ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಷ್ಪಕ್ಷಪಾತ ತನಿಖೆ ನಡೆಸಿ: ಕುಮಾರಸ್ವಾಮಿ

Last Updated 18 ಏಪ್ರಿಲ್ 2017, 7:17 IST
ಅಕ್ಷರ ಗಾತ್ರ

ಮಂಗಳೂರು: ‘ಅಹ್ಮದ್‌ ಖುರೇಶಿ ಮೇಲೆ ನಡೆದಿದೆ ಎನ್ನಲಾದ ಪೊಲೀಸ್‌ ದೌರ್ಜನ್ಯ ಕುರಿತು ಎಲ್ಲ ಮಾಹಿತಿಗಳನ್ನು ಸಂಗ್ರಹಿಸಿದ್ದೇನೆ. ಆದರೆ, ಪೊಲೀಸರ ಮಾಹಿತಿಗೂ, ಕುಟುಂಬದವರು ನೀಡು ತ್ತಿರುವ ವಿವರಗಳಿಗೂ ಸಾಮ್ಯತೆ ಇಲ್ಲ. ಇದರಲ್ಲಿ ಹಲವು ಅನುಮಾನಗಳಿವೆ. ಇದನ್ನು ನಿವಾರಿಸುವುದು ಸರ್ಕಾರದ ಜವಾಬ್ದಾರಿ. ಈ ಪ್ರಕರಣದ ಬಗ್ಗೆ ಸರ್ಕಾರ ನಿಷ್ಪಕ್ಷಪಾತ ತನಿಖೆ ನಡೆ ಸಬೇಕು’ ಎಂದು ಜೆಡಿಎಸ್‌ ರಾಜ್ಯ ಘಟ ಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಆಗ್ರಹಿಸಿದರು.

ನಗರದಲ್ಲಿ ಸೋಮವಾರ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ‘ಖುರೇಶಿ ಪ್ರಕರಣಕ್ಕೆ ಸಂಬಂಧಿ ಸಿದಂತೆ ಅವರ ಕುಟುಂಬದವರ ಜತೆ ಮಾತನಾಡಿದ್ದೇನೆ. ಪೊಲೀಸ್‌ ಅಧಿಕಾರಿ ಗಳಿಂದಲೂ ಮಾಹಿತಿ ಪಡೆದಿದ್ದೇನೆ. ಈ ಕುರಿತು ಸಮಗ್ರ ತನಿಖೆ ನಡೆಸುವ ಮೂಲಕ ಸತ್ಯಾಂಶವನ್ನು ಜನರಿಗೆ ತಿಳಿ ಸುವ ಕೆಲಸವನ್ನು ಸರ್ಕಾರ ಮಾಡಬೇಕು’ ಎಂದರು.

‘ಅಹ್ಮದ್‌ ಖುರೇಶಿಯನ್ನು ಮಾರ್ಚ್‌ 21 ರಂದು ನ್ಯಾಯಾಲಯದ ಆವರಣ ದಿಂದ ವಶಕ್ಕೆ ಪಡೆದಿರುವ ಪೊಲೀಸರು, 27ರವರೆಗೆ ನ್ಯಾಯಾಲಯಕ್ಕೆ ಏಕೆ ಹಾಜ ರುಪಡಿಸಲಿಲ್ಲ? ಗಾಯಗೊಂಡಿದ್ದ ಖುರೇ ಶಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ ಸಂದರ್ಭದಲ್ಲಿ, ಅಪಘಾತದಲ್ಲಿ ಗಾಯಗೊಂಡಿರುವುದಾಗಿ ವರದಿ ನೀಡ ಲಾಗಿದೆ. ಇದರರ್ಥ ಪೊಲೀಸ್‌ ಕಸ್ಟಡಿ ಯಲ್ಲಿದ್ದಾಗಲೇ ಅಪಘಾತವಾಗಿದೆಯೇ ಅಥವಾ ಅಂದು ಅಹ್ಮದ್‌ ಖುರೇಶಿ ಯನ್ನು ಬಿಡುಗಡೆ ಮಾಡಲಾಗಿತ್ತೇ ಎಂ ಬುದು ತಿಳಿಯುತ್ತಿಲ್ಲ. ಅಲ್ಲದೇ ಪೊಲೀ ಸರು ಹಾಕಿರುವ ಎಫ್‌ಐಆರ್‌ನಲ್ಲಿ ಅಹ್ಮದ್‌ ಖುರೇಶಿ ವಿರುದ್ಧ ಯಾವುದೇ ಗಂಭೀರ ಆರೋಪಗಳಿಲ್ಲ. ಇದೆಲ್ಲವನ್ನು ನೋಡಿದರೆ, ಕಾನೂನಿನ ಹೆಸರಿನಲ್ಲಿ ದೌರ್ಜನ್ಯ ನಡೆಸಲಾಗುತ್ತಿದೆಯೇ ಎಂಬ ಸಂಶಯ ಮೂಡುತ್ತದೆ’ ಎಂದು ಹೇಳಿದರು.

‘ಕುಟುಂಬದವರ ಪ್ರಕಾರ, ಅಹ್ಮದ್‌ ಖುರೇಶಿಯನ್ನು ಬಂಧಿಸಿದಾಗಲೇ, ಕಿಡ್ನಿ ಸಮಸ್ಯೆ ಇರುವುದನ್ನು ತಿಳಿಸಲಾಗಿತ್ತು. ಆದರೆ, ಪೊಲೀಸರು ಅದನ್ನು ಏಕೆ ದಾಖ ಲಿಸಿಲ್ಲ’ ಎಂದು ಪ್ರಶ್ನಿಸಿದ ಅವರು, ‘ಇಂತಹ ಹಲವಾರು ಗೊಂದಲಗಳಿದ್ದು, ಅವೆಲ್ಲವನ್ನೂ ಪರಿಹರಿಸಲು ನಿಷ್ಪಕ್ಷಪಾತ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.

ಬರ ನಿರ್ವಹಣೆಯಲ್ಲಿ ವಿಫಲ: ‘ರಾಜ್ಯದಲ್ಲಿ ತೀವ್ರ ಬರದ ಸ್ಥಿತಿ ಇದೆ. ಕುಡಿ ಯುವ ನೀರು, ಜಾನುವಾರುಗಳಿಗೆ ಮೇವು ಇಲ್ಲದಾಗಿದೆ. ಇಂತಹ ಪರಿಸ್ಥಿ ತಿಯಲ್ಲಿ ರಾಜ್ಯದ ಜನರ ನೆರವಿಗೆ ಧಾವಿಸ ಬೇಕಿದ್ದ ಇಡೀ ಸರ್ಕಾರ ಉಪಚುನಾವಣೆ ಪ್ರಚಾರದಲ್ಲಿ ಮುಳುಗಿತ್ತು’ ಎಂದು ಆರೋಪಿಸಿದರು.‘ಉಪಚುನಾವಣೆಯನ್ನು ಪ್ರತಿಷ್ಠೆ ಯಾಗಿ ಮಾಡಿಕೊಂಡ ಸರ್ಕಾರ, ಇಡೀ ಸಚಿವ ಸಂಪುಟವನ್ನೇ ಚುನಾವಣೆಗೆ ನಿಯೋಜಿಸಿತ್ತು. ಇದೀಗ ಮತದಾರರು ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದಾರೆ. ಆದರೂ, ಎಚ್ಚೆತ್ತುಕೊಳ್ಳದ ಸರ್ಕಾರ, ವರಿಷ್ಠರಿಗೆ ಸಾಧನೆ ವಿವರಿಸುವ ನೆಪದಲ್ಲಿ ದೆಹಲಿ ಯಾತ್ರೆ ಮಾಡಲಾಗುತ್ತಿದೆ’ ಎಂದು ಟೀಕಿಸಿದರು.

‘ಬರದಿಂದಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅವರಿಗೆ ಆತ್ಮ ಸ್ಥೈರ್ಯ ತುಂಬುವ ಕೆಲಸವನ್ನು ಸರ್ಕಾರ ವಾಗಲಿ, ಸಚಿವರಾಗಲಿ ಮಾಡುತ್ತಿಲ್ಲ. ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ₹1,600 ಕೋಟಿ ಬರ ಪರಿಹಾರವನ್ನು ರೈತರಿಗೆ ವಿತರಿಸುವ ಕೆಲಸವನ್ನು ಈಗಷ್ಟೇ ಆರಂಭಿಸಲಾಗಿದೆ. ರಾಜ್ಯದಲ್ಲಿಬರದ ಸ್ಥಿತಿ ನಿರ್ವಹಣೆ, ಕಾನೂನು ಸುವ್ಯ ವಸ್ಥೆ ಪಾಲನೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ’ ಎಂದು ದೂರಿದರು.ಶಾಸಕ ಬಿ.ಬಿ. ನಿಂಗಯ್ಯ, ಮುಖಂಡ ರಾದ ಕೆ. ಅಮರನಾಥ ಶೆಟ್ಟಿ, ಬಿ.ಎಂ. ಫಾರೂಕ್‌, ಹೈದರ್‌ ಪರ್ತಿಪಾಡಿ, ಎಂ.ಬಿ. ಸದಾಶಿವ, ವಿಟ್ಲ ಮಹಮ್ಮದ್‌ ಕುಂಞಿ, ಅಕ್ಷಿತ್‌ ಸುವರ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT