರಲ್ಲೂ ಬಾಳೆ ಹಣ್ಣಿನ ಹಲ್ವ ಅಂದ್ರೆ ಆ ರುಚಿಯ ಮಜವೇ ಬೇರೆ! ಈ ಬಾರಿ ಪ್ರಜಾವಾಣಿಯು ನೇಂದ್ರ ಬಾಳೆ ಹಣ್ಣಿನ ಹಲ್ವ ಮಾಡುವ ರೆಸಿಪಿಯನ್ನು ತಂದಿದೆ. ಹಲ್ವ ಮಾಡುವ ವಿಧಾನಕ್ಕೆ ಪ್ರಜಾವಾಣಿ ರೆಸಿಪಿ ವಿಡಿಯೊ ನೋಡಿ.

ಸಾಮಗ್ರಿಗಳು
1. ನೇಂದ್ರ ಬಾಳೆ ಹಣ್ಣು                 - 1
2. ಸಕ್ಕರೆ                                 - 1/2  ಕಪ್
3. ತುಪ್ಪ                                  - 1/2 ಕಪ್
4. ಗೋಡಂಬಿ, ದ್ರಾಕ್ಷಿ                   - 25 ಗ್ರಾಂ
5. ಏಲಕ್ಕಿ ಪುಡಿ                          - ಸ್ವಲ್ಪ

ಮಾಡುವ ವಿಧಾನ: ನೇಂದ್ರ ಬಾಳೆ ಹಣ್ಣನ್ನು ಮಿಕ್ಸಿಯಲ್ಲಿ ಚೆನ್ನಾಗಿ ರುಬ್ಬಿ. ಬಾಣಲೆಯಲ್ಲಿ ಗೋಡಂಬಿ ದ್ರಾಕ್ಷಿಗಳನ್ನು ತುಪ್ಪ ಹಾಕಿ ಹುರಿಯಿರಿ. ಇದು ಪಕ್ಕಕ್ಕಿರಲಿ. ಈಗ ಒಂದು ಬಾಣಲೆಯಲ್ಲಿಸಕ್ಕರೆ ಹಾಕಿ, ನೀರು ಸೇರಿಸಿ ಪಾಕ ಮಾಡಿಕೊಳ್ಳಿ. ಈ ಸಕ್ಕರೆ ಪಾಕಕ್ಕೆ, ರುಬ್ಬಿಕೊಂಡ ನೇಂದ್ರ ಬಾಳ ಹಣ್ಣನ್ನು ಹಾಕಿ ಕಲಸಿ. ಸ್ವಲ್ಪ ತುಪ್ಪವನ್ನೂ ಸೇರಿಸಿ 5-6 ನಿಮಿಷಗಳವರೆಗೆ ಕುದಿಸಿ.

ಇನ್ನೂ ಸ್ವಲ್ಪ ತುಪ್ಪ ಹಾಕಿ ಹಾಕಿ ಚೆನ್ನಾಗಿ ಮೊಗಚಿ.  ಪಾತ್ರೆ ಬಿಡುವವರೆಗೆ ಕುದಿಸಿ, ಕೊನೆಯಲ್ಲಿ ಮಿಕ್ಕ ತುಪ್ಪ, ಏಲಕ್ಕಿ ಪುಡಿ ಹಾಕಿ ಚೆನ್ನಾಘಿ ಕಲಸಿ ಇಳಿಸಿ. ಒಂದು ಬೌಲ್ ಅಥವಾ ಪ್ಲೇಟ್ ಗೆ ಹಾಕಿ, ಮೊದಲೇ ಹುರಿದಿಟ್ಟುಕೊಂಡ ದ್ರಾಕ್ಷಿ ಗೋಡಂಬಿಗಳಿಂದ ಅಲಂಕರಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT