3

ಕುಸ್ತಿ ರಿಂಗ್‌ನಲ್ಲೇ ಪ್ರೊಪೋಸ್ ಮಾಡಿದ ಡಬ್ಲೂಡಬ್ಲೂಇ ಕುಸ್ತಿ ಪಟು ಜಾನ್‌ ಸೀನಾ

Published:
Updated:
ಕುಸ್ತಿ ರಿಂಗ್‌ನಲ್ಲೇ ಪ್ರೊಪೋಸ್ ಮಾಡಿದ ಡಬ್ಲೂಡಬ್ಲೂಇ ಕುಸ್ತಿ ಪಟು ಜಾನ್‌ ಸೀನಾ

ಒರ್ಲಾಂಡೋ(ಫ್ಲೋರಿಡಾ): ತಮ್ಮ ಧೀರ್ಘಕಾಲದ ಪ್ರೇಯಸಿ ದಿವಾ ನಿಕ್ಕಿ ಬೆಲ್ಲಾ  ಅವರಿಗೆ ಡಬ್ಲೂಡಬ್ಲೂಇನ ಜನಪ್ರಿಯ ಕುಸ್ತಿಪಟು ಜಾನ್‌ಸೀನಾ ಕುಸ್ತಿ ರಿಂಗ್‌ನಲ್ಲಿಯೇ ಪ್ರೇಮ ನಿವೇದನೆ ಮಾಡಿದರು.

ಈ ಮೂಲಕ ಸ್ವತಃ ನಿಕ್ಕಿಬೆಲ್ಲಾ ಹಾಗೂ ತಮ್ಮ ಅಭಿಮಾನಿಗಳಿಗೆ ಅಚ್ಚರಿ ನೀಡಿದ್ದಾರೆ.

ರೆಸಲ್ಮೇನಿಯಾ ಪಂದ್ಯಾವಳಿಯಲ್ಲಿ ದಿ ಮಿಜ್‌ ಹಾಗೂ ಮಾರ್ಸ್‌ ಜೋಡಿಯನ್ನು ಸೋಲಿಸಿದ ಬಳಿಕ ತಮ್ಮ ಜೊತೆಯಾಗಿ ಪಂದ್ಯದಲ್ಲಿ ಸೆಣೆಸಿದ್ದ 33ರ ಹರೆಯದ ಕುಸ್ತಿಪಟುವಿಗೆ ಕುಸ್ತಿ ರಿಂಗ್‌ನಲ್ಲಿಯೇ ಒಂದು ಮಂಡಿಯೂರಿ ಕುಳಿತು ಸಿನಿಮೀಯ ರೀತಿಯಲ್ಲಿ ಪ್ರೇಮ ನಿವೇದನೆ ಮಾಡಿದ್ದಾರೆ.

ಸೀನಾ ಕೋರಿಕೆಯನ್ನು ಪುರಸ್ಕರಿಸಿದ ನಿಕ್ಕಿ ತಕ್ಷಣ ಸೀನಾ ಅವರನ್ನು ಬಿಗಿದಪ್ಪಿ ಮುತ್ತಿಟ್ಟು ಸಂಭ್ರಮಿಸಿದರು.

ಬಳಿಕ ಈ ಬಗ್ಗೆ ಟ್ವೀಟ್‌ ಮಾಡಿರುವ ಜಾನ್‌ ಸೀನಾ ‘ಈ ಕ್ಷಣವನ್ನು ಎಂದಿಗೂ ಮರೆಯಲಾರೆ. ನನ್ನ ಕುಟುಂಬದಂತಿರುವ ಡಬ್ಲ್ಯೂಡಬ್ಲ್ಯೂಇಗೆ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ’ ಎಂದು ತಮ್ಮ ಭಾವನೆಯನ್ನು ಹಂಚಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry