ಮಂಗಳವಾರ, ಮೇ 17, 2022
29 °C

ನಿರ್ದೇಶಕ ಕೆ.ವಿಶ್ವನಾಥ್‌ಗೆ ಫಾಲ್ಕೆ ಗೌರವ

ಪಿಟಿಐ Updated:

ಅಕ್ಷರ ಗಾತ್ರ : | |

ನಿರ್ದೇಶಕ ಕೆ.ವಿಶ್ವನಾಥ್‌ಗೆ ಫಾಲ್ಕೆ ಗೌರವ

ನವದೆಹಲಿ: ‘ಶಂಕರಾಭರಣಂ’, ‘ಸಾಗರ ಸಂಗಮಂ’, ‘ಸ್ವಾತಿ ಮುತ್ಯಂ’ ಮುಂತಾದ ಸಂಗೀತಮಯ ಸಿನಿಮಾಗಳ ಮೂಲಕ ಪ್ರಸಿದ್ಧರಾದ ತೆಲುಗಿನ ಹಿರಿಯ ನಿರ್ದೇಶಕ  ಕಾಶಿನಾಧುನಿ ವಿಶ್ವನಾಥ್‌ ಅವರಿಗೆ 2016ನೇ ಸಾಲಿನ ಪ್ರತಿಷ್ಠಿತ 48ನೇ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಗೌರವ ಒಲಿದಿದೆ.

ತೆಲುಗು, ಹಿಂದಿ ಮತ್ತು ಮಲಯಾಳಂ ಚಿತ್ರಗಳನ್ನು ನಿರ್ದೇಶಿಸಿದ್ದ ವಿಶ್ವನಾಥ್‌ (87) ಅವರು, ಭಾರತೀಯ ಚಿತ್ರರಂಗಕ್ಕೆ ನೀಡಿದ ಗಣನೀಯ ಕೊಡುಗೆಯನ್ನು ಪರಿಗಣಿಸಿ ಅವರನ್ನು ಚಿತ್ರರಂಗದ ಅತ್ಯುನ್ನತ ಗೌರವಕ್ಕೆ ಆಯ್ಕೆ ಮಾಡಲಾಗಿದೆ.

ಪ್ರಶಸ್ತಿಯು ಸ್ವರ್ಣ ಕಮಲ, ₹10 ಲಕ್ಷ ನಗದು  ಒಳಗೊಂಡಿದೆ. ಮೇ 3ರಂದು  ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ತೆಲುಗಿನಲ್ಲಿ 50 ಚಿತ್ರಗಳನ್ನು ನಿರ್ದೇಶಿಸಿರುವ ಅವರು, 10ಕ್ಕೂ ಅಧಿಕ ಹಿಂದಿ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ನಟನೆಯನ್ನೂ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.