ಆಫ್ಘನ್‌: ಸತ್ತವರ ಸಂಖ್ಯೆ 94ಕ್ಕೆ ಏರಿಕೆ

7

ಆಫ್ಘನ್‌: ಸತ್ತವರ ಸಂಖ್ಯೆ 94ಕ್ಕೆ ಏರಿಕೆ

Published:
Updated:

ಕಾಬೂಲ್‌: ಆಫ್ಘಾನಿಸ್ತಾನದ ನಂಗರ್‌ಹಾರ್‌ ಪ್ರಾಂತ್ಯದ ಅಚಿನ್‌ನಲ್ಲಿ ಐ.ಎಸ್‌ ಉಗ್ರರ ಅಡಗುದಾಣದ ಮೇಲೆ ಅಮೆರಿಕ ಗುರುವಾರ ನಡೆಸಿದ್ದ ಬಾಂಬ್‌ ದಾಳಿಯಲ್ಲಿ ಸತ್ತವರ ಸಂಖ್ಯೆ 94ಕ್ಕೆ ಏರಿದೆ.

 

‘ಬಲಿಯಾದವರಲ್ಲಿ ಯಾವುದೇ ನಾಗರಿಕರು ಸೇರಿಲ್ಲ’ ಎಂದು ಪ್ರಾಂತ್ಯದ ಗವರ್ನರ್‌ ಅವರ ವಕ್ತಾರ ಅತಾವುಲ್ಲಾ ಕೊಗ್ಯಾನಿ ಶನಿವಾರ ಹೇಳಿದ್ದಾರೆ.

 

‘ಐ.ಎಸ್‌ ಸಂಘಟನೆಯ ನಾಲ್ವರು ಕಮಾಂಡರ್‌ಗಳು ಕೂಡಾ ಸತ್ತವರಲ್ಲಿ ಸೇರಿದ್ದಾರೆ. ಮೃತದೇಹಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಮುಂದುವರಿದಿದೆ’ ಎಂದಿದ್ದಾರೆ.  ಅಮೆರಿಕ ಈ ದಾಳಿಗೆ ವಿಶ್ವದ ಎರಡನೇ ದೊಡ್ಡ ಸಾಂಪ್ರದಾಯಿಕ ಬಾಂಬ್‌ ಆಗಿರುವ ‘ಎಂಒಎಬಿ’ಯನ್ನು ಬಳಸಿತ್ತು. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry