4

ತಮಿಳಿನ ಬಿಗ್‌ಬಾಸ್‌ಗೆ ಕಮಲ್‌ ಹಾಸನ್‌ ಸಾರಥ್ಯ

Published:
Updated:
ತಮಿಳಿನ ಬಿಗ್‌ಬಾಸ್‌ಗೆ ಕಮಲ್‌ ಹಾಸನ್‌ ಸಾರಥ್ಯ

ಚೆನ್ನೈ: ಬಿಗ್‌ಬಾಸ್‌ ರಿಯಾಲಿಟಿ ಷೋನ ತಮಿಳು ಆವೃತ್ತಿಯನ್ನು ನಡೆಸಿಕೊಡಲು ನಟ ಕಮಲ್‌ ಹಾಸನ್‌ ಒಪ್ಪಿಕೊಂಡಿದ್ದಾರೆ.

ದಿ ಕ್ವಿಂಟ್‌’ ಸುದ್ದಿತಾಣಕ್ಕೆ ನೀಡಿರುವ ಸಂದರ್ಶನದಲ್ಲಿ ಕಮಲ್‌ ಈ ವಿಷಯ ಬಹಿರಂಗಪಡಿಸಿದ್ದಾರೆ.

‘ಈವರೆಗೆ ನಾನು ಕಲಾವಿದನಾಗಿ ಜನರನ್ನು ರಂಜಿಸಲು ಬೇರೆ ಬೇರೆ ರೀತಿಯಲ್ಲಿ ಪ್ರಯತ್ನಿಸಿದ್ದೇನೆ. ಆದರೆ, ಟಿ.ವಿ. ರಿಯಾಲಿಟಿ ಷೋ ನಡೆಸಿಕೊಟ್ಟಿಲ್ಲ. ರಿಯಾಲಿಟಿ ಷೋದ ಅನುಭವ ಹೇಗಿರುತ್ತದೆ ಎಂದು ತಿಳಿಯಲು ಷೋ ಒಪ್ಪಿಕೊಂಡಿದ್ದೇನೆ’ ಎಂದು ಕಮಲ್‌ ಹೇಳಿದ್ದಾರೆ.

‘ಸಲ್ಮಾನ್‌ ಖಾನ್‌ ಬಿಗ್‌ಬಾಸ್‌ ಷೋ ಅನ್ನು ಚೆನ್ನಾಗಿ ನಡೆಸಿಕೊಡುತ್ತಿದ್ದಾರೆ. ಷೋನಲ್ಲಿ ಸ್ಪರ್ಧಾಳುಗಳನ್ನು ಅವರು ಬೆಸೆಯುವ ರೀತಿ ಅದ್ಭುತ’ ಎಂದಿದ್ದಾರೆ ಕಮಲ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry