ಅರ್ಧ ತೂಕ ಕಳೆದುಕೊಂಡ ‘ಭಾರಿ ತೂಕದ ಮಹಿಳೆ’

7

ಅರ್ಧ ತೂಕ ಕಳೆದುಕೊಂಡ ‘ಭಾರಿ ತೂಕದ ಮಹಿಳೆ’

Published:
Updated:
ಅರ್ಧ ತೂಕ ಕಳೆದುಕೊಂಡ ‘ಭಾರಿ ತೂಕದ ಮಹಿಳೆ’

ಮುಂಬೈ: ಬೊಜ್ಜು ಕರಗಿಸುವ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ವಿಶ್ವದ ಭಾರಿ ತೂಕದ ಮಹಿಳೆ ಈಜಿಪ್ಟ್‌ನ ಎಮಾನ್‌ ಅಹ್ಮದ್‌ ಅಬ್ದ್‌ -ಎಲ್‌- ಅತಿ (36) ಅವರು ತಮ್ಮ ದೇಹದ ಅರ್ಧದಷ್ಟು ತೂಕ ಕಳೆದುಕೊಂಡಿದ್ದಾರೆ.

‘ಎಮಾನ್‌ ಅವರಿಗೆ ಮಾಡಿದ್ದ ಶಸ್ತ್ರಚಿಕಿತ್ಸೆ ಹೆಚ್ಚು ಸವಾಲಿನದ್ದಾಗಿತ್ತು. ಈ ಶಸ್ತ್ರಚಿಕಿತ್ಸೆ ಯಶಸ್ವಿಯಾಗುವ ಸಾಧ್ಯತೆ ಶೇಕಡ 1ರಷ್ಟು ಮಾತ್ರ ಇತ್ತು. ಎಮಾನ್‌ ಅವರು ಪವಾಡದ ರೀತಿಯಲ್ಲಿ ಚೇತರಿಸಿಕೊಂಡಿದ್ದಾರೆ’ ಎಂದು ಮುಂಬೈನ ಸೈಫಿ ಆಸ್ಪತ್ರೆಯ ವೈದ್ಯ ಡಾ. ಮುಫಾಝಲ್‌ ಲಕ್ಡವಾಲಾ ತಿಳಿಸಿದ್ದಾರೆ.

ಸುಮಾರು 500 ಕೆ.ಜಿ. ತೂಕವಿದ್ದ ಎಮಾನ್‌ ಫೆಬ್ರುವರಿ ತಿಂಗಳಲ್ಲಿ ಶಸ್ತ್ರಚಿಕಿತ್ಸೆಗೆಂದು ಮುಂಬೈಗೆ ಬಂದಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry