ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾ.ಬಿ.ಆರ್‌.ಅಂಬೇಡ್ಕರ್‌ ಪ್ರಶಸ್ತಿಗೆ ಗುರುಪ್ರಸಾದ್ ಕೆರೆಗೋಡು ಆಯ್ಕೆ

ಆರಂಭವಾಗಲಿದೆ ಅಂಬೇಡ್ಕರ್ ವಸತಿ ಶಾಲೆ
Last Updated 12 ಏಪ್ರಿಲ್ 2017, 10:08 IST
ಅಕ್ಷರ ಗಾತ್ರ

ಬೆಂಗಳೂರು: ಬಾಬಾಸಾಹೇಬ್‌ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ 126ನೇ ಜನ್ಮದಿನದ ಅಂಗವಾಗಿ ನೀಡುವ ‘ಡಾ.ಬಿ.ಆರ್‌.ಅಂಬೇಡ್ಕರ್‌ ಪ್ರಶಸ್ತಿ 2017’ಕ್ಕೆ ಗುರುಪ್ರಸಾದ್ ಕೆರೆಗೋಡು ಅವರನ್ನು ಆಯ್ಕೆ ಮಾಡಲಾಗಿದೆ.

ಮೂರು ದಶಕಗಳಿಂದ ದಲಿತಪರ ಹೋರಾಟಗಳಲ್ಲಿ ನಿರತರಾಗಿರುವ ಗುರುಪ್ರಸಾದ್ ಕೆರೆಗೋಡು ಅವರು ಮೂಲತಃ ಮಂಡ್ಯದವರು.

ಪ್ರಶಸ್ತಿಯು ₹ 5 ಲಕ್ಷ ನಗದು ಹಾಗೂ ಚಿನ್ನದ ಪದಕವನ್ನು ಒಳಗೊಂಡಿದೆ.

* ‘ಅಂಬೇಡ್ಕರ್ ಪ್ರಶಸ್ತಿ ದೊರೆತಿರುವುದು ಜವಾಬ್ದಾರಿ ಹೆಚ್ಚಿಸಿದೆ. 38 ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಆರಂಭದಲ್ಲಿ ಇದ್ದಂತಹ ಬದ್ಧತೆ ಈಗ ಗೋಚರಿಸುತ್ತಿಲ್ಲ. ಹೋರಾಟವನ್ನು ಸರಿದಾರಿಗೆ ತರಬೇಕಾಗಿದೆ. ಜವಾಬ್ದಾರಿ ನಿಭಾಯಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.
- ಗುರುಪ್ರಸಾದ ಕೆರೆಗೋಡು

–––––––––

ಅಂಬೇಡ್ಕರ್ ವಸತಿ ಶಾಲೆ: ಅಂಬೇಡ್ಕರ್ ಅವರ ಜನ್ಮದಿನದ ಅಂಗವಾಗಿ ರಾಜ್ಯದ 125 ಹೋಬಳಿಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಅಂಬೇಡ್ಕರ್ ವಸತಿ ಶಾಲೆ ಆರಂಭಿಸಲಾಗುತ್ತದೆ.

6 ರಿಂದ 10ನೇ ತರಗತಿಯವರೆಗೆ ಕಲಿಸುವ ಅಂಬೇಡ್ಕರ್ ವಸತಿ ಶಾಲೆ ಮುಂದಿನ ಶೈಕ್ಷಣಿಕ ವರ್ಷದಿಂದ ಆರಂಭವಾಗಲಿದೆ ಎಂದು ಸಚಿವ ಆಂಜನೇಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT