ಬಾಕ್ಸಿಂಗ್‌: ಶ್ಯಾಮ್‌ ಕುಮಾರ್‌ಗೆ ಚಿನ್ನ

7

ಬಾಕ್ಸಿಂಗ್‌: ಶ್ಯಾಮ್‌ ಕುಮಾರ್‌ಗೆ ಚಿನ್ನ

Published:
Updated:
ಬಾಕ್ಸಿಂಗ್‌: ಶ್ಯಾಮ್‌ ಕುಮಾರ್‌ಗೆ ಚಿನ್ನ

ನವದೆಹಲಿ: ಭಾರತದ ಕೆ. ಶ್ಯಾಮ್‌ ಕುಮಾರ್ ಬ್ಯಾಂಕಾಕ್‌ನಲ್ಲಿ ನಡೆದ ಥಾಯ್ಲೆಂಡ್‌ ಅಂತರರಾಷ್ಟ್ರೀಯ ಬಾಕ್ಸಿಂಗ್ ಟೂರ್ನಿಯ 49 ಕೆ.ಜಿ. ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ್ದಾರೆ.ಇದೇ ಟೂರ್ನಿಯಲ್ಲಿ ಶ್ಯಾಮ್‌ ಎರಡು ವರ್ಷಗಳ ಹಿಂದೆಯೂ ಪದಕ ಗೆದ್ದಿದ್ದರು. ರಿಯೊ ಒಲಿಂಪಿಕ್ಸ್‌ನಲ್ಲಿ ಲೈಟ್ ಫ್ಲೈವೇಟ್‌ ವಿಭಾಗದಲ್ಲಿ ಚಿನ್ನದ ಪದಕ ಪಡೆದಿದ್ದ ಉಜ್ಬೇಕಿಸ್ತಾನದ ಹಸನ್‌ಬಾಯ್‌ ಡುಸ್ಟಮಟೋವ್ ಅವರು ಗಾಯದ ಸಮಸ್ಯೆಯಿಂದ ಬಳಲಿದ ಕಾರಣ ಭಾರತದ ಬಾಕ್ಸರ್‌ಗೆ ‘ಅದೃಷ್ಟ’ದ ಚಿನ್ನ ಲಭಿಸಿತು.64 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತದ ರೋಹಿತ್ ಟೋಕಸ್‌ ಸೆಮಿ ಫೈನಲ್‌ನಲ್ಲಿ ಸೋತು ಕಂಚು ಪಡೆದರು. ರೋಹಿತ್‌ 2015ರ  ಟೂರ್ನಿಯಲ್ಲಿಯೂ ಪದಕ ಪಡೆದಿದ್ದರು.ಈ ಬಾರಿ ಭಾರತ ತಂಡಕ್ಕೆ ಒಟ್ಟು ಎರಡು ಪದಕ ಗಳು ಬಂದವು. ಏಳು ಬಾಕ್ಸರ್‌ಗಳು ಪಾಲ್ಗೊಂಡಿದ್ದರೂ ಪ್ರಮುಖರೆಲ್ಲ  ಮೊದಲ ಸುತ್ತಿನಲ್ಲಿಯೇ ಸೋತು ಟೂರ್ನಿಯಿಂದ ಹೊರಬಿದ್ದಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry