7

'ಪುಟ್ಟ ಗೌರಿ' ಸತ್ತೋದ್ಳಾ? ಸಾಮಾಜಿಕ ತಾಣದಲ್ಲಿ ಟ್ರೋಲ್ ಮಳೆ

Published:
Updated:
'ಪುಟ್ಟ ಗೌರಿ' ಸತ್ತೋದ್ಳಾ? ಸಾಮಾಜಿಕ ತಾಣದಲ್ಲಿ ಟ್ರೋಲ್ ಮಳೆ

ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ಪುಟ್ಟಗೌರಿ ಮದುವೆ'. ಈ ಧಾರಾವಾಹಿಯಲ್ಲೀಗ ನಡೆಯಬಾರದ್ದು ನಡೆದು ಹೋಗಿದೆ. ಅಂಥದ್ದೇನಾಯ್ತು ಎಂದು ಕೇಳ್ತೀರಾ?

ಪುಟ್ಟ ಗೌರಿ ಸತ್ತೋದ್ಳು ಕಣ್ರೀ...

ಕ್ಯಾನ್ಸರ್ ಬಾಧಿತ ಪುಟ್ಟ ಗೌರಿ ಮರಣದ ಸುದ್ದಿ 'ಪುಟ್ಟ ಗೌರಿ' ಅಭಿಮಾನಿಗಳಲ್ಲಿ  ಬೇಸರ ಮೂಡಿಸಿದರೆ, ಸಾಮಾಜಿಕ ತಾಣದಲ್ಲಿ ಪುಟ್ಟಗೌರಿ ಸಾವಿನ ಬಗ್ಗೆ ಟ್ರೋಲ್ ಮಾಡಲಾಗುತ್ತಿದೆ.

'ಪುಟ್ಟ ಗೌರಿ' ಧಾರಾವಾಹಿ ನೋಡಿದವರೂ, ನೋಡದೇ ಇದ್ದವರು ಕೂಡಾ 'ಪುಟ್ಟ ಗೌರಿ' ಬಗ್ಗೆ ಫೇಸ್‍ಬುಕ್‍ನಲ್ಲಿ ಸ್ಟೇಟಸ್‍ಗಳನ್ನು ಅಪ್‍ಡೇಟ್ ಮಾಡುತ್ತಿದ್ದು,  ಸಾಮಾಜಿಕ ತಾಣಗಳಲ್ಲಿ ಪುಟ್ಟ ಗೌರಿ ಟ್ರೆಂಡ್ ಆಗುತ್ತಿದೆ.

ಕೊನೆಗೂ ಪುಟ್ಟ ಗೌರಿ ಸತ್ತು ಹೋಗಿ ಬಿಟ್ಳು ಎಂಬ ಉದ್ಗಾರದೊಂದಿಗಿರುವ ಸ್ಟೇಟಸ್‍‍ಗಳಿಂದ ಹಿಡಿದು, ಪುಟ್ಟ ಗೌರಿ ಸಾವಿನ ನಂತರ ಪ್ರಸ್ತುತ ಧಾರಾವಾಹಿಯಲ್ಲಿ ಯಾವ ರೀತಿಯ ಬದಲಾವಣೆಗಳು ಸಾಧ್ಯವಿದೆ ಎಂಬುದರ ಬಗ್ಗೆಯೂ ಕೆಲವು ನೆಟಿಜನ್‍ಗಳು ಭವಿಷ್ಯ ನುಡಿದಿದ್ದಾರೆ.

ಐಪಿಎಲ್  ಕ್ರಿಕೆಟ್  ಆರಂಭವಾಗುತ್ತಿದ್ದಂತೆ ಪುಟ್ಟ ಗೌರಿ ಸಾವಿಗೀಡಾಗಿದ್ದು ಒಳ್ಳೇದೇ ಆಯ್ತು ಎಂದು ಹೇಳುವವರು ಕೆಲವರಾದರೆ, ಝೀ ಕನ್ನಡದಲ್ಲಿ ಈಗ ತಾನೇ ಆರಂಭವಾಗಿರುವ 'ಪತ್ತೇದಾರಿ ಪ್ರತಿಭಾ' ಧಾರಾವಾಹಿಯ ಪ್ರತಿಭಾ ಪುಟ್ಟ ಗೌರಿ ಸಾವಿನ ಬಗ್ಗೆ ತನಿಖೆ ನಡೆಸಲಿದ್ದಾರೆ ಎಂಬ ಟ್ರೋಲ್‍ಗಳೂ  ಹರಿದಾಡುತ್ತಿವೆ. 

ಸಾಮಾಜಿಕ ತಾಣದಲ್ಲಿ ಕಂಡು ಬಂದ ಟ್ರೋಲ್‍ಗಳು

ಸ್ಟೇಟಸ್, ಫೋಟೊದಲ್ಲಿಯೂ ಪುಟ್ಟ ಗೌರಿಯದ್ದೇ ಸುದ್ದಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry