ಶುಕ್ರವಾರ, 29 ಮಾರ್ಚ್ 2024
ADVERTISEMENT
ಈ ಕ್ಷಣ :
ADVERTISEMENT
ADVERTISEMENT
'ಬದ್‍ಲಾಪುರ್‍‍'ನಿಂದ ಬಂತು ಹೆಬ್ಬುಲಿ ಚಿತ್ರದ 'ದೇವರೇ' ಹಾಡು
Last Updated 25 ಏಪ್ರಿಲ್ 2017, 10:06 IST
ಅಕ್ಷರ ಗಾತ್ರ
'ಬ್ಯೂಟಿಫುಲ್ ಮನಸು'ಗಳು ಚಿತ್ರದ 'ನಮ್ಮೂರಲ್ಲಿ ಚಳಿಗಾಲದಲ್ಲಿ' ಹಾಡು ಬರ್ಟೋಲ್ಟ್ ಬ್ರೆಕ್ಟ್ ಅವರ ಪುಂಟಿಲಾ ನಾಟಕದಲ್ಲಿ ಬಳಸಲಾದ 'ನಮ್ಮೂರಲ್ಲಿ ಮೇ ತಿಂಗಳಲ್ಲಿ ಮುಂಜಾವು ಮೂಡೋದೇ ಚಂದ' ಹಾಡಿನಿಂದ ಸ್ಫೂರ್ತಿ ಪಡೆದದ್ದಾಗಿತ್ತು. ಇದೊಂದೇ ಹಾಡು ಮಾತ್ರವಲ್ಲ, ಕನ್ನಡ ಚಿತ್ರರಂಗದಲ್ಲಿ ಹಲವಾರು ಸಿನಿಮಾಗಳ ಹಾಡುಗಳು ಪರಭಾಷಾ ಚಿತ್ರದ ಹಾಡುಗಳಿಂದ ಸ್ಫೂರ್ತಿ ಪಡೆದು ಹೊಸ ರೂಪದಲ್ಲಿ ಕಾಣಿಸಿಕೊಂಡಿವೆ.
ಕೆಲವು ಸಂಗೀತಕಾರರು ಪರಭಾಷೆಯ ಹಾಡುಗಳನ್ನು ಯಥಾವತ್ತಾಗಿ ನಕಲಿಸಿದ್ದೂ ಇದೆ. ಅಂದ ಹಾಗೆ ಕನ್ನಡ ಚಿತ್ರರಂಗದಲ್ಲಿರುವವರು ಮಾತ್ರ ಪರಭಾಷೆಯಿಂದ ಸ್ಫೂರ್ತಿ ಪಡೆದು ಹಾಡುಗಳ ಸಂಯೋಜನೆ ಮಾಡುತ್ತಿದ್ದಾರೆ ಎಂದಲ್ಲ. ಇತರ ಭಾಷೆಯ ಸಂಗೀತಕಾರರೂ ಅನ್ಯ ಭಾಷೆಯ ಸಂಗೀತಗಳನ್ನು ತಮ್ಮದಾಗಿಸಿಕೊಂಡ ಸಾಕಷ್ಟು ಉದಾಹರಣೆಗಳಿವೆ. ಹೀಗಿರುವಾಗ ಕನ್ನಡ ಚಿತ್ರರಂಗದಲ್ಲಿ ಇತರ ಭಾಷೆಯಿಂದ ಸ್ಫೂರ್ತಿ ಪಡೆದುಕೊಂಡು ಹುಟ್ಟಿದ ಹಾಡುಗಳ ಬಗ್ಗೆ, ಸಾಮ್ಯತೆಗಳ ಬಗ್ಗೆ ಬೆಳಕು ಚೆಲ್ಲುವ ಕಾರ್ಯವನ್ನು ನಾವು ಇಲ್ಲಿ ಮಾಡುತ್ತಿದ್ದೇವೆ.
ಸುದೀಪ್ ಅಭಿನಯದ ಹೆಬ್ಬುಲಿ ಬಾಕ್ಸ್ ಆಫೀಸಿನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಈ ಚಿತ್ರದಲ್ಲಿ ದೇವರೇ ಎಂಬ ಹಾಡೊಂದಿದೆ. ಅರ್ಮಾನ್ ಮಲಿಕ್ ಮತ್ತು ರಾಹುಲ್ ನಂಬಿಯಾರ್ ಹಾಡಿದ ಈ ಹಾಡಿಗೆ ಸ್ಫೂರ್ತಿ ಸಿಕ್ಕಿದ್ದು ಬಾಲಿವುಡ್‍ನಿಂದ!
ವರುಣ್ ಧವನ್, ಯಾಮಿ ಗೌತಂ ನಟಿಸಿದ ಬದ್‍ಲಾಪುರ್ ಎಂಬ ಹಿಂದಿ ಚಿತ್ರದ 'ಜುದಾಯಿ' ಹಾಡು ಹೆಬ್ಬುಲಿ ಚಿತ್ರದಲ್ಲಿ 'ದೇವರೇ' ಹಾಡಾಗಿದೆ.
ಚಿತ್ರ: ಹೆಬ್ಬುಲಿ
ಹಾಡು: ದೇವರೇ
ಗಾಯಕರು: ಅರ್ಮಾನ್ ಮಲಿಕ್, ರಾಹುಲ್ ನಂಬಿಯಾರ್
ಸಂಗೀತ: ಅರ್ಜುನ್ ಜನ್ಯ
ಸಾಮ್ಯತೆ
ಯಾವುದಾದರೂ ಹಾಡು ಕೇಳುವಾಗ, ಈ ಹಾಡನ್ನು ಬೇರೆ ಭಾಷೆಯಲ್ಲಿ ಕೇಳಿದಂತೆ ಇದೆಯಲ್ಲಾ ಅಥವಾ ಹಾಡಿನ ಸಂಗೀತ ಇನ್ಯಾವುದೋ ಹಾಡಿನ ಸಂಗೀತವನ್ನು ಹೋಲುತ್ತಿದ್ದರೆ ಅಂಥಾ ಹಾಡುಗಳನ್ನು ನಮ್ಮ ಗಮನಕ್ಕೆ ತನ್ನಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT