ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಾಕ್ಷಿ

Last Updated 3 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ರೋಹ್ಟಕ್, ಹರಿಯಾಣ:  ರಿಯೊ ಒಲಿಂಪಿಕ್ಸ್‌ ವನಿತೆಯರ ಕುಸ್ತಿಯಲ್ಲಿ ಕಂಚಿನ ಪದಕವಿಜೇತೆ ಭಾರತದ ಸಾಕ್ಷಿ ಮಲಿಕ್ ಅವರು ತಮ್ಮ ಬಾಲ್ಯದ ಸ್ನೇಹಿತ, ಅಂತರರಾಷ್ಟ್ರೀಯ ಕುಸ್ತಿಪಟು ಸತ್ಯವ್ರತ್ ಕಡಿಯಾನ್ ಅವರೊಂದಿಗೆ ಭಾನುವಾರ ವಿವಾಹವಾದರು.

ಹೋದ ವರ್ಷದ ಅಕ್ಟೋಬರ್‌ನಲ್ಲಿ 24 ವರ್ಷದ ಸಾಕ್ಷಿ ಮತ್ತು 23 ವರ್ಷದ ಸತ್ಯವ್ರತ್ ಅವರ ಮದುವೆ ನಿಶ್ಚಯವಾಗಿತ್ತು. ವಿವಾಹ ಸಮಾರಂಭದಲ್ಲಿ ಒಲಿಂಪಿಯನ್ ಕುಸ್ತಿಪಟು ಸುಶೀಲ್‌ ಕುಮಾರ್, ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ, ಇಂಡಿಯನ್ ನ್ಯಾಷನಲ್ ಲೋಕ ದಳ ಪಕ್ಷದ ಮುಖಂಡ ಅಭಯ್ ಸಿಂಗ್ ಚೌಟಾಲಾ ಅವರು ಹಾಜರಿದ್ದರು.

ಸಾಕ್ಷಿ ಅವರು ರಿಯೊ ಒಲಿಂಪಿಕ್ಸ್‌ನ ಫ್ರೀಸ್ಟೈಲ್ ಕುಸ್ತಿಯ 58 ಕೆಜಿ ವಿಭಾಗದ ಲ್ಲಿ ಅವರು ಕಂಚಿನ ಪದಕ ಗೆದ್ದಿದ್ದರು. ಅದರೊಂದಿಗೆ ಒಲಿಂಪಿಕ್ಸ್‌ ಕುಸ್ತಿಯಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಸತ್ಯವ್ರತ್ ಕಡಿಯಾನ್ ಅವರು 2010ರ ಯೂತ್ ಒಲಿಂಪಿಕ್ಸ್‌ ನಲ್ಲಿ ಕಂಚು, 2014ರ ಕಾಮನ್‌ವೆಲ್ತ್ ಕೂಟದಲ್ಲಿ  ಬೆಳ್ಳಿ ಪದಕ ಗೆದ್ದಿದ್ದರು.

ಸಾಕ್ಷಿ ಮಲೀಕ್ ಅವರನ್ನು ಕ್ರಿಕೆಟ್ ವೀಕ್ಷಕ ವಿವರಣೆಕಾರ ವೀರೇಂದ್ರ ಸೆಹ್ವಾಗ್, ಬಾಕ್ಸರ್ ವಿಜೇಂದರ್ ಸಿಂಗ್, ಜಿಮ್ನಾಸ್ಟ್ ದೀಪಾ ಕರ್ಮಾಕರ್, ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಮತ್ತು ಪ್ಯಾರಾ ಅಥ್ಲೀಟ್ ದೀಪಾ ಮಲಿಕ್ ಅವರು ಟ್ವಿಟರ್‌ ಮೂಲಕ ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT